Advertisement

Loksabha result; ಕೇರಳದ ಬಿಜೆಪಿಯ ದೊಡ್ಡ ಯಾತ್ರೆಗೆ ನಾಂದಿಯಾಗಲಿದೆ: ಕೆ.ಸುರೇಂದ್ರನ್

02:35 PM Jun 05, 2024 | Team Udayavani |

ತಿರುವನಂತಪುರಂ: ‘ಬಿಜೆಪಿಗೆ ಇದು ಅತ್ಯಂತ ಮಹತ್ವದ ಗೆಲುವು. ನಾವು ನಮ್ಮ ಖಾತೆಯನ್ನು ತೆರೆದಿದ್ದೇವೆ ಮತ್ತು ನಮ್ಮ ಮತಗಳ ಹಂಚಿಕೆ ಹೆಚ್ಚಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ಕೇರಳದಲ್ಲಿ ಈ ಚುನಾವಣೆಯು ದೊಡ್ಡ ಯಾತ್ರೆಗೆ ನಾಂದಿಯಾಗಿದೆ. ಏಕೆಂದರೆ ಮುಂದೆ ನಮಗೆ ಸ್ಥಳೀಯ ಸಂಸ್ಥೆ ಮತ್ತು ವಿಧಾನಸಭೆ ಚುನಾವಣೆಗಳು ನಡೆಯಲಿವೆ, ಅದರಲ್ಲಿ ಬಿಜೆಪಿ ಪ್ರಮುಖ ಸ್ಪರ್ಧಿಯಾಗಲಿದೆ’ ಎಂದರು.

ತ್ರಿಶೂರ್ ನಲ್ಲಿ ನಟ ಸುರೇಶ್ ಗೋಪಿ ಅವರು ಆಯ್ಕೆಯಾಗುವ ಮೂಲಕ ಕೇರಳದ ಮೊದಲ ಬಿಜೆಪಿ ಸಂಸದ ಎಂಬ ಹೆಗ್ಗಳಿಗೆ ಪಡೆದುಕೊಂಡಿದ್ದಾರೆ. 16.68 % ಮತಗಳನ್ನು ಬಿಜೆಪಿ ಪಡೆದುಕೊಂಡಿದೆ.

ವಯನಾಡ್ ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಕಣಕ್ಕಿಳಿದಿದ್ದ ಸುರೇಂದ್ರನ್ 1,41,045 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದಿದ್ದಾರೆ. ಸಿಪಿಐ ನ ಅಣ್ಣಿ ರಾಜಾ ಎರಡನೇ ಸ್ಥಾನ ಪಡೆದಿದ್ದು, ರಾಹುಲ್ 6,47,445 ಮತಗಳನ್ನು ಪಡೆದು 3,64,422 ಮತಗಳ ಭಾರೀ ಗೆಲುವು ತನ್ನದಾಗಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next