Advertisement

ಎ. 24ರ ಲಂಡನ್‌ ಮ್ಯಾರಥಾನ್‌ ಅ. 4ಕ್ಕೆ

10:03 AM Mar 15, 2020 | Sriram |

ಲಂಡನ್‌: ಜಾಗತಿಕ ಮ್ಯಾರಥಾನ್‌ಗಳಲ್ಲೇ ವಿಶಿಷ್ಟ ಇತಿಹಾಸ ಹೊಂದಿರುವ ಲಂಡನ್‌ ಮ್ಯಾರಥಾನ್‌ ಮುಂದೂಡಲ್ಪಟ್ಟಿದೆ. ಎ. 24ರಂದು ನಡೆಯಬೇಕಿದ್ದ ಈ ಮ್ಯಾರಥಾನ್‌ ಅಕ್ಟೋಬರ್‌ 4ರಂದು ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Advertisement

“ಈಗಾಗಲೇ ಈ ಮ್ಯಾರಥಾನ್‌ಗೆ ಹೆಸರು ನೋಂದಾಯಿಸಿಕೊಂಡವರು ಹೆಚ್ಚುವರಿ ಪ್ರವೇಶ ಶುಲ್ಕ ನೀಡದೆ ಇದರಲ್ಲಿ ಪಾಲ್ಗೊಳ್ಳಬಹುದು. ಅಕಸ್ಮಾತ್‌ ಪರಿಷ್ಕೃತ ದಿನಾಂಕದಂದು ಪಾಲ್ಗೊಳ್ಳಲು ಸಾಧ್ಯವಾಗದೇ ಇದ್ದರೆ ಅವರ ಪ್ರವೇಶಧನವನ್ನು ಮರಳಿಸಲಾಗುತ್ತದೆ ಅಥವಾ 2021ರ ಮ್ಯಾರಥಾನ್‌ಗೆ ಇದನ್ನು ಕಾದಿರಿಸಲಾಗುತ್ತದೆ. ಆದರೆ ಆಗ ಪ್ರವೇಶಧನ 2021ರ ಮಾನದಂಡದ ವ್ಯಾಪ್ತಿಗೆ ಒಳಪಡುತ್ತದೆ’ ಎಂದು ಕೂಟದ ನಿರ್ದೇಶಕ ಹ್ಯೂಗ್‌ ಬ್ರಾಶರ್‌ ಹೇಳಿದ್ದಾರೆ.

2021ರ ಲಂಡನ್‌ ಮ್ಯಾರಥಾನ್‌ ಎ. 25ರಂದು ನಡೆಯಲಿದೆ.

ಬೋಸ್ಟನ್‌ ಮ್ಯಾರಥಾನ್‌ ಮುಂದಕ್ಕೆ
ಇದೇ ವೇಳೆ ಬೋಸ್ಟನ್‌ ಮ್ಯಾರಥಾನ್‌ ಕೂಟ ಕೂಡ ಸೆ. 14ರ ತನಕ ಮುಂದೂಡಲ್ಪಟ್ಟಿದೆ. ಬೋಸ್ಟನ್‌ ನಗರದ ಮೇಯರ್‌ ಮಾರ್ಟಿ ವಾಲ್ಶ್ ಈ ನಿರ್ಧಾರವನ್ನು ಪ್ರಕಟಿಸಿದರು. ಮೂಲ ವೇಳಾಪಟ್ಟಿಯಂತೆ ಇದು  ಎ. 20ರಂದು ನಡೆಯಬೇಕಿತ್ತು.

ಇದಕ್ಕೆ ಈಗಾಗಲೇ 31 ಸಾವಿರ ಓಟಗಾರರು ಹೆಸರು ನೋಂದಾಯಿಸಿದ್ದಾರೆ. ಹಾಗೆಯೇ ಸುಮಾರು ಒಂದು ಮಿಲಿಯದಷ್ಟು ಮಂದಿ ಇದನ್ನು ವೀಕ್ಷಿಸಲಿದ್ದಾರೆ. ಪ್ರತೀ ವರ್ಷ ಈ ಮ್ಯಾರಥಾನ್‌ನಿಂದ 211 ಮಿ. ಡಾಲರ್‌ ಮೊತ್ತ ಸಂಗ್ರಹಗೊಳ್ಳುತ್ತದೆ. ಇದರಲ್ಲಿ 40 ಮಿ. ಡಾಲರ್‌ನಷ್ಟು ಮೊತ್ತವನ್ನು ವಿವಿಧ ಸಹಾಯಾರ್ಥ ನಿಧಿಗೆ ನೀಡಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next