Advertisement

ಸ್ವಾವಲಂಬಿ ಬೂತ್‌: ನಳಿನ್‌ ಪರ ಮತಯಾಚನೆ

11:06 PM Apr 16, 2019 | Team Udayavani |

ಕಾಣಿಯೂರು: ದ.ಕ. ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲ್‌ ಪರ ಚಾರ್ವಾಕ 61ನೇ ಬಿಜೆಪಿ ಸ್ವಾವಲಂಬಿ ಬೂತ್‌ನಲ್ಲಿ 2ನೇ ಸುತ್ತಿನ ಮತಯಾಚನೆ ನಡೆಯಿತು. ಸುಮಾರು 85ಕ್ಕೂ ಮಿಕ್ಕಿ ಕಾರ್ಯಕರ್ತರು ಬಿಜೆಪಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

Advertisement

ಸುಳ್ಯ ಬಿಜೆಪಿ ಮಂಡಲ ಸಮಿತಿ ಸದಸ್ಯ ಗಣೇಶ್‌ ಉದುನಡ್ಕ, ಚಾರ್ವಾಕ ಬಿಜೆಪಿ ಬೂತ್‌ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪಾಳ್ತಿಲ, ಕಾರ್ಯದರ್ಶಿ ರಾಘವ ಕೋಡಂದೂರು, ಕಾಣಿಯೂರು ಗ್ರಾ.ಪಂ. ಅಧ್ಯಕ್ಷೆ ಮಾಧವಿ ಕೋಡಂದೂರು, ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ, ನಿರ್ದೇಶಕರಾದ ಮಾಧವ ಎಣ್ಮೂರು, ರಾಜೀವಿ ಬೊಮ್ಮೊಳಿಕೆ, ಚಾರ್ವಾಕ ಸಿ.ಎ. ಬ್ಯಾಂಕ್‌ ಉಪಾಧ್ಯಕ್ಷ ಆನಂದ ಮೇಲ್ಮನೆ, ನಿರ್ದೇಶಕ ವಿಶ್ವನಾಥ ದೇವಿನಗರ, ಕಾಣಿಯೂರು ಗ್ರಾ.ಪಂ. ಸದಸ್ಯೆ ರುಕ್ಮಿಣಿ ನಾಗಲೋಕ, ಗ್ರಾ.ಪಂ. ಮಾಜಿ ಅಧ್ಯಕ್ಷ ಚಲ್ಲ ಅಯೋಧ್ಯೆ, ತಿಮ್ಮಪ್ಪ ಪೂಜಾರಿ ಎಣ್ಮೂರು, ಗ್ರಾ.ಪಂ. ಮಾಜಿ ಸದಸ್ಯರಾದ ಬೆಳಿಯಪ್ಪ ಗೌಡ ದೇವರತ್ತಿಮಾರು, ಹರಿಶ್ಚಂದ್ರ ನೀಟಡ್ಕ, ಸುಂದರ ಅಬಿಕಾರ ಸೇರಿದಂತೆ ಪಕ್ಷದ ಹಲವಾರು ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ತೊಡಗಿದರು.

ಸ್ವಯಂ ವೆಚ್ಚ ಭರಿಸುತ್ತಾರೆ
ಚಾರ್ವಾಕ ಗ್ರಾಮದ 61ನೇ ಬೂತ್‌ನ ಕಾರ್ಯಕರ್ತರು ಪಕ್ಷದ ಚುನಾವಣ ವೆಚ್ಚವನ್ನು ಪಡೆಯದೇ ಚುನಾವಣೆಯ ಪ್ರಚಾರ ಸಮಯದಲ್ಲಿ ಬೇಕಾದ ದಿನನಿತ್ಯದ ಖರ್ಚುಗಳನ್ನು ಸ್ವತಃ ಕಾರ್ಯಕರ್ತರೇ ಭರಿಸುತ್ತಿರುವುದರಿಂದ ಚಾರ್ವಾಕ 61ನೇ ಬೂತ್‌ ಬಿಜೆಪಿಯ ಸ್ವಾವಲಂಬಿ ಬೂತ್‌ ಎಂದು ಹೆಸರು ಪಡೆದುಕೊಂಡಿದೆ. ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮತ್ತು ಈ ಸಲದ ಲೋಕಸಭಾ ಕ್ಷೇತ್ರದ ಚುನಾವಣೆ ಯಲ್ಲಿಯೂ ಸುಮಾರು 85ಕ್ಕೂ ಮಿಕ್ಕಿ ಬಿಜೆಪಿಯ ಕಾರ್ಯಕರ್ತರು ಒಂದೇ ಬೂತ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಉತ್ತಮ ಉದ್ದೇಶ
ಒಗ್ಗಟ್ಟಿನಲ್ಲಿ ಸೇವೆ ಮಾಡುತ್ತಿದ್ದೇವೆ. ಒಟ್ಟಿನಲ್ಲಿ ಚಾರ್ವಾಕ ಗ್ರಾಮ ವು ಬಿಜೆಪಿಯ ಸ್ವಾವಲಂಬಿ ಬೂತ್‌ ಆಗಿ ನಿರ್ಮಾಣವಾಗಬೇಕು ಎನ್ನುವ ಉದ್ದೇಶ ವನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ ಎಂದು ಸುಳ್ಯ ಬಿಜೆಪಿ ಮಂಡಲ ಸಮಿತಿ ಸದಸ್ಯ ಗಣೇಶ್‌ ಉದುನಡ್ಕ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next