Advertisement

London: ಡಬ್ಲ್ಯುಆರ್‌ ಚೆಸ್‌ ಮಾಸ್ಟರ್ ಅರ್ಜುನ್‌ ಎರಿಗೈಸ್‌ಗೆ ಪ್ರಶಸ್ತಿ

01:22 AM Oct 19, 2024 | Team Udayavani |

ಲಂಡನ್‌: ಭಾರತದ ಗ್ರ್ಯಾನ್‌ಮಾಸ್ಟರ್‌ ಅರ್ಜುನ್‌ ಎರಿಗೈಸ್‌ ಅವರು ಫ್ರಾನ್ಸ್‌ನ ಮ್ಯಾಕ್ಸಿಮ್‌ ವಚಿಯೆರ್‌ ಲಾಗ್ರೇವ್‌ ಅವರನ್ನು ಅರ್ಮಗೆಂಡನ್‌ ಆಟದಲ್ಲಿ ಸೋಲಿಸಿ ಡಬ್ಲ್ಯುಆರ್‌ ಚೆಸ್‌ ಮಾಸ್ಟರ್ ಕೂಟದ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

Advertisement

ಕೂಟದುದ್ದಕ್ಕೂ ಅಮೋಘ ಆಟದ ಪ್ರದರ್ಶನ ನೀಡಿದ ಅರ್ಜುನ್‌ ಅವರು ಟ್ರೋಫಿಯೊಂದಿಗೆ 20 ಸಾವಿರ ಯುರೋ ನಗದು ಪಡೆದರು. ಫೈನಲ್‌ ಹೋರಾಟದಲ್ಲಿ ಮೊದಲ ಎರಡು ಕ್ಲಾಸಿಕಲ್‌ ಸ್ಪರ್ಧೆಯಲ್ಲಿ ಡ್ರಾ ಸಾಧಿಸಿದ ಬಳಿಕ ನಡೆದ ಅರ್ಮಗೆಂಡನ್‌ ಪಂದ್ಯದಲ್ಲಿ ಅವರು ಮ್ಯಾಕ್ಸಿಮ್‌ ಅವರನ್ನು ಸೋಲಿಸಿದ್ದರು. ಈ ಮೊದಲು ಸೆಮಿಫೈನಲ್‌ನಲ್ಲಿ ಅವರು ತನ್ನ ಸ್ನೇಹಿತ ಆರ್‌. ಪ್ರಜ್ಞಾನಂದ ಅವರನ್ನು ಕೆಡಹಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next