Advertisement

ದೀರ್ಘ‌ ಕಾಲದ ಕನಸು ಈಡೇರಿದೆ: ಶಾಸಕ ಬಾವಾ

10:23 AM Jun 05, 2017 | Team Udayavani |

ಸುರತ್ಕಲ್: ಜಾತಿ, ಮತ, ಧರ್ಮ, ಪಂಗಡ ಭೇದ ಮಾಡದೆ ಸರಕಾರಿ ಶಾಲೆಯಲ್ಲಿ ಕಲಿಯುವ ಪ್ರತಿ ಮಗುವಿಗೂ ಪುಸ್ತಕಗಳನ್ನು ಕೊಡುವ ಕನಸು ಈಡೇರಿದೆ ಎಂದು ಶಾಸಕ ಮೊದಿನ್‌ ಬಾವಾ ಹೇಳಿದರು.

Advertisement

ಅವರು ಸುರತ್ಕಲ್‌ ಅನುದಾನಿತ ವಿದ್ಯಾದಾಯಿನಿ ಪ್ರೌಢಶಾಲೆ ಹಾಗೂ ಚೊಕ್ಕಬೆಟ್ಟು ಎಂಜೆಎಂ ಸಭಾಂಗಣದಲ್ಲಿ ಮಕ್ಕಳಿಗೆ ವೈಯಕ್ತಿಕ ನೆಲೆಯಲ್ಲಿ ಸುಮಾರು 52,86,000 ಲ.ರೂ. ಮೌಲ್ಯದ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.ನನ್ನ ವಿಧಾನಸಭಾ ಕ್ಷೇತ್ರದ ಒಟ್ಟು 48,000 ಮಕ್ಕಳಿಗೆ ಸ್ವಂತ ಖರ್ಚಿ ನ ಲ್ಲಿ ಪುಸ್ತಕಗಳನ್ನು ಕೊಡುವ ಆಸೆ ಈಡೇರಿದೆ. ಇಂದು ಶ್ರೀಮಂತರ ಜತೆಗೆ ಮಧ್ಯಮ ಹಾಗೂ ಬಡವರ್ಗದ ಮಕ್ಕಳೂ ಅತ್ಯುನ್ನತ ರ್‍ಯಾಂಕ್‌ ಗಳಿಸುವ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ. ಇವರಿಗೆ ಮತ್ತಷ್ಟು ಪ್ರೋತ್ಸಾಹ ನೀಡಬೇ ಕಾ ಗಿ ದೆ ಎಂದರು.

ಮನಪಾ ಸದಸ್ಯೆ ಪ್ರತಿಭಾ ಕುಳಾç ಮಾತನಾಡಿ, ಜನಸಾಮಾನ್ಯರಿಗಾಗಿ ತಮ್ಮ ಮನೆಬಾಗಿಲನ್ನು ಯಾವತ್ತೂ ತೆರೆದಿಡುವ ಜನಪ್ರತಿನಿಧಿಯಾಗಿ ಬಾವಾ ಹೊರಹೊಮ್ಮಿದ್ದಾರೆ. ಅವರು ಮುಂದಿನ ಬಾರಿ ಸಚಿವರಾಗಿ ಸೇವೆ ಸಲ್ಲಿಸಲಿ ಎಂದು ಹಾರೈಸಿದರು.

ಮಾಜಿ ಮೇಯರ್‌ ಗುಲ್ಜಾರ್‌ ಬಾನು, ಮಂಗಳೂರು ಉತ್ತರ ಮಹಿಳಾಕಾಂಗ್ರೆಸ್‌ ಅಧ್ಯಕ್ಷೆ ಶಕುಂತಳಾ ಕಾಮತ್‌,ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಉತ್ತಮ್‌ ಆಳ್ವ, ಮನಪಾ ಸದಸ್ಯ ಕುಮಾರ್‌ ಮೆಂಡನ್‌, ವಿದ್ಯಾದಾಯಿನಿ ಸಂಘದ ಪ್ರಧಾನ ಕಾರ್ಯದರ್ಶಿ ಎಂ. ವೆಂಕಟ್ರಾವ್‌ ಸಂಚಾಲಕ ಜನಾರ್ದನ ರಾವ್‌, ಮುಖ್ಯೋಪಾಧ್ಯಾಯಿನಿ ಕುಸುಮಾ, ಕಾಂಗ್ರೆಸ್‌ ಮುಖಂಡ ರಮಾನಂದ ರಾವ್‌, ಯುವ ಕಾಂಗ್ರೆಸ್‌ ಮುಖಂಡ ಸೊಹೈಲ್‌ ಕಂದಕ್‌, ದೇವಕಿ, ಭಾಸ್ಕರ್‌, ರಾಜಾ ಬಂಗೇರ, ಹಮೀದ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next