Advertisement
ಹೊಸ ಮಾದರಿಯ ಟಾಪ್ ಇದೇನಪ್ಪ ಉದ್ದ-ಗಿಡ್ಡ ಡ್ರೆಸ್ ಎಂದು ಆಶ್ಚರ್ಯಗೊಳ್ಳಬೇಡಿ. ಲೇಡೀಸ್ ಫ್ಯಾಶನ್ ಪ್ರಪಂಚದಲ್ಲಿ ಇದೀಗ ಹೊಸ ಮಾದರಿಯ ಬಟ್ಟೆ. ಇದೂ ಕುರ್ತಾ ಟಾಪ್. ಆದರೆ ಮಾಮೂಲಿ ಕುರ್ತಾಗಳಂತೆ ಸಮಾನಾಂತರ ಅಳತೆಯನ್ನು ಹೊಂದಿಲ್ಲ. ಬದಲಾಗಿ ಮುಂಭಾಗದಲ್ಲಿ ಮೊಣಕಾಲಿನವರೆಗೆ ಬಟ್ಟೆ ಇದ್ದರೆ, ಹಿಂಭಾಗದಲ್ಲಿ ಮೊಣ ಕಾಲಿನಿಂದ ಕೆಳಗಿನವರೆಗೆ ಬಟ್ಟೆಯನ್ನು ಹೊಲಿಯಲಾಗಿರುತ್ತದೆ. ಹಿಂಭಾಗ ತೀರಾ ಉದ್ದವಿದ್ದು, ಮುಂದಿನ ಭಾಗ ಕಡಿಮೆ ಉದ್ದ ಹೊಂದಿರುವುದರಿಂದ ಜೀನ್ಸ್‌ನೊಂದಿಗೆ ಈ ಟಾಪ್‌ನ್ನು ಧರಿಸಿದರೆ ಸೌಂದರ್ಯ ಇಮ್ಮಡಿಸುತ್ತದೆ.
ವಿಶೇಷವೆಂದರೆ ಈ ಟಾಪ್ ಮಾದರಿಯಲ್ಲಿ ಶರ್ಟ್ ಕೂಡಾ ಲಭ್ಯವಿದೆ. ಮಾಮೂಲಿ ಶರ್ಟ್‌ನಂತೆಯೇ ಆದರೆ ಶರ್ಟ್‌ನ ಮುಂದಿನ ಭಾಗ ಸಣ್ಣದಾಗಿದ್ದು, ಹಿಂಭಾಗ ಉದ್ದವಿರುತ್ತದೆ. ಒಮ್ಮೊಮ್ಮೆ ಶರ್ಟ್‌ನ ಹಿಂದಿನ ಭಾಗ ಮೊಣಕಾಲಿನವರೆಗೆ ತಾಗುವಷ್ಟು ಉದ್ದವಿದ್ದು, ಇದು ನೋಡಲು ಆಕರ್ಷಕವಾಗಿ ಕಾಣುತ್ತದೆ. ಫುಲ್ ಲೆಗ್ ಜೀನ್ಸ್ ನೊಂದಿಗೆ ಈ ಶರ್ಟ್ ಧರಿಸಿದರೆ ಹೆಚ್ಚು ಒಪ್ಪುತ್ತದೆ. ಚೆಕ್ಸ್, ಪ್ಲೈನ್, ವಿಭಿನ್ನ ಬಹು ಬಣ್ಣಗಳನ್ನು ಹೊಂದಿರುವ ಶರ್ಟ್ ಗಳೂ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ.
Related Articles
ಮಾರುಕಟ್ಟೆಯಲ್ಲಿ ಎಲ್ಲ ಹೊಸ ವಸ್ತಗಳೂ ಫ್ಯಾಷನ್ ಪ್ರಿಯರಿಗೆಂದೇ ಆಗಮಿಸಿರುತ್ತವೆ. ಆದರೆ ಹೊಸ ಫ್ಯಾಷನ್ ಎಂದುಕೊಂಡು ಅದನ್ನು ಎಲ್ಲ ಕಡೆಗೆ ಬೇಕಾಬಿಟ್ಟಿ ಧರಿಸಿಕೊಂಡು ಹೋಗಲಾಗುವುದಿಲ್ಲ. ಪ್ರಮುಖವಾಗಿ ಕಾಲೇಜಿಗೆ ತೆರಳುವಾಗ, ಉದ್ಯೋಗಕ್ಕೆ ಹೋಗುವಾಗೆಲ್ಲ ಈ ಫ್ಯಾಶನ್ ಡ್ರೆಸ್‌ಗಳನ್ನು ಧರಿಸಲಾಗದು. ಅಂತೆಯೇ ಈ ಡ್ರೆಸ್ ಕೂಡಾ. ಕೆಲಸದ ಸ್ಥಳ ಮತ್ತು ಕಾಲೇಜಿನ ವಾತಾವರಣಕ್ಕೆ ಈ ಡ್ರೆಸ್ ಹೊಂದಿಕೆಯಾಗದಿರುವುದರಿಂದ ಧರಿಸದಿರುವುದೇ ಉತ್ತಮ. ಆದರೆ ಶಾಪಿಂಗ್‌ಗೆ ಹೋಗುವಾಗ, ಸಿನೆಮಾಕ್ಕೆ ಹೋಗುವಾಗ ಅಥವಾ ಪಿಕ್‌ನಿಕ್, ಪ್ರವಾಸ, ಪಾರ್ಟಿ ಮುಂತಾದೆಡೆ ಹೋಗುವಾಗ ಧರಿಸಲು ಅತ್ಯಂತ ಸೂಕ್ತ.
Advertisement
ಇದನ್ನೂ ಓದಿ:ರೆಗ್ಯುಲರ್ ಟೀ ಬದಲು ಇದನ್ನು ಕುಡಿದು ನೋಡಿ
ಹೊಲಿದು ಕೊಡುವ ವ್ಯವಸ್ಥೆಇಂತಹ ಟಾಪ್ ಗಳನ್ನು ಟೈಲರಿಂಗ್ ಶಾಪ್ ಗಳಲ್ಲಿ ಬೇಕಾದ ರೀತಿಯಲ್ಲಿ ಹೊಲಿದು ಕೊಡುವ ವ್ಯವಸ್ಥೆಯೂ ಇದೆ. ಆದರೆ ಟಾಪ್ ಗಳನ್ನು ಸ್ಟಿಚ್ ಮಾಡಿ ಧರಿಸಿದರೂ, ಶರ್ಟ್‌ಗಳಲ್ಲಿ ರೆಡಿಮೇಡ್ ಶರ್ಟ್‌ಗಳೇ ಸೂಕ್ತ. ಕೇವಲ ಕಪ್ಪು, ಬಿಳುಪು, ನೀಲಿ ಬಣ್ಣದ ಜೀನ್ಸ್‌ಗಳ ಬದಲು ಪ್ರಸ್ತುತ ಕಲರ್‌ಫುಲ್ ಜೀನ್ಸ್ ಗಳು ಬಂದಿರುವುದರಿಂದ ಅಂತಹ ಜೀನ್ಸ್ ಪ್ಯಾಂಟ್‌ಗಳಿಗೆ ಈ ಟಾಪ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.