Advertisement

ಪ್ರಯೋಜನಕ್ಕೆ ಬಾರದ ಲಂಡನ್‌ನ ಅತ್ಯಾಧುನಿಕ ಆಸ್ಪತ್ರೆ

12:02 PM Apr 23, 2020 | sudhir |

ಲಂಡನ್‌: ಕೋವಿಡ್‌ -19 ರೋಗಿಗಳ ಸಂಖ್ಯೆಹೆಚ್ಚಾಗುತ್ತಿದ್ದಂತೆ ಜಾಗೃತಗೊಂಡ ಬ್ರಿಟನ್‌ ಪೂರ್ವ ಲಂಡನ್‌ನ ವಸ್ತು ಪ್ರದರ್ಶನ ಸ್ಥಳವನ್ನು 9 ದಿನಗಳಲ್ಲಿ ಅತ್ಯಾಧುನಿಕ ಆಸ್ಪತ್ರೆಯಾಗಿ ಮಾರ್ಪಡಿಸಿತ್ತು. ಸುಮಾರು 4 ಸಾವಿರ ಹಾಸಿಗೆಗಳ ಸಾಮರ್ಥ್ಯದ ಬೃಹತ್‌ ಕಟ್ಟಡವನ್ನು ನಿರ್ಮಾಣ ಮಾಡಿ ಅದಕ್ಕೆ ನೈಟಿಂಗೈಲ್‌ಆಸ್ಪತ್ರೆ ಎಂದು ನಾಮಕರಣ ಮಾಡಿತ್ತು.

Advertisement

ಇದರ ಬಳಕೆ ಕುರಿತು ವರದಿ ಮಾಡಿರುವ ಡೈಲಿ ಮೇಲ್‌, ಸೋಂಕಿತರ ಚಿಕಿತ್ಸೆಗಾಗಿ ಚೀನ ಹತ್ತೇ ದಿನದಲ್ಲಿ ಸಾವಿರ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ನಿರ್ಮಿಸಿ ಜಗತ್ತನ್ನೇ ನಿಬ್ಬೆರಗಾಗಿಸಿತ್ತು. ಆದರೆ ಒಂದು ಹೆಜ್ಜೆ ಮುಂದೆ ಹೋಗಿ ಕೇವಲ 9 ದಿನದಲ್ಲಿ 4 ಸಾವಿರ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಕಟ್ಟಿ ಬ್ರಿಟನ್‌ ಸಹ ಅಚ್ಚರಿ ಮೂಡಿಸಿತ್ತು. ಆದರೀಗ ಪರಿಸ್ಥಿತಿಯೆ ಬೇರೆ ಎಂದಿದೆ.

ಎಪ್ರಿಲ್‌ 7ರಿಂದ ಕೇವಲ 40 ಜನರಿಗಷ್ಟೇ ಚಿಕಿತ್ಸೆ ನೀಡಲಾಗುತ್ತಿದೆ. ಜೀವನ್ಮರಣ ಸ್ಥಿತಿಯಲ್ಲಿರುವ ಕನಿಷ್ಠ 50 ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಲಾಗಿದೆ. ಲಂಡನ್‌ನ ಪ್ರಮುಖ ಆಸ್ಪತ್ರೆಗಳಿಂದ ವೆಂಟಿಲೇಟರ್‌ ಮೂಲಕ ಇಲ್ಲಿಗೆ ಕರೆತರಲಾದ ರೋಗಿಗಳಿಗೂ ಪ್ರವೇಶ ನೀಡುತ್ತಿಲ್ಲ. ಇದರ ಪೂರ್ಣ ಸಾಮರ್ಥಯ ಬಳಕೆಗೆ 16 ಸಾವಿರಕ್ಕೂ ಹೆಚ್ಚು ಸಿಬಂದಿ ಬೇಕು. ಆವರ ಕೊರತೆ ಹೇಗೆ ನೀಗಿಸುವುದು ಎಂಬ ಪ್ರಶ್ನೆಗೆ ವೈದ್ಯಕೀಯ ಇಲಾಖೆಯಲ್ಲಿ ಉತ್ತರವಿಲ್ಲ. ಹೀಗಾಗಿ ಆಸ್ಪತ್ರೆ ಪ್ರಯೋಜನಕ್ಕೆ ಬಾರದಂತಾಗಿದೆ ಎನ್ನುತ್ತಾರೆ ವೈದ್ಯಾಧಿಕಾರಿಗಳು.

ಅಗತ್ಯ ವೈಯಕ್ತಿಕ ಸುರಕ್ಷತಾ ಸಾಧನಗಳ ಕೊರತೆ ಯಿಂದ ಆರೋಗ್ಯ ಸಿಬಂದಿಯೂ ಸೋಂಕಿಗೀಡಾ ಗುತ್ತಿದ್ದು, ವೈದ್ಯರು, ದಾದಿಗಳು ಮತ್ತು ಇತರೆ ಸಿಬಂದಿ ಕಾರ್ಯ ನಿರ್ವಹಿಸಲು ಹಿಂಜರಿಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next