Advertisement

Loksabha Election: ನಿತೀಶ್ ನಡೆ ಯಾವ ಕಡೆ…? ಪಕ್ಷದ ಬೆಂಬಲ ಬಗ್ಗೆ ತಿಳಿಸಿದ ಜೆಡಿಯು ನಾಯಕರು

04:07 PM Jun 04, 2024 | Team Udayavani |

ಹೊಸದಿಲ್ಲಿ: ಚುನಾವಣೋತ್ತರ ಸಮೀಕ್ಷೆಗಳನ್ನು ತಲೆಕೆಳಗು ಮಾಡಿದ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ದೇಶದ ಬಹಳಷ್ಟು ಕ್ಷೇತ್ರಗಳಲ್ಲಿ ಈಗಾಗಲೇ ಅಂತಿಮ ಫಲಿತಾಂಶ ಬಂದಿದ್ದರೆ, ಮತ್ತೆ ಹಲವೆಡೆ ಪ್ರಕ್ರಿಯೆ ಜಾರಿಯಲ್ಲಿದೆ.

Advertisement

ಇಸ್ ಬಾರ್ ಚಾರ್ ಸೋ ಪಾರ್ ಎಂದಿದ್ದ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಕೂಟ ಮುನ್ನೂರು ದಾಟುತ್ತಿಲ್ಲ. ಮತ್ತೊಂದೆಡೆ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡಿದ ಇಂಡಿಯಾ ಒಕ್ಕೂಟ 228 ಕ್ಷೇತ್ರಗಳಲ್ಲಿ ಗೆಲುವು/ಮುನ್ನಡೆಯಲ್ಲಿದೆ.

ಇಂದಿನ ಫಲಿತಾಂಶ ಕಂಡ ವಿಪಕ್ಷಗಳಿಗೆ ಅಧಿಕಾರದ ಆಸೆ ಸಹಜವಾಗಿಯೇ ಮೂಡಿದೆ. ಇದುವರೆಗೂ ಬಹುಮತದ ಸಂಖ್ಯೆ ದಾಟದ ಕಾರಣದಿಂದ ವಿಪಕ್ಷಗಳ ದೃಷ್ಟಿ ಜೆಡಿಯು ಪಕ್ಷದ ನಿತೀಶ್ ಕುಮಾರ್ ಮೇಲಿದೆ. ಪ್ರಧಾನಿ ಮೋದಿ ನರೇಂದ್ರ ಮೋದಿ ಅವರ ವಿರುದ್ಧ ವಿಪಕ್ಷಗಳ ಒಕ್ಕೂಟ ರಚನೆಗೆ ಮೂಲ ಕಾರಣವಾಗಿದ್ದ ನಿತೀಶ್ ಬಳಿಕ ಅಚ್ಚರಿಯ ರೀತಿಯಲ್ಲಿ ಎನ್ ಡಿಎ ಒಕ್ಕೂಟ ಸೇರಿದ್ದರು. ಇದೀಗ ಇಂಡಿಯಾ ಒಕ್ಕೂಟವು ಮತ್ತೆ ನಿತೀಶ್ ಕುಮಾರ್ ಅವರತ್ತ ಒಲವು ತೋರಿದೆ.

40 ಕ್ಷೇತ್ರಗಳ ಬಿಹಾರದಲ್ಲಿ ಜೆಡಿಯು-ಬಿಜೆಪಿ ಒಕ್ಕೂಟ ಮುಂದಿದೆ. ಒಂದು ವೇಳೆ ನಿತೀಶ್ ಮತ್ತೆ ಇಂಡಿಯಾ ಒಕ್ಕೂಟ ಸೇರಿದರೆ ಅದು ಸರ್ಕಾರ ರಚನೆಗೆ ಸಹಾಯವಾಗಬಹುದು.  ನಿತೀಶ್ ಕುಮಾರ್ ಅವರ ನಡೆಯ ಮೇಲೆ ಇಡೀ ದೇಶವೇ ಕಣ್ಣಿಟ್ಟಿರುವ ಸಮಯದಲ್ಲಿ ಪಕ್ಷದ ವಕ್ತಾರರೊಬ್ಬರು ಈ ಬಗ್ಗೆ ಮಾತನಾಡಿದ್ದಾರೆ.

“… ನಾವು ನಮ್ಮ ಹಿಂದಿನ ನಿಲುವನ್ನು ಮುಂದುವರಿಸುತ್ತೇವೆ. ನಿತೀಶ್ ಕುಮಾರ್ ನೇತೃತ್ವದಲ್ಲಿ, ಜೆಡಿಯು ಮತ್ತೊಮ್ಮೆ ಎನ್‌ ಡಿಎಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸುತ್ತದೆ… ನಾವು ಎನ್‌ಡಿಎ ಜೊತೆಗಿದ್ದೇವೆ, ನಾವು ಎನ್‌ಡಿಎ ಜೊತೆಯಲ್ಲಿಯೇ ಇರುತ್ತೇವೆ” ಎಂದು ಜೆಡಿಯು ವಕ್ತಾರ ಕೆಸಿ ತ್ಯಾಗಿ ಹೇಳಿಕೆಯನ್ನು ನ್ಯೂಸ್ 18 ವರದಿ ಮಾಡಿದೆ.

Advertisement

ಇದನ್ನೂ ಓದಿ:Kalaburagi; ಎಐಸಿಸಿ ಅಧ್ಯಕ್ಷರ ತವರಿನಲ್ಲಿ ಮತ್ತೆ ಕೈ ಹಿಡಿದ ಮತದಾರ: ಖರ್ಗೆ ಅಳಿಯ ಸಂಸತ್ ಗೆ

“ನಾವು ಎನ್‌ ಡಿಎ ಜೊತೆ ಇರಲಿದ್ದೇವೆ, ನಿತೀಶ್ ಕುಮಾರ್ ಅವರಿಗೆ ಸಮ್ಮಿಶ್ರ ಎಂದರೆ ಅರ್ಥವಾಗಿದೆ; ಪ್ರತಿಪಕ್ಷಗಳು ನಿತೀಶ್ ಕುಮಾರ್ ಅವರನ್ನು ಕಡಿಮೆ ಅಂದಾಜು ಮಾಡಿದೆ” ಎಂದು ಜೆಡಿಯು ನಾಯಕ ನೀರಜ್ ಕುಮಾರ್ ತಿಳಿಸಿದರು.

ನಿತೀಶ್ ಕುಮಾರ್ ಅವರು ಯಾವಾಗಲೂ ಬಿಹಾರದ ಜನರಿಗಾಗಿ ಯೋಚಿಸಿದ್ದಾರೆ ಎಂದು ಜೆಡಿಯು ಸಚಿವ ಜಮಾ ಖಾನ್ ಹೇಳಿದ್ದಾರೆ. “ನಮ್ಮ ನಾಯಕರು ಯಾವುದೇ ನಿರ್ಧಾರ ತೆಗೆದುಕೊಂಡರೂ ನಾವು ಅವರ ನಡೆಯನ್ನು ಅನುಸರಿಸುತ್ತೇವೆ ಮತ್ತು ಗೌರವಿಸುತ್ತೇವೆ. ಫಲಿತಾಂಶಗಳು ಹೊರಬರಲಿ. ನಿತೀಶ್ ಕುಮಾರ್ ಯಾವಾಗಲೂ ಬಿಹಾರದ ಜನರಿಗಾಗಿ ಯೋಚಿಸಿದ್ದಾರೆ ಮತ್ತು ಅವರ ನಿರ್ಧಾರವು ಸರ್ವೋಚ್ಚವಾಗಿರುತ್ತದೆ” ಎಂದು ಅವರು ಹೇಳಿದ್ದಾರೆ.

“ನಾವು ಎನ್‌ಡಿಎ ಜೊತೆ ದೃಢವಾಗಿ ಇದ್ದೇವೆ. ನಾವು ಕೇಂದ್ರದಲ್ಲಿ ಸರ್ಕಾರ ರಚಿಸುತ್ತೇವೆ ಎಂದು ಜೆಡಿಯುನ ಮತ್ತೊಬ್ಬ ಸಚಿವ ಮದನ್ ಸಹಾನಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next