ಹೊಸದಿಲ್ಲಿ: ಲೋಕಸಭಾ ಸ್ಪೀಕರ್ ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಬೆನ್ನಲ್ಲೇ ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೂ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಂಬಂಧ ವಿಪಕ್ಷ ಕೂಟದ ನಾಯಕರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ದಿಲ್ಲಿ ನಿವಾಸದಲ್ಲಿ ಸಭೆ ನಡೆಸಿ ಚರ್ಚಿಸಿದ್ದಾರೆ ಎನ್ನಲಾಗಿದೆ.
ಬುಧವಾರ ನಡೆಯಲಿರುವ ಸ್ಪೀಕರ್ ಚುನಾವಣೆ ವೇಳೆ ಯಾವ ಕಾರ್ಯತಂತ್ರ ಅನುಸರಿಸಬೇಕು ಎಂಬು ದು ಸೇರಿ, ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆಯ ಬಗ್ಗೆ ಚರ್ಚಿಸುವುದೂ ಈ ಸಭೆಯ ಉದ್ದೇಶ ವಾಗಿತ್ತು. ಐಎನ್‌ಡಿಐಎ ಕೂಟದ ಬಹುತೇಕ ನಾಯ ಕರು ಈ ಸಭೆ ಯಲ್ಲಿ ಪಾಲ್ಗೊಂಡಿ ದ್ದರು ಎನ್ನಲಾಗಿದೆ.
ಎನ್‌ಡಿಎ ಕೂಟದ ಸಭೆ: ಮತ್ತೂಂದೆಡೆ ಬಿಜೆಪಿ ನಾಯಕ ಅಮಿತ್ ಶಾ ಅವರು ದಿಲ್ಲಿಯಲ್ಲಿ ಮಂಗಳವಾರ ರಾತ್ರಿ ಸಂಸದರ ಸಭೆ ನಡೆಸಿದರು. ಸ್ಪೀಕರ್ ಚುನಾವಣೆಯಲ್ಲಿ ಸ್ಪಷ್ಟ ಗೆಲುವು ಸಾಧ್ಯವಿ ದ್ದರೂ, ಯಾವುದೇ ರಿಸ್ಕ್ ತೆಗೆದುಕೊಳ್ಳಲು ಮುಂದಾ ಗದ ಅಮಿತ್ ಶಾ, ಬುಧವಾರ ಎಲ್ಲ ಸಂಸದರಿಗೆ ಸಂಸತ್ತಿನಲ್ಲಿ ಬೆಳಗ್ಗೆ 10.30ಕ್ಕೆ ಹಾಜರಿರುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ವಿಪ್ ನೀಡಿದ ಕಾಂಗ್ರೆಸ್: ಸ್ಪೀಕರ್ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಸಂಸದರಿಗೆ ವಿಪ್ ಜಾರಿ ಮಾಡಿದೆ. ಬುಧವಾರ ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಹಾಜರಿರುವಂತೆ ವಿಪ್‌ನಲ್ಲಿ ತಿಳಿಸಿದೆ. ಮುಖ್ಯ ಸಚೇತಕವಾಗಿರುವ ಕೆ.ಸುರೇಶ್ ಅವರೂ ಐಎನ್‌ಡಿಐಎ ಕೂಟದ ಸ್ಪೀಕರ್ ಅಭ್ಯರ್ಥಿಯೂ ಆಗಿದ್ದಾರೆ.
ಸ್ಪೀಕರ್ ಚುನಾವಣೆಗೆ ವಿಪಕ್ಷ ಕೂಟದಲ್ಲೇ ಒಡಕು: ಟಿಎಂಸಿ ಅಪಸ್ವರ
ಸ್ಪೀಕರ್ ಚುನಾವಣೆಗೆ ಜಂಟಿ ಅಭ್ಯರ್ಥಿಯಾಗಿ ಕೆ.ಸುರೇಶ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಐಎನ್‌ಡಿಐಎ ಕೂಟದ ಪ್ರಮುಖ ಪಕ್ಷವಾಗಿರುವ ತೃಣಮೂಲ ಕಾಂಗ್ರೆಸ್ ಅಪಸ್ವರ ಎತ್ತಿದೆ. ಸುರೇಶ್ ನಾಮಪತ್ರ ಸಲ್ಲಿಸುವಾಗ ಟಿಎಂಸಿ ನಾಯಕರು ಜತೆಯಲ್ಲಿರಲಿಲ್ಲ. ಈ ಕುರಿತು ಮಾತನಾಡಿದ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ, ಈ ಕುರಿತೂ ಯಾರೂ ನಮ್ಮೊಂದಿಗೆ ಮಾತನಾಡಿಲ್ಲ. ಯಾರೂ ಸಂಪರ್ಕಿಸಿಲ್ಲ. ದುರದೃಷ್ಟವಶಾತ್ ಇದೊಂದು ಏಕಪಕ್ಷೀಯ ನಿರ್ಧಾರವಾಗಿದೆ. ಈ ಬಗ್ಗೆ ನಮ್ಮ ನಾಯಕಿ ಮಮತಾ ಬ್ಯಾನರ್ಜಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.