ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಾಟ್ಯಶಾಸ್ತ್ರ ಕೃತಿಯನ್ನು ಮೊದಲ ಬಾರಿಗೆ ಇಂಗ್ಲಿಷ್‌ನಲ್ಲಿ ಅನುವಾದ ಮಾಡಿದ ಸಂಸ್ಕೃತ ವಿದ್ವಾಂಸರಾದ ಪ್ರೊ| ರಾಧಾವಲ್ಲಭ ತ್ರಿಪಾಠಿ “ಆಧುನಿಕ ಜಗತ್ತಿನಲ್ಲಿ ನಾಟ್ಯಶಾಸ್ತ್ರದ ಪ್ರಾಮುಖ್ಯತೆ ‘ ಎಂಬ ವಿಷಯದ ಕುರಿತು ಮಾತನಾಡುತ್ತಾ, “ಭರತನಾಟ್ಯ ಅಥವಾ ಯಾವುದೇ ಭಾರತೀಯ ಶಾಸ್ತ್ರೀಯ ನೃತ್ಯ ಕಲಿಯುವಾಗ ಭರತಮುನಿಯ “ನಾಟ್ಯಶಾಸ್ತ್ರದ’ ಪ್ರಸ್ತಾವವೂ ಖಂಡಿತ ಬರುತ್ತದೆ.
Advertisement
ನಾಟ್ಯಶಾಸ್ತ್ರದಂತಹ ಬೃಹತ್ ಗ್ರಂಥದ ಪರಿಚಯವೇ ಅನೇಕರಿಗಿಲ್ಲ. ಅದಲ್ಲದೇ ನಾಟಕ, ನೃತ್ಯ ಹಾಗೂ ಸಂಗೀತದ ಬಗ್ಗೆ ತಿಳಿದವರು ಕೂಡ ಇದರ ಬಗ್ಗೆ ಪ್ರಚಾರ ಕೊಡುವುದಿಲ್ಲ. ಬ್ರಿಟನ್‌ನಲ್ಲಿ ಶೇಕ್ಸ್ ಪೀಯರ್ ವಿವರಣೆ ಮಾದರಿಯ ರಂಗವೇದಿಕೆಯಿದೆ. ಹಾಗೇ ಬಹಳಷ್ಟು ದೇಶಗಳಲ್ಲಿ ನಮ್ಮ ಸಂಸ್ಕೃತಿ ಎತ್ತಿ ಹಿಡಿಯುವ ಸಂಗ್ರಹಾಲಯಗಳನ್ನು ನಿರ್ಮಿಸಲಾಗಿದೆ. ಅದೇ ಭಾರತದಲ್ಲಿ ಭರತಮುನಿ ಉಲ್ಲೇಖಿಸಿದಂತಹ ರಂಗಮಂಚವು ಸೃಷ್ಟಿಯಾಗಬೇಕಿದೆ. ನಾಟ್ಯಶಾಸ್ತ್ರ ಕೇವಲ ನೃತ್ಯಕ್ಕೆ ಸಂಬಂಧಿ ಸಿದ್ದಲ್ಲ, ಅದರಲ್ಲಿ ವೇದಗಳ ಉಲ್ಲೇಖವು ಇದೆ. ಒಬ್ಬ ವ್ಯಕ್ತಿಯ ಸರ್ವತೋ ಮುಖ ಬೆಳವಣಿಗೆಗೆ ಅದು ಪೂರಕವಾಗಿದೆ ‘ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಸಿದ್ಧ ಲೇಖಕ ಜಾನ್ ಫ್ಯಾರ್ಡೊನ್ ಪರಂಪರೆಯನ್ನು ಉಳಿಸುವ ಕುರಿತು ಮಾತನಾಡಿದರು.
Related Articles
Advertisement
ಮಂಜು ಸುನಿಲ್ ಭರತನಾಟ್ಯ ಶೈಲಿಯಲ್ಲಿ ಪುಷ್ಪಾಂಜಲಿ, ಪ್ರಿಯಾ ಕುಶ್ವಾಹ ಕಥಕ್ ಶೈಲಿಯಲ್ಲಿ ಶಿವಸ್ತುತಿ ಹಾಗೂ ಡಾ| ಅಂಜಲಿ ಶರ್ಮಾ ತಿವಾರಿ ಅವರು ಜಾನಪದ ವಾದ್ಯಗಳನ್ನು ನುಡಿಸುವುದರ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.ಕಾರ್ಯಕ್ರಮದ ಆರಂಭದಲ್ಲಿ ಆತ್ಮದೀಪ್ ಭಟ್ಟಾಚಾರ್ಜಿ ಅವರು ಪ್ರಾರ್ಥಿ ಸಿ ದರು. ರಾಧಿಕಾ ಜೋಶಿ ನಿರೂಪಿಸಿ, ಸುಶೀಲ್ ರಾಪಾತ್ವಾರ್ ವಂದಿಸಿ ದರು. ಸಂಸ್ಕೃತಿ ಸೆಂಟರ್‌ನ ಕಲ್ಚರಲ್ ಎಕ್ಸೆಲೆನ್ಸ್‌ನ ಸಂಸ್ಥಾಪಕಿ ರಾಗ ಸುಧಾ ವಿನಿಜಮೂರಿ ಕಾರ್ಯಕ್ರಮ ವನ್ನು ಸಂಯೋಜಿಸಿದ್ದರು.