Advertisement

Loksabha; ಪ್ರಚಾರಕ್ಕೆ ಸಿಗದ ಹಣಕಾಸು ನೆರವು..: ಟಿಕೆಟ್ ಮರಳಿಸಿದ ಕಾಂಗ್ರೆಸ್ ಅಭ್ಯರ್ಥಿ

02:13 PM May 04, 2024 | Team Udayavani |

ಭುವನೇಶ್ವರ್: ಪುರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುಚರಿತಾ ಮೊಹಂತಿ ಅವರು ಟಿಕೆಟ್ ಹಿಂದೆ ನೀಡಿದ್ದಾರೆ. ಪಕ್ಷವು ತನಗೆ ಚುನಾವಣಾ ನಿಧಿಯನ್ನು ನಿರಾಕರಿಸಿದೆ ಎಂದು ಮೊಹಂತಿ ಹೇಳಿಕೊಂಡಿದ್ದಾರೆ.

Advertisement

ಉಮೇದುವಾರಿಕೆ ಹಿಂಪಡೆಯುವ ಪತ್ರದ ಕುರಿತು ಎಎನ್‌ಐ ಜೊತೆ ಮಾತನಾಡಿದ ಕಾಂಗ್ರೆಸ್ ನಾಯಕಿ ಮೊಹಂತಿ, “ಪಕ್ಷವು ನನಗೆ ಹಣ ನೀಡಲು ಸಾಧ್ಯವಾಗದ ಕಾರಣ ನಾನು ಟಿಕೆಟ್ ಹಿಂತಿರುಗಿಸಿದ್ದೇನೆ. ಇನ್ನೊಂದು ಕಾರಣವೆಂದರೆ ಏಳು ವಿಧಾನಸಭಾ ಕ್ಷೇತ್ರಗಳ ಕೆಲವು ಸ್ಥಾನಗಳಲ್ಲಿ ಗೆಲ್ಲುವ ಅಭ್ಯರ್ಥಿಗಳು ಇಲ್ಲದಿರುವುದು. ಕೆಲವು ದುರ್ಬಲ ಅಭ್ಯರ್ಥಿಗಳಿಗೆ ಟಿಕೆಟ್ ಸಿಕ್ಕಿದೆ. ನನಗೆ ಈ ರೀತಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಪುರಿ ಕ್ಷೇತ್ರದಲ್ಲಿ ತನ್ನ ಪ್ರಚಾರಕ್ಕೆ ಹಣಕಾಸಿನ ಕೊರತೆಯಿಂದ ತೀವ್ರ ಹೊಡೆತ ಬಿದ್ದಿದೆ ಎಂದು ಮೊಹಂತಿ ಈ ಹಿಂದೆ ಹೇಳಿದ್ದಾರೆ. ಸಾರ್ವಜನಿಕ ಕೊಡುಗೆ ಅಭಿಯಾನದ ಮೂಲಕ ಹಣವನ್ನು ಗಳಿಸುವ ತನ್ನ ಪ್ರಯತ್ನಗಳು ಯಾವುದೇ ಫಲಿತಾಂಶವನ್ನು ನೀಡಲಿಲ್ಲ ಎಂದು ಅವರು ಹೇಳಿದ್ದಾರೆ.

ಪಕ್ಷದ ನಾಯಕತ್ವದಿಂದ ಸಹಾಯ ಪಡೆಯಲು ಮೊಹಂತಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರಿಗೆ ಪತ್ರ ಬರೆದಿದ್ದಾರೆ. “ಪಕ್ಷವು ನನಗೆ ಹಣ ನೀಡದ ಕಾರಣ ಪುರಿ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಪ್ರಚಾರಕ್ಕೆ ಭಾರಿ ಹೊಡೆತ ಬಿದ್ದಿದೆ. ಎಐಸಿಸಿ ಒಡಿಶಾ ಉಸ್ತುವಾರಿ ಅಜೋಯ್ ಕುಮಾರ್ ಜಿ ಅವರು ನಾನೇ ಹಣ ಹೊಂದಿಸಬೇಕು ಎಂದು ಹೇಳಿದ್ದಾರೆ. ನಾನು 10 ವರ್ಷಗಳ ಹಿಂದೆ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಸಂಬಳ ಪಡೆಯುವ ವೃತ್ತಿಪರ ಪತ್ರಕರ್ತಳಾಗಿದ್ದೆ. ಪುರಿಯಲ್ಲಿ ನನ್ನ ಪ್ರಚಾರಕ್ಕಾಗಿ ನನ್ನ ಬಳಿ ಇರುವ ಎಲ್ಲವನ್ನೂ ನೀಡಿದ್ದೇನೆ” ಎಂದಿದ್ದಾರೆ.

“ಪ್ರಗತಿಪರ ರಾಜಕೀಯಕ್ಕಾಗಿ ನನ್ನ ಅಭಿಯಾನವನ್ನು ಬೆಂಬಲಿಸಲು ನಾನು ಸಾರ್ವಜನಿಕ ದೇಣಿಗೆ ಅಭಿಯಾನವನ್ನು ಪ್ರಯತ್ನಿಸಿದೆ, ಇದುವರೆಗೆ ಹೆಚ್ಚು ಯಶಸ್ವಿಯಾಗಲಿಲ್ಲ. ನಾನು ಯೋಜಿತ ಪ್ರಚಾರದ ವೆಚ್ಚವನ್ನು ಕನಿಷ್ಠಕ್ಕೆ ಕಡಿತಗೊಳಿಸಲು ಪ್ರಯತ್ನಿಸಿದೆ” ಎಂದು ಅವರು ಹೇಳಿದರು. ಪಕ್ಷದ ಕೇಂದ್ರ ನಾಯಕತ್ವವು ಹಣವನ್ನು ಒದಗಿಸುವಂತೆ ತನ್ನ ಹಲವಾರು ಮನವಿಗಳಿಗೆ ಒಲವು ತೋರಲಿಲ್ಲ ಎಂದು ಅವರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next