Advertisement

Presidential Election; ರಾಹುಲ್‌ ಗಾಂಧಿ- ಕಮಲಾ ಹ್ಯಾರಿಸ್‌ ಫೋನ್‌ ಮಾತುಕತೆ

12:59 AM Jul 13, 2024 | Team Udayavani |

ಹೊಸದಿಲ್ಲಿ: ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹಾಗೂ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರು ದೂರವಾಣಿ ಮೂಲಕ ಶುಕ್ರವಾರ ಮಾತುಕತೆ ನಡೆಸಿ ದ್ದಾರೆ. ಯಾವ ವಿಚಾರದ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ಸ್ಪಷ್ಟ ಮಾಹಿತಿ ಇಲ್ಲವಾದರೂ, ಈ ವರ್ಷ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದ ಮಾತುಕತೆ ಎನ್ನಲಾಗುತ್ತಿದೆ.

Advertisement

ಭಾರತೀಯ ಹಾಗೂ ಆಫ್ರಿಕನ್‌ ಮೂಲದ ಕಮಲಾ ಹ್ಯಾರಿಸ್‌ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಸ್ಪರ್ಧೆ ಮಾಡಬಹುದು ಎಂದು ಡೆಮಾಕ್ರಾಟಿಕ್‌ ಪಕ್ಷದ ಆಪ್ತ ವಲಯ ದಲ್ಲಿ ಚರ್ಚೆಯಾಗುತ್ತಿರುವಂತೆಯೇ ಈ ಬೆಳವಣಿಗೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next