ಮಂಗಳೂರು: ಸಸಿಹಿತ್ಲು ಬೀಚ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಟಾಂಡ್ ಅಪ್ ಪೆಡ್ಲಿಂಗ್ ಚಾಂಪಿಯನ್‌ಶಿಪ್‌ನ ಪುರುಷರ ಮುಕ್ತ ವಿಭಾಗದ ಲಾಂಗ್ ಡಿಸ್ಟೆನ್ಸ್ ಟೆಕ್ನಿಕಲ್ ಎಸ್‌ಯುಪಿ ರೇಸ್‌ನಲ್ಲಿ (10 ಕಿ.ಮೀ.) ಸ್ಪೇನ್‌ನ ಆ್ಯಂಟೋನಿಯೊ ಮೊರಿಲ್ಲೊ ಚಾಂಪಿಯನ್ ಆಗಿ ಮೂಡಿ ಬಂದಿದ್ದಾರೆ.
ಡೆನ್ಮಾರ್ಕ್‌ನ ಕ್ರಿಸ್ಟನ್ ಆ್ಯಂಡರ್ಸನ್ ದ್ವಿತೀಯ, ವಿಶ್ವದ ನಂ.2 ಸ್ಥಾನದದಲ್ಲಿರುವ ಫೆರ್ನಾಂಡೊ ಪೆರೆಝ್ ತೃತೀಯ ಸ್ಥಾನಿಯಾದರು. ಭಾರತದ ರಾಷ್ಟ್ರೀಯ ಚಾಂಪಿಯನ್ ಶೇಕರ್ ಪಟಾcಯಿ 5ನೇ ಸ್ಥಾನ ಪಡೆ ದರು. ಇನ್ನೋರ್ವ ರೇಸರ್ ಮಣಿಕಂಠನ್ ಅವರು ಕೂಡ ಫೈನಲ್ ಪ್ರವೇಶಿಸಿದ್ದರು.
ಮಹಿಳಾ ವಿಭಾಗದಲ್ಲಿ ಸ್ಪೇನ್‌ನ ಎಸ್ಪರಾಂಝ ಬೆರಿಯರ್ ಚಾಂಪಿ ಯನ್ ಆದರು. ಥಾಯ್ಲೆಂಡ್‌ನ ಐರಿನ್ ದ್ವಿತೀಯ ಮತ್ತು ಜ್ಯೂನಿ ಯರ್ ಚಾಂಪಿಯನ್ ಇಟಲಿಯ ಬಿಯಾಂಕಾ ಟೋನ್ಸೆಲ್ಲಿ ಮೂರನೇ ಸ್ಥಾನ ಪಡೆದರು.
ಆ್ಯಂಟೋನಿಯೊ ಮೊರಿಲ್ಲೊ 56.59 ನಿಮಿಷದಲ್ಲಿ ರೇಸ್ ಮುಗಿಸಿ ದರು. ಬಳಿಕ ಮಾತನಾಡಿದ ಅವರು, “ಇಂತಹ ಚಾಲೆಂಜಿಂಗ್ ವಾತಾವರಣದಲ್ಲಿ ಉತ್ತಮ ರೇಸ್‌ಗಳಲ್ಲಿ ಒಂದಾಗಿತ್ತು. ಭಾರತೀಯ ಪೆಡ್ಲರ್‌ಗಳ ಕುರಿತು ಹೆಮ್ಮೆ ಅನಿಸು ತ್ತಿದೆ. ಕೆಲವರು ಶೀಘ್ರದಲ್ಲೇ ಅಂತಾರಾಷ್ಟ್ರೀಯ ಮಟ್ಟಕ್ಕೇರುವ ಸಾಧ್ಯತೆಯಿದೆ’ ಎಂದರು.
ಮಹಿಳಾ ವಿಭಾಗದ ಚಾಂಪಿಯನ್ ಎಸ್ಪರಾಂಝ 59.38 ನಿಮಿಷದಲ್ಲಿ ಸ್ಪರ್ಧೆ ಮುಗಿಸಿದರು. “ಭಾರತದಲ್ಲಿ ಮೊದಲ ಬಾರಿಗೆ ಸ್ಪರ್ಧೆಯಲ್ಲಿ ಭಾಗ ವಹಿಸಿದ್ದು, ಮಂಗಳೂರು ಸಮುದ್ರದ ಸದ್ಯದ ಸ್ಥಿತಿಗತಿ ರೇಸರ್‌ಗಳಿಗೆ ಹೆಚ್ಚು ಅನುಕೂಲಕರವಾಗಿದೆ. ಭಾರತೀಯ ಮಹಿಳಾ ಪೆಡ್ಲರ್‌ಗಳು ಇನ್ನಷ್ಟು ಹೆಚ್ಚಿನ ತರಬೇತಿ ಪಡೆದರೆ ನಮ್ಮೊಡನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಣಿಸಿ ಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ’ ಎಂದರು.