Advertisement

Loksabha ಚುನಾವಣ ಫ‌ಲಿತಾಂಶ ನಾಗಪುರದ ಸಿನೆಮಾ ಥಿಯೇಟರ್‌ನಲ್ಲಿ ಪ್ರಸಾರ

12:39 AM Jun 01, 2024 | Team Udayavani |

ಹೊಸದಿಲ್ಲಿ: ಜೂ.4ರ ಲೋಕಸಭೆ ಚುನಾವಣೆಯ ಫ‌ಲಿತಾಂಶದತ್ತ ನೆಟ್ಟಿದೆ. ಇದನ್ನು ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ನಾಗಪುರದ ಮೂವಿ ಮ್ಯಾಕ್ಸ್‌ ಥಿಯೇ ಟರ್‌ ಸತತ 6 ಗಂಟೆ ಫ‌ಲಿತಾಂಶವನ್ನು ಪ್ರಸಾರ ಮಾಡುವುದಾಗಿ ಘೋಷಿಸಿದೆ. ಜೂ.4ರ ಬೆಳಗ್ಗೆ 8ಗಂಟೆಗೆ ಮತ ಎಣಿಕೆಯಿಂದ ಅಂತಿಮ ಫ‌ಲಿತಾಂಶ ಘೋಷಣೆಯಾಗುವವರೆಗೆ ಪ್ರಸಾರ ನಡೆಯಲಿದೆ. ಆ ದಿನದಂದು ದುಬಾರಿ ರಿಕ್ಲೈನರ್‌ ಸೀಟ್‌ ಕೇವಲ 149 ರೂ., ಉಳಿದ ಸೀಟುಗಳು 99ರೂ. ಗೆ ಲಭ್ಯವಿರಲಿವೆ.

Advertisement

ನೆಟ್ಟಿಗರ ಅಚ್ಚ ರಿ: ಸಿನೆಮಾ ಥಿಯೇಟರ್‌ನಲ್ಲಿ ಫ‌ಲಿತಾಂಶ ಪ್ರಸಾರಕ್ಕೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಥಿಯೇಟರ್‌ನಲ್ಲಿ ಶಿವಸೇನೆ, ಎನ್‌ಸಿಪಿ, ಬಿಜೆಪಿ-ಕಾಂಗ್ರೆಸ್‌ ಪಕ್ಷದವರು ದಂಗೆ ಏಳದಿರಲಿ ಎಂದು ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next