Advertisement
ದೇಶಾದ್ಯಂತ ಅ.2ರಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ದೇಶದ ಸ್ವಾತಂತ್ರ್ಯಕ್ಕಾಗಿ ಬಾಪೂಜಿ ಅವರು ಮಾಡಿರುವ ಚಳವಳಿ, ಹೋರಾಟಗಳ ಕುರಿತು ಯುವಜನರಿಗೆ ತಿಳಿಸುವ ಸಲುವಾಗಿ ಅನೇಕ ಕಾರ್ಯಕ್ರಮ ಹಾಕಿಕೊಂಡಿದೆ. ಅದರಲ್ಲಿ ಪ್ರಮುಖವಾಗಿ ಮಹಾತ್ಮಗಾಂಧಿ ಅವರ ಹೆಸರಿನಲ್ಲಿ
Related Articles
Advertisement
45 ದಿನ ತಂಗಿದ್ದ ಗಾಂಧಿ: 1927ರಲ್ಲಿ ರಕ್ತದೊತ್ತಡ ಹೆಚ್ಚಾಗಿ ಗಾಂಧಿಧೀಜಿಯವರ ಆರೋಗ್ಯ ಬಹಳ ಕೆಟ್ಟಿತ್ತು. ವೈದ್ಯರ ಅಭಿಪ್ರಾಯದಂತೆ ವಿಶ್ರಾಂತಿಗಾಗಿ ನಂದಿಬೆಟ್ಟದಲ್ಲಿ 45 ದಿನಗಳ ಕಾಲ ತಂಗಿದ್ದರು.
ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಿಂದ ಗಾಂಧೀಜಿಯನ್ನು ಆರೈಕೆ ಮಾಡಲು ಬಂದಿದ್ದ ಸ್ವಯಂ ಸೇವಕರ ಶ್ರದ್ಧೆ ಅಪಾರ. ನಂದಿಯಲ್ಲಿ ವಸತಿ ಮಾಡಿದಾಗ ತಗಲುವ ವೆಚ್ಚವನ್ನು ತಾವು ಕೊಡುವುದಾಗಿ ಗಾಂಧಿಧೀಜಿಗೆ ಚಿಕ್ಕಬಳ್ಳಾಪುರದ ಜನ ಒತ್ತಾಯ ಮಾಡಿದರು.
ರಾಜಾಜಿಯವರ ಸಲಹೆ ಮೇರೆಗೆ ಇಲ್ಲಿನ ವ್ಯವಸ್ಥೆಯನ್ನು ನೋಡಿಕೊಳ್ಳಲು ಸ್ವಯಂಸೇವಕರ ಒಂದು ವಸತಿಯನ್ನೇ ಏರ್ಪಾಡು ಮಾಡಲಾಗಿತ್ತು. ಚಿಕ್ಕಬಳ್ಳಾಪುರದ ಜನರಂತೂ ಪ್ರತಿ ಚಿಕ್ಕಪುಟ್ಟ ವಿಷಯಕ್ಕೂ ಗಮನ ಕೊಡುತ್ತಿದ್ದರು. ಗಾಂಧೀಜಿಯನ್ನು ಈ ಬೆಟ್ಟಕ್ಕೆ ಹೊತ್ತು ತಂದ ಕುರ್ಚಿಯ ಮೇಲೆ ಕಟ್ಟಿದ್ದ ಬಟ್ಟೆ ಖಾದಿಯದು. ಈ ಕುರ್ಚಿಯನ್ನು ಹೊತ್ತು ತಂದವರೆಲ್ಲರೂ ಖಾದಿಧಾರಿಗಳು ಎಂದು ಮಹದೇವ ದೇಸಾಯಿ ಪುಸ್ತಕದಲ್ಲಿ ದಾಖಲಿಸಿದ್ದಾರೆ.
ಪ್ರತಿ ಪತ್ರಕ್ಕೂ ಉತ್ತರ ಬರೆದಿದ್ದರು: ಜೂನ್ ಮೊದಲ ವಾರ, ನಂದಿಬೆಟ್ಟದಿಂದ ಇಳಿದು ಗಾಂಧೀಜಿ ಬೆಂಗಳೂರಿನ ಕಡೆಗೆ ಹೊರಟರು. ದಾರಿಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಸ್ವಲ್ಪ ಹೊತ್ತು ತಂಗಿದ್ದರು. ಚಿಕ್ಕಬಳ್ಳಾಪುರದ ಜನಕ್ಕೆ ಸೂಚನೆ ಮೊದಲೇ ಕೊಟ್ಟಿರಲಿಲ್ಲ.
ಆದರೂ, ಅವರು ಶಕ್ತಿ ಮೀರಿ ಪ್ರಯತ್ನ ಮಾಡಿ ಒಂದು ನಿಧಿಯನ್ನು ಸಂಗ್ರಹಿಸಿ ನೀಡಿದ್ದರು. ತಮಗೆ ಯಾರೇ ಪತ್ರ ಬರೆದರೂ ಉತ್ತರಿಸುತ್ತಿದ್ದ ಗಾಂಧೀಜಿ ನಂದಿಬೆಟ್ಟದಲ್ಲಿ ವಿಶ್ರಾಂತಿಯಲ್ಲಿದ್ದರೂ ಪತ್ರಗಳನ್ನು ಬರೆಯುತ್ತಿದ್ದರು.
ಶಂಕರನ್ (ಏಪ್ರಿಲ್ 28, 1927), ದಕ್ಷಿಣ ಆಫ್ರಿಕಾದಲ್ಲಿ ಗಾಂಧಿಧೀಜಿಯವರ ಸಹಚರರಾಗಿದ್ದ ಜರ್ಮನಿ ಮೂಲದ ಹರ್ಮನ್ ಕಾಲೆನ್ ಬಾಕ್ (ಮೇ 13, 1927) ಮತ್ತು ಗುಲ್ಜಾರಿಲಾಲ್ ನಂದ (ಮೇ 28, 1927) ಬರೆದಿರುವ ಪತ್ರಗಳ ಪೂರ್ಣ ಪಾಠ ಮಹಾತ್ಮ ಗಾಂಧಿಯವರ ಆಯ್ದ ಪತ್ರಗಳು? ಪುಸ್ತಕದಲ್ಲಿ ದಾಖಲಾಗಿವೆ.
ಇದನ್ನೂ ಓದಿ:- ನಾಲ್ವರನ್ನು ಬಲಿ ಪಡೆದ ಹುಲಿ ಹತ್ಯೆಗಾಗಿ ‘ಆಪೆರೇಷನ್ ಎಂಡಿಟಿ 23’ !
ಓಕ್‌ಲ್ಯಾಂಡ್ಸ್ ಭವನದಲ್ಲಿ ವಾಸ್ತವ್ಯ: 1936, ಮೇ ತಿಂಗಳ 10ನೇ ತಾರೀಖು ಗಾಂಧೀಜಿ ನಂದಿಬೆಟ್ಟಕ್ಕೆ ಬಂದವರು 20 ದಿನಗಳ ಕಾಲ ಇದ್ದರು. ಅವರೊಂದಿಗೆ ಕಸ್ತೂರ ಬಾ, ವಲ್ಲಭಬಾಯಿ, ಮಹದೇವ ದೇಸಾಯಿ, ಮಣಿಬೆನ್ ಸಹ ಇದ್ದರು. ಈ ಸಂದರ್ಭದಲ್ಲಿ ನಂದಿಬೆಟ್ಟದ ಪಕ್ಕದ ಚನ್ನಗಿರಿ ಬೆಟ್ಟದಲ್ಲಿದ್ದ ಸದ್ಗುರು ಓಂಕಾರ ಸ್ವಾಮಿಗಳು (ಕ್ರಾಂತಿಕಾರಿ ನೀಲಕಂಠ ಬ್ರಹ್ಮಚಾರಿ) ಬಂದು ಗಾಂಧಿಧೀಜಿಯನ್ನು ಭೇಟಿ ಮಾಡಿ 2 ಗಂಟೆ ಕಾಲ ಆತ್ಮವಿದ್ಯೆಯ ಕುರಿತು ಚರ್ಚಿಸಿದ್ದರು (ಮೇ 30), ನಂದಿ ಬೆಟ್ಟದ ಮೇಲೆ ರಮಣೀಯ ದೃಶ್ಯಗಳು ಕಾಣಸಿಗುವ ಕನಿಂಗ್‌ಹ್ಯಾಂ ನಿರ್ಮಿಸಿದ್ದ ಓಕ್‌ಲ್ಯಾಂಡ್ಸ್ ಭವನದಲ್ಲಿ ಗಾಂಧಿಧೀಜಿಯವರು ಉಳಿದಿದ್ದರು. ಗಾಂಧೀಜಿಯವರು ವಿಶ್ರಾಂತಿ ಪಡೆದ ಸವಿನೆನಪಿಗಾಗಿ ಅದನ್ನೀಗ ಗಾಂಧಿನಿಲಯ ಎಂದು ನಾಮಕರಣ ಮಾಡಲಾಗಿದೆ. ಗಾಂಧಿಧೀಜಿಯವರ ಪ್ರತಿಮೆಯೂ ಅಲ್ಲಿದೆ.