Advertisement

ಲಾಂಗ್‌ ಬದಿಗಿಟ್ಟ ಸಂತೋಷ್‌ … 

04:10 PM Apr 06, 2018 | |

ಸತತವಾಗಿ ಆ್ಯಕ್ಷನ್‌ ಸಿನಿಮಾಗಳನ್ನು ಮಾಡಿಕೊಂಡು ಬರುತ್ತಿದ್ದ ಸಂತೋಷ್‌ಗೆ ಬೇರೇನೋ ಪ್ರಯತ್ನಿಸಬೇಕೆಂಬ ಮನಸ್ಸಾಗಿತ್ತಂತೆ. ಆ ನಿಟ್ಟಿನಲ್ಲಿ ಅವರು ಎದುರು ನೋಡುತ್ತಿದ್ದಾಗ ಸಿಕ್ಕಿದ್ದೇ “ಕಾಜಲ್‌’. ಇದು ಒಂದು ಮ್ಯೂಸಿಕಲ್‌ ಲವ್‌ಸ್ಟೋರಿ. ಕಾಮಿಡಿ ಹಿನ್ನೆಲೆಯಲ್ಲಿ ಸಾಗುವ ಈ ಕಥೆ ಸಂತೋಷ್‌ಗೆ ತುಂಬಾ ಇಷ್ಟವಾಗಿದೆ. ಆ ಕಾರಣದಿಂದ ಸಂತೋಷ್‌ ಒಪ್ಪುವ ಜೊತೆಗೆ ಅವರ ತಂದೆ ಆನೇಕಲ್‌ ಬಾಲರಾಜ್‌ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಚಿತ್ರವನ್ನು ಸುಮಂತ್‌ ಕ್ರಾಂತಿ ನಿರ್ದೇಶನ ಮಾಡುತ್ತಿದ್ದಾರೆ.

Advertisement

ಈ ಹಿಂದೆ “ನಾನಿ’ ಎಂಬ ಹಾರರ್‌ ಸಿನಿಮಾ ಮಾಡಿದ್ದ ಸುಮಂತ್‌ ಈಗ ಔಟ್‌ ಅಂಡ್‌ ಔಟ್‌ ಕಾಮಿಡಿ ಸಿನಿಮಾ ಮಾಡಲು ಹೊರಟಿದ್ದಾರೆ. ಚಿತ್ರಕ್ಕೆ “ರೊಮ್ಯಾನ್ಸ್‌ ಬಿಟ್ವೀನ್‌ ಇಂಡಿಯಾ ಅಂಡ್‌ ಅಮೆರಿಕಾ’ ಎಂಬ ಟ್ಯಾಗ್‌ಲೈನ್‌ ಬೇರೆ ಇದೆ. ಇಷ್ಟು ಹೇಳಿದ ಮೇಲೆ ಇದೊಂದು ಲವ್‌ಸ್ಟೋರಿ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ವಿದೇಶದಿಂದ ತನ್ನ ಸಂಬಂಧಿಕರನ್ನು ನೋಡಲು ಹಳ್ಳಿಗೆ ಬರುವ ಹುಡುಗಿ ಅಲ್ಲಿ ಎದುರಿಸುವ ಪರಿಸ್ಥಿತಿಗಳನ್ನು ಮಜಾವಾಗಿ ಹೇಳಲಿದ್ದಾರಂತೆ ನಿರ್ದೇಶಕ ಸುಮಂತ್‌.

“ಇದು ಫ‌ನ್ನಿ ಎಂಟರ್‌ಟೈನ್‌ಮೆಂಟ್‌ ಕಥೆ. ತುಂಬಾ ಹಿಂದೆ ಮಾಡಿಟ್ಟುಕೊಂಡ ಸ್ಕ್ರಿಪ್ಟ್ ಇದಾಗಿದ್ದು, ನಿರ್ಮಾಪಕರಿಗೆ ಹೇಳಿದಾಗ ಖುಷಿಯಿಂದ ಒಪ್ಪಿಕೊಂಡರು. ಮುಖ್ಯವಾಗಿ ಈ ಕಥೆ ಹದಿಹರೆಯದವರಿಗೆ ಹೆಚ್ಚು ಇಷ್ಟವಾಗಲಿದೆ. ಚಿತ್ರದಲ್ಲಿ ಸಂಗೀತಕ್ಕೂ ಹೆಚ್ಚಿನ ಪ್ರಾಮುಖ್ಯತೆ ಇದೆ’ ಎಂದು ಚಿತ್ರದ ಬಗ್ಗೆ ಹೇಳಿಕೊಂಡರು. ಇಲ್ಲಿ ಕಾಜಲ್‌ ಎನ್ನುವುದು ನಾಯಕಿಯ ಹೆಸರು. ಸಿಮ್ರಾನ್‌ ನಾಟೇಕರ್‌ ಈ ಚಿತ್ರದ ನಾಯಕಿ.

“ಧೂಮಪಾನ ಮಾಡದಿರಿ’ ಎಂಬ ಜಾಹೀರಾತಿನಲ್ಲಿ ಪುಟ್ಟ ಬಾಲಕಿಯಾಗಿದ್ದಾಗಲೇ ಕಾಣಿಸಿಕೊಂಡ ಸಿಮ್ರಾನ್‌ ಈಗ “ಕಾಜಲ್‌’ ಮೂಲಕ ನಾಯಕಿಯಾಗಿದ್ದಾರೆ. ನಿರ್ದೇಶಕ ಸುಮಂತ್‌ ಈ ಹುಡುಗಿಯೇ ನಾಯಕಿಯಾಗಬೇಕೆಂಬ ಆಸೆ ಇತ್ತಂತೆ. ಇನ್ನು, ಒಂದು ವರ್ಷ ಬೇರೆ ಸಿನಿಮಾ ಮಾಡದಂತೆ ಒಪ್ಪಂದ ಪತ್ರಕ್ಕೂ ಸಹಿ ಹಾಕಿಸಿದ್ದಾರಂತೆ.

ಅಂದಹಾಗೆ, ಚಿತ್ರದಲ್ಲಿ ಧೂಮಪಾನ ವಿರೋಧಿ ಜಾಹೀರಾತಿನಲ್ಲಿ ಕಾಣಿಸಿಕೊಂಡ ಹುಡುಗಿ ನಾಯಕಿಯಾಗಿರುವುದರಿಂದ ಸೆಟ್‌ನಲ್ಲಿ ಯಾರೊಬ್ಬರು ಸಿಗರೇಟು ಸೇದುವುದಿಲ್ಲವಂತೆ.  ನಾಯಕ ಸಂತೋಷ್‌ ಹೆಚ್ಚೇನು ಮಾತನಾಡಲಿಲ್ಲ. ಮೊದಲ ಬಾರಿಗೆ ಹೊಸ ಜಾನರ್‌ ಪ್ರಯತ್ನಿಸುತ್ತಿರುವುದರಿಂದ ಪಾತ್ರಕ್ಕಾಗಿ ಪೂರ್ವತಯಾರಿ ಮಾಡುತ್ತಿರುವುದಾಗಿ ಹೇಳಿದರು. ನಾಯಕಿ ಸಿಮ್ರಾನ್‌ ಈ ಸಿನಿಮಾಕ್ಕಾಗಿ ಮೂರು ಹಿಂದಿ ಸಿನಿಮಾಗಳನ್ನು ಬಿಟ್ಟರಂತೆ.

Advertisement

“ಬಾಹುಬಲಿ’ ಸಿನಿಮಾ ನೋಡಿ ಫಿದಾ ಆದ ಸಿಮ್ರಾನ್‌, ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಬೇಕೆಂಬ ಕನಸು ಕಾಣುತ್ತಿದ್ದರಂತೆ. ಆಗ ಸಿಕ್ಕಿದ್ದು “ಕಾಜಲ್‌’. ಹಾಗಾಗಿ, ಒಪ್ಪಿಕೊಂಡಿದ್ದಾರೆ. ಚಿತ್ರದಲ್ಲಿ ಫಾರಿನ್‌ ರಿಟರ್ನ್ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ನಿರ್ಮಾಪಕ ಆನೇಕಲ್‌ ಬಾಲರಾಜ್‌ ಎಂದಿನಂತೆ ಈ ಬಾರಿಯಯೂ ಮಾತನಾಡಲಿಲ್ಲ. ಚಿತ್ರಕ್ಕೆ ಗುರುಕಿರಣ್‌ ಸಂಗೀತ, ಗುಂಡ್ಲುಪೇಟೆ ಸುರೇಶ್‌ ಛಾಯಾಗ್ರಹಣವಿದೆ. ಊಟಿ, ಹೊನ್ನಾವರ, ಕುಲುಮನಾಲಿಯಲ್ಲಿ ಚಿತ್ರೀಕರಣ ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next