Advertisement
ಸೂರ್ಯೋದಯಕ್ಕೆ ಏಳುತ್ತೇವೆ. ಮಧ್ಯಾಹ್ನಕ್ಕೆ ಉಣ್ಣುತ್ತೇವೆ. ಮತ್ತೆ ರಾತ್ರಿ ಉಂಡು ಮಲಗುತ್ತೇವೆ. ಇವೆಲ್ಲವುಗಳ ನಡುವೆ ಬದುಕಿಗಾಗಿ ದುಡಿಯುತ್ತೇವೆ. ಇದು ನಿತ್ಯದ ಕಾಯಕ. ಇದರಲ್ಲಿ ತೃಪ್ತಿ ಉಂಟೇ? ಈ ತೃಪ್ತಿ ಎಂಬುದು ಅಷ್ಟಕ್ಕೇ ಸಾಕು ಅನಿಸಲಿಲ್ಲ. ಮತ್ತೂಂದು ಸುಖದ ಹುಡುಕಾಟ, ಅದಕ್ಕಾಗಿ ಹೋರಾಟ. ಪ್ರತಿಫಲವಾಗಿ ದಕ್ಕುವುದು ತೃಪ್ತಿ ಅಥವಾ ಅತೃಪ್ತಿ. ಇನ್ನು ಹೆಚ್ಚಿನ ಸಂದರ್ಭ ಸಂದಿಗ್ಧ. ಸುಖವೂ ಇಲ್ಲ; ದುಃಖವೂ ಇಲ್ಲದ ಸ್ಥಿತಿ. ಯಾಕೆ ಹೀಗೆ? ಕಾರಣ ಪರವಶತನ. ಮೋಹದೊಳಗೆ ಬಂಧಿಸಲ್ಪಡುವುದು.
Related Articles
ಜಗತ್ತು ದುಂಡಗಿರುವ ಕಾರಣಕ್ಕೋ ಏನೋ ಎಷ್ಟೋ ಸನ್ನಿವೇಶಗಳು ನಮ್ಮ ಬದುಕಿನಲ್ಲಿ ಪದೇಪದೇ ಘಟಿಸುತ್ತಲೇ ಇರುತ್ತವೆ. ಅರ್ಥ ಇಷ್ಟೆ, ಎಲ್ಲಿಂದ ಹೊರಡುತ್ತೇವೆಯೋ ಕೊನೆಗೆ ಅಲ್ಲಿಗೇ ಬಂದು ನಿಲ್ಲುತ್ತೇವೆ. ಬದುಕು ಎಂಬುದು ವೃತ್ತದೊಳಗೆ ಸುತ್ತು ಬಂದಂತೆ. ಹಾಗಾಗಿಯೇ ನೋವು-ನಲಿವು, ಸುಖ-ದುಃಖ, ಗೆಲುವು-ಸೋಲು ಒಂದರ ಹಿಂದೆ ಒಂದರಂತೆ ಇದಿರಾಗುತ್ತಲೇ ಇರುತ್ತವೆ.
Advertisement
ಏನೇ ಆದರೂ ನಾವು ಬಯಸುವುದು ಅತ್ಯುತ್ತಮ ಬದುಕನ್ನು, ಸುಂದರವಾದ ಬದುಕನ್ನು. ಇದರ ಅನ್ವೇಷಣೆಯಲ್ಲಿ ತೊಡಗಿದಾಗ ಸುಂದರವಾದ ಬದುಕಿಗೆ ದಾರಿಯಾವುದು? ಎಂಬುದಕ್ಕೆ ನಮ್ಮೆದುರಿಗೆ ಇರುವ ಜಗತ್ತಿನÇÉೇ ಉತ್ತರವಿದೆ ಎನ್ನುತ್ತದೆ ಶ್ರೀಮದ್ಭಾಗವತ. ಇದು ಬದುಕಿನ ತಂತ್ರವನ್ನು, ಸುತ್ತಮುತ್ತ ಇರುವ ದೃಷ್ಟಾಂತಗಳನ್ನು ನಮ್ಮ ಇದಿರಿಗೆ ಇಟ್ಟು ಕಲಿಸಿ ಕೊಡುತ್ತದೆ. ಜೇನು ತೆಗೆಯುವಾತ ಜೇನನ್ನು ಸಂಗ್ರಹಿಸುತ್ತ ಹೋಗುತ್ತಾನೆ. ಇವನ ಬಳಿ ಜೇನಿದೆ ಎಂಬುದನ್ನು ತಿಳಿದುಕೊಂಡ ಜನರು ಉಪಾಯವಾಗಿ ಇವನಿಂದ ತೆಗೆದುಕೊಳ್ಳುತ್ತಾರೆ. ಕೊನೆಯಲ್ಲಿ ಈ ಜೇನುತೆಗೆಯುವಾತ ಜೇನಿನ ಉಪಭೋಗದಿಂದ ವಂಚಿತನಾಗುತ್ತಾನೆ. ಇದೇ ರೀತಿ, ಲೋಭಿಯಾದ ಮನುಷ್ಯನು ತನ್ನ ಲೋಭಬುದ್ಧಿಯಿಂದ ಕೂಡಿಟ್ಟ ಧನವನ್ನು ಯಾರಿಗೂ ದಾನವನ್ನೂ ಮಾಡುವುದಿಲ್ಲ. ತಾನೂ ಅದನ್ನು ಉಪಭೋಗಿಸುವುದಿಲ್ಲ. ಅವನು ಸಂಗ್ರಹಿಸಿಟ್ಟ ಸಂಪತ್ತನ್ನು ಆಮೇಲೆ ಬೇರೇ ಯಾರೋ
ಭೋಗಿಸುತ್ತಾರೆ. ಇದರಿಂದಾಗಿಯೇ “ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ’ ಎಂಬ ಮಾತು ರೂಢಿಗೆ ಬಂತು. ಇನ್ನೂ ಒಂದು ಒಳಾರ್ಥ ಇದರಲ್ಲಿದೆ. ಜೇನು ಎಂಬುದು ತುಂಬಾ ರುಚಿಯುಳ್ಳದ್ದು. ಅದರೆ ಅದನ್ನು ಹೊಟ್ಟೆ ತುಂಬುವಷ್ಟು ತಿನ್ನಲಾಗದು. ಹಾಗೇನಾದರೂ ತಿಂದದ್ದೇ ಆದರೆ ರುಚಿಯೂ ಕೆಡುತ್ತದೆ; ಆರೋಗ್ಯವೂ ಕೆಡುತ್ತದೆ. ಹೀಗೆ ಹಣವೂ. ಧನ ಸಂಗ್ರಹ ಅಗತ್ಯಕ್ಕಿಂತ ಹೆಚ್ಚಿ¨ªಾಗ- ಒಂದೋ ನಮ್ಮ ಬಳಕೆಗೆ ಸಿಗದೆ, ಪರರ ಪಾಲಾಗುತ್ತದೆ ಅಥವಾ ನಾವು ಬಳಸಿದರೂ ಸದ್ಭಳಕೆಯಂತೂ ಆಗದು. ಏಕೆಂದರೆ, ಲೊಭದ ಬುದ್ಧಿಯಿಂದ ಹಣ ದಾನಕ್ಕೆ ವಿನಿಯೋಗವಾಗದೆ ಕೇವಲ ಐಷಾರಾಮಕ್ಕಷ್ಟೆ ಬಳಕೆಯಾಗಿ, ಸ್ವಪ್ರತಿಷ್ಠೆಗೆ ಬಳಕೆಯಾಗಿ ಅದರಿಂದ ಸಮಾಜಕ್ಕೆ ತೊಂದರೆಯೇ ಉಂಟಾಗುತ್ತದೆ.
ಬರಿಗೈಯಲ್ಲಿ ಹುಟ್ಟಿ ಬರುವ ನಾವು ಅಗತ್ಯವಿರುವಷ್ಟೇ ಧನವನ್ನು ಸಂಗ್ರಹಿಸಬೇಕು ಮತ್ತು ಮಿಕ್ಕಿದ್ದನ್ನು ದಾನ ರೂಪದಲ್ಲಿ ಹಂಚಬೇಕು. ಸಂಪತ್ತಿನ ಸಂಗ್ರಹದಿಂದ ಕಾಣುವ ಶ್ರೀಮಂತಿಕೆ ಎಂಬುದು ಹೆಸರಿಗಷ್ಟೆ. ನಿಜವಾದ ಶ್ರೀಮಂತಿಕೆ ಇರುವುದು ಕೂಡಿಡುವುದರಲ್ಲಲ್ಲ; ಕೊಡುವುದರಲ್ಲಿ. ಹಾಗಾಗಿ ಯಾವುದೂ ಅಗತ್ಯಕ್ಕಿಂತ ಹೆಚ್ಚು ಸಂಗ್ರಹವಾಗದೆ, ಸಮಾಜದಲ್ಲಿ ಸಮನಾಗಿ ಹಂಚಲ್ಪಡಬೇಕೆಂದರೆ ಈ ತಿಳುವಳಿಕೆ ಎಲ್ಲರಲ್ಲಿಯೂ ಮೂಡಬೇಕು.
..ಮುಂದುವರಿಯುವುದು.
ವಿಷ್ಣುಭಟ್ ಹೊಸ್ಮನೆ