Advertisement

London: ಭಾರತೀಯ ದಂಪತಿಗೆ 33 ವರ್ಷ ಜೈಲು

01:59 AM Feb 01, 2024 | Team Udayavani |

ಲಂಡನ್‌: ಗುಜರಾತ್‌ನಲ್ಲಿ ದತ್ತು ಪುತ್ರನನ್ನು ಹತ್ಯೆಗೈದು ದೇಶದಿಂದ ಪರಾರಿಯಾಗಿ ಬ್ರಿಟನ್‌ನಲ್ಲಿ ತಲೆ ಮರೆಸಿಕೊಂಡಿದ್ದ ಭಾರತೀಯ ಮೂಲದ ದಂಪತಿಗೆ ಮಾದಕವಸ್ತು ಸಾಗಣೆ ಪ್ರಕರಣದಲ್ಲಿ ಬ್ರಿಟನ್‌ ನ್ಯಾಯಾಲಯವು ತಲಾ 33 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

Advertisement

ಭಾರತೀಯ ಮೂಲದವರಾದ ಆರ್ತಿ ಧೀರ್‌ ಹಾಗೂ ಕಾವಲ್‌ಜಿತ್‌ಸಿನ್ಹಾ ರೈಜಾದಾ ಬ್ರಿಟನ್‌ನಿಂದ ಆಸ್ಟ್ರೇಲಿಯಾಗೆ ಅರ್ಧ ಟನ್‌ಗಿಂತಲೂ ಹೆಚ್ಚು ಕೊಕೇನ್‌ ಸರಬರಾಜು ಮಾಡಿದ ಪ್ರಕರಣ ಸಂಬಂಧಿಸಿದಂತೆ ಇದೀಗ ತೀರ್ಪು ಪ್ರಕಟಿಸಿ, ಶಿಕ್ಷೆ ವಿಧಿಸಲಾಗಿದೆ. ಗುಜರಾತ್‌ ಪ್ರಕರಣ ಸಂಬಂಧಿಸಿದಂತೆ ಭಾರತ ಸರ್ಕಾರವೂ ಈ ಇಬ್ಬರ ಹಸ್ತಾಂತರಕ್ಕೆ ಬ್ರಿಟನ್‌ಗೆ ಮನವಿ ಸಲ್ಲಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next