Advertisement

Loksabha; ದೇಶಕ್ಕೆ ಬೆಂಕಿ ಹಚ್ಚಿ ಎನ್ನುವವರನ್ನು ಸೋಲಿಸಿ: ಮತದಾರರಿಗೆ ಮೋದಿ

11:22 PM Apr 02, 2024 | Team Udayavani |

ರುದ್ರಾಪುರ: “ವಿಪಕ್ಷಗಳ ಒಬ್ಬೊಬ್ಬರನ್ನೇ ಹುಡುಕಿ, ಹುಡುಕಿ ಸ್ವತ್ಛಗೊಳಿಸಿ. ಈ ಬಾರಿ ರಣಾಂಗಣದಲ್ಲಿ ಒಬ್ಬರೂ ಉಳಿಯದಂತೆ ನೋಡಿಕೊಳ್ಳಿ.’ ಇದು ಉತ್ತರಾಖಂಡದ ಮತದಾರರಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆ.

Advertisement

ಇಲ್ಲಿನ ರುದ್ರಾಪುರದಲ್ಲಿ ಮಂಗಳವಾರ ಲೋಕಸಭೆ ಚುನಾವಣೆ ಪ್ರಚಾರ ರ್ಯಾಲಿಯಲ್ಲಿ ಮಾತನಾಡುತ್ತಾ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಹರಿಹಾಯ್ದ ಮೋದಿ, “”ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶಕ್ಕೆ ಬೆಂಕಿ ಬೀಳುತ್ತದೆ ಎಂದು ವಿಪಕ್ಷಗಳ ರಾಜಮನೆತನದ “ರಾಜಕುಮಾರ’ ಘೋಷಿಸಿದ್ದಾರೆ. ಅವರು 60 ವರ್ಷ ದೇಶವನ್ನು ಆಳಿದರು. ಆದರೆ ಕೇವಲ 10 ವರ್ಷ ಅಧಿಕಾರದಿಂದ ದೂರುವುಳಿದ ತತ್‌ಕ್ಷಣ ಅವರು ದೇಶಕ್ಕೆ ಬೆಂಕಿ ಹಚ್ಚುವ ಮಾತನಾಡುತ್ತಾರೆ. ಅಂಥವರಿಗೆ ಶಿಕ್ಷೆ ನೀಡಬೇಕೆಂದು ನೀವು ಬಯಸಿದ್ದೇ ಆದಲ್ಲಿ, ಒಬ್ಬೊಬ್ಬರನ್ನೂ ಹುಡುಕಿ ಹುಡುಕಿ, ಅವರು ಮೈದಾನದಲ್ಲೇ ಇರದಂತೆ ಮಾಡಿ” ಎಂದು ಗುಡುಗಿದ್ದಾರೆ.

ಬಿಜೆಪಿಯೇನಾದರೂ ಈ ಚುನಾವಣೆಯಲ್ಲಿ ಗೆದ್ದರೆ, ಅವರು ಸಂವಿಧಾನವನ್ನೇ ಬದಲಾಯಿಸುತ್ತಾರೆ. ಆಗ ಇಡೀ ದೇಶಕ್ಕೆ ಬೆಂಕಿ ಬೀಳುತ್ತದೆ, ನಮ್ಮ ದೇಶ ಉಳಿಯುವುದಿಲ್ಲ ಎಂದು ಇತ್ತೀಚೆಗೆ ಇಂಡಿಯಾ ಒಕ್ಕೂಟದ ರ್ಯಾಲಿಯಲ್ಲಿ ರಾಹುಲ್‌ಗಾಂಧಿ ಹೇಳಿದ್ದರು.

ಭ್ರಷ್ಟರು ಒಟ್ಟಾಗಿರುವ ಚುನಾವಣೆ ಇದು: ಮೋದಿ

ಜೈಪುರ: “ಭ್ರಷ್ಟಾಚಾರ ವಿರುದ್ಧದ ಕ್ರಮವನ್ನು ತಡೆಯುವುದಕ್ಕಾಗಿ ಭ್ರಷ್ಟರು ಒಟ್ಟಾಗಿ ಚುನಾ ವಣ ಪ್ರಚಾರ ಮಾಡುತ್ತಿರುವ ಮೊದಲ ಲೋಕಸಭಾ ಚುನಾವಣಾ ಇದಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳ ವಾರ ಹೇಳಿದ್ದಾರೆ. ರಾಜಸ್ಥಾನದ ಕೋಟಪುತಲಿ ಯಲ್ಲಿ ಆಯೋಜಿಸಲಾಗಿದ್ದ ಚುನವಣ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಈ ಚುನಾವಣೆಯು ಭ್ರಷಾcಚಾರ ವನ್ನು ಬೇರುಮಟ್ಟದಿಂದ ಕಿತ್ತೂಗೆಯುವ ಚುನಾವಣೆಯಾಗಲಿದೆ. ಸ್ವಾವಲಂಬಿ ಭಾರತ, ರೈತರ ಏಳಿಗೆ, ಪ್ರತೀ ಮನೆಗೂ ನೀರು ಪೂರೈಸುವುದಕ್ಕಾಗಿ ನಡೆಯುತ್ತಿರುವ ಚುನಾವಣೆ ಇದೆ. ಆದರೆ ಕಾಂಗ್ರೆಸ್‌ ಮತ್ತು ಇಂಡಿಯಾ ಒಕ್ಕೂಟವು ದೇಶಕ್ಕಾಗಿ ಚುನಾವಣೆ ನಡೆಸದೇ ತಮ್ಮ ಸ್ವಾರ್ಥಕ್ಕೆ ಸ್ಪರ್ಧಿಸುತ್ತಿವೆ” ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next