Advertisement

ಸಂಸತ್‌ಗೆ ಕಾಲಿಟ್ಟ 25ರ ಕಿರಿಯರು; ಹಾಲಿ ಸಂಸದರಿಗೆ ಸೋಲುಣಿಸಿ ಗೆದ್ದ ಪುಷ್ಪೇಂದ್ರ

11:34 AM Jun 06, 2024 | Team Udayavani |

ನವದೆಹಲಿ: ದೇಶದಲ್ಲಿ 25 ವರ್ಷದ ನಾಲ್ವರು ಅಭ್ಯರ್ಥಿಗಳು ಸಂಸದರಾಗಿ ಚುನಾಯಿತರಾಗುವ ಮೂಲಕ ಹೊಸ ವಿಶೇಷತೆಗೆ ಈ ಬಾರಿಯ ಲೋಕಸಭೆ ಚುನಾವಣೆ ಸಾಕ್ಷಿಯಾಗಿದೆ. ಅತ್ಯಂತ ಕಿರಿಯ ಸಂಸದರಾಗಿ ಪುಷ್ಪೇಂದ್ರ ಸರೋಜ್‌, ಪ್ರಿಯಾ ಸರೋಜ್‌, ಶಾಂಭವಿ ಚೌಧರಿ, ಸಂಜನಾ ಜಾತವ್‌ ಚುನಾಯಿತರಾಗಿದ್ದಾರೆ.

Advertisement

ಇದನ್ನೂ ಓದಿ:Narendra Modi ಪ್ರಮಾಣ ವಚನ ಕಾರ್ಯಕ್ರಮಕ್ಕೆ ಬಾಂಗ್ಲಾ, ನೇಪಾಳ ಪ್ರಧಾನಿ, ಲಂಕಾ ಅಧ್ಯಕ್ಷರು

ಉತ್ತರ ಪ್ರದೇಶದ ಕೌಶಂಬಿ ಕ್ಷೇತ್ರದಿಂದ ಎಸ್‌ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪುಷ್ಪೇಂದ್ರ, ಉ.ಪ್ರ.ದ ಮಚ್ಲಿ ಶೆಹರ್‌ನಿಂದ
ಎಸ್‌ಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ಪ್ರಿಯಾ ಜಯ ಸಾಧಿಸಿದ್ದಾರೆ. ಬಿಹಾರದಲ್ಲಿ ಎಲ್‌ಜೆಪಿ ಟಿಕೆಟ್‌ನಿಂದ ಸಮಸ್ಟಿಪುರದಲ್ಲಿ ಸ್ಪರ್ಧಿಸಿದ್ದ ಶಾಂಭವಿ ಹಾಗೂ ರಾಜಸ್ಥಾನದ ಭರತ್‌ ಪುರದಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಸಂಜನಾ ಜಾತವ್‌ ಗೆಲುವು ಸಾಧಿಸಿದ ಅತ್ಯಂತ ಕಿರಿಯ ಅಭ್ಯರ್ಥಿಗಳಾಗಿದ್ದಾರೆ.

ಕರುನಾಡ ಕಿರಿಯ ಸಂಸದ ಸಾಗರ್‌ ಲೋಕಸಭೆಗೆ
ಕರ್ನಾಟಕದ ಬೀದರ್‌ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ 26 ವರ್ಷದ ಸಾಗರ್‌ ಈಶ್ವರ್‌ ಖಂಡ್ರೆ ವಿಜಯ ಸಾಧಿಸಿ ಸಂಸತ್‌ ಪ್ರವೇಶಿಸಿದ್ದಾರೆ. ಈ ಮೂಲಕ ಕರ್ನಾಟಕದಿಂದ ಲೋಕಸಭೆ ಪ್ರವೇಶಿಸಿದ ಅತ್ಯಂತ ಕಿರಿಯ ಸಂಸದನೆಂಬ ಖ್ಯಾತಿಗೂ ಸಾಗರ್‌ ಪಾತ್ರರಾಗಿದ್ದಾರೆ.

ಕೇಂದ್ರ ಖಾತೆ ರಾಜ್ಯ ಸಚಿವರಾಗಿದ್ದ ಭಗವಂತ್‌ ಖೂಬಾ ಅವರನ್ನು ಸಾಗರ್‌ ಬರೋಬ್ಬರಿ 1.29 ಲಕ್ಷ ಮತಗಳ ಅಂತರದಲ್ಲಿ ಮಣಿಸಿ ವಿಜಯ ಪತಾಕೆ ಹಾರಿಸಿದ್ದಾರೆ. ಸಾಗರ್‌ ಅವರು ಕರ್ನಾಟಕ ಅರಣ್ಯ ಸಚಿವರಾದ ಈಶ್ವರ್‌ ಖಂಡ್ರೆ ಅವರ ಪುತ್ರ.

Advertisement
Advertisement

Udayavani is now on Telegram. Click here to join our channel and stay updated with the latest news.

Next