Advertisement

ಲಂಡನ್‌ನಲ್ಲಿ ಕಾನೂನು ಭಂಜಕರಿಗೆ ದಂಡವೇ ಮದ್ದು

07:41 PM Apr 11, 2020 | Team Udayavani |

ಮಲ್ಪೆ: ವಿದೇಶ ಗಳಲ್ಲಿದ್ದು ಕೋವಿಡ್ 19 ಲಾಕ್‌ಡೌನ್‌ ಸಂದರ್ಭ ಸ್ವದೇಶಕ್ಕೆ ತೆರಳಿರುವ ನಾಗರಿಕರೆಲ್ಲರೂ ಸ್ವ ಇಚ್ಛೆಯಿಂದ 21 ದಿನ ಹೋಂ ಕ್ವಾರಂಟೈನ್‌ಗೆ ಒಳಗಾಗಬೇಕು. ಈ ಮೂಲಕ ನಮ್ಮ ದೇಶಕ್ಕೆ ನಾವೇ ಕಂಟಕರಾಗುವುದನ್ನು ತಪ್ಪಿಸಬಹುದು ಎಂದು ಕಾಪು ಕಲ್ಯಾ ಮೂಲದ ಕನ್ನಡತಿ ಶ್ರದ್ಧಾ ನಿತಿನ್‌ ಅನಿವಾಸಿ ಭಾರತೀಯರಲ್ಲಿ ಮನವಿ ಮಾಡಿದ್ದಾರೆ. ಶ್ರದ್ಧಾ 10 ವರ್ಷಗಳಿಂದ ಲಂಡನ್‌ನಲ್ಲಿ ಪತಿಯ ಜತೆಗೆ ನೆಲೆಸಿದ್ದಾರೆ.

Advertisement

ಆತಂಕಿತರಾಗಿದ್ದೇವೆ
ಲಂಡನ್‌ನಲ್ಲಿ ಸೋಂಕುಪೀಡಿತರ ಸಂಖ್ಯೆ 60,733, ಮೃತರ ಸಂಖ್ಯೆ 7,097 ದಾಟಿದೆ. ಗಂಭೀರತೆಯನ್ನು ಅರಿಯುವಲ್ಲಿ ಆಡಳಿತ ಸ್ವಲ್ಪ ವಿಳಂಬ ಮಾಡಿದೆ ಎನ್ನಲಾಗುತ್ತಿದೆ. ನಾನಿರುವ ಹ್ಯಾರೋ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಇದ್ದಾರೆ. ನಾವೆಲ್ಲ ಬಂದಿ ಗಳಂತೆ ಇದ್ದೇವೆ. ದಿನದಿಂದ ದಿನಕ್ಕೆ ಪರಿಸ್ಥಿತಿ ಗಂಭೀರವಾಗುತ್ತಿದ್ದು, ಕಂಗೆಡಿಸಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಶ್ರದ್ಧಾ.
ಪ್ರಧಾನಿಗೂ ಸೋಂಕು ಪ್ರಧಾನಿ ಬೋರಿಸ್‌ ಜಾನ್ಸನ್‌, ಹೆಲ್ತ್‌ಸೆಕ್ರೆಟರಿ ಮೆಟ್‌ ಹೆನ್‌ಕೋಕ್‌, ರಾಣಿ ಎಲಿಜಬೆತ್‌, ಯುವರಾಜ ಚಾಲ್ಸ್‌ ì ಕೂಡ ಸೋಂಕಿಗೆ ಒಳಗಾಗಿದ್ದಾರೆ.

ಸೆಮಿ ಲಾಕ್‌ಡೌನ್‌
ಮಾ. 23ರಿಂದ ಸೆಮಿ ಲಾಕ್‌ಡೌನ್‌ಗೆ ಆದೇಶಿಸಿದ್ದಾರೆ. ಸೂಪರ್‌ ಮಾರ್ಕೆಟ್‌, ತುರ್ತು ಅಗತ್ಯಗಳಾದ ಮೆಡಿಕಲ್‌ ಹೊರತುಪಡಿಸಿ ಇನ್ನುಳಿದ ಅಂಗಡಿಗಳನ್ನು ಬಂದ್‌ ಮಾಡಲಾಗಿದೆ. ದೈನಂದಿನ ಆಹಾರದ ಪದಾರ್ಥ ಮಾರಾಟದ ಭಾರತೀಯ ಅಂಗಡಿಗಳು ತೆರೆದಿವೆ. ರೈಲು, ವಿಮಾನ ಯಾನ ಇದೆ. ಬೀಚ್‌, ಪಾರ್ಕ್‌ಗಳಿಗೆ ಜನರು ಹೋಗುತ್ತಾರೆ. ಪೊಲೀಸರು ಲಾಠೀಪ್ರಹಾರ ಮಾಡುವಂತಿಲ್ಲ, ದೊಡ್ಡ ಮೊತ್ತದ ದಂಡ ವಿಧಿಸುತ್ತಾರೆ. ಅಂಗಡಿಗಳಲ್ಲಿ ಕನಿಷ್ಠ 2.5 ಗಂಟೆ ಸರದಿಯಲ್ಲಿ ಕಾಯಬೇಕು. ಆನ್‌ಲೈನ್‌ನಲ್ಲಿ ಬುಕ್ಕಿಂಗ್‌ ಮಾಡಿದರೆ ನಾಲ್ಕು ವಾರಗಳ ಕಾಲ ಕಾಯಬೇಕು.

ವಿದೇಶದಿಂದ ಮರಳಿದ ಅನಿವಾಸಿ ಭಾರತೀಯರು ಮತ್ತು ವಿದೇಶೀ ಪ್ರವಾಸಿಗರು ನಿಯಮಗಳನ್ನು ಗಾಳಿಗೆ ತೂರಿ, ಊರೆಲ್ಲ ಸುತ್ತಾಡಿ ಆತಂಕದ ವಾತಾವರಣ ಸೃಷ್ಟಿಸಿದರು. ಕುಟುಂಬವನ್ನು, ದೇಶವನ್ನು ಕೋವಿಡ್ 19 ಕಪಿಮುಷ್ಟಿಯಿಂದ ಪಾರು ಮಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.
– ಶ್ರದ್ಧಾ ನಿತಿನ್‌, ಲಂಡನ್‌

-ನಟರಾಜ್‌ ಮಲ್ಪೆ

Advertisement
Advertisement

Udayavani is now on Telegram. Click here to join our channel and stay updated with the latest news.

Next