Advertisement

ಚಿಮ್ಮಲಗಿ ಏತ ನೀರಾವರಿ ಪೂರ್ವ ಕಾಲುವೆಗೆ ಲೋಕಾಯುಕ್ತರ ಭೇಟಿ

05:01 PM Apr 23, 2022 | Shwetha M |

ನಾಲತವಾಡ: ಅರಸನಾಳ ಬಳಿ ಅರ್ಧಕ್ಕೆ ನಿಂತ ಪೂರ್ವ ಚಿಮ್ಮಲಗಿ ಏತ ನೀರಾವರಿ ಕಾಲುವೆ ಕಾಮಗಾರಿ ಭರದಿಂದ ಸಾಗಿದ್ದು ಮುಂದಿನ 2-3 ತಿಂಗಳಲ್ಲಿ ಕಾಲುವೆಗೆ ನೀರು ಹರಿಸುವ ಸಾಧ್ಯತೆ ಇದೆ. ಈಗಾಗಲೇ ಕೆಬಿಜೆಎನ್‌ ಎಲ್‌ ಅಧಿಕಾರಿಗಳು ಎಲ್ಲ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಲೋಕಾಯುಕ್ತ ಪೊಲೀಸ್‌ ಇನ್ಸ್‌ಪೆಕ್ಟರ್‌ ಗರುನಾಥ ಚವ್ವಾಣ ಹೇಳಿದರು.

Advertisement

ಕಳೆದ ಸುಮಾರು ವರ್ಷಗಳಿಂದ ಪೂರ್ವ ಚಿಮ್ಮಲಗಿ ಏತ ನೀರಾವರಿ ಕಾಲುವೆಗೆ ಅರ್ಧಕ್ಕೆ ನಿಂತ ಕುರಿತು ಹಾಗೂ ಕಾಮಗಾರಿ ಪೂರ್ಣಗೊಳ್ಳದ ಕಿಮೀ ಭೌತಿಕ ಲೆಕ್ಕಾಚಾರದಲ್ಲಿ ಸಂಶಯ ವ್ಯಕ್ತಪಡಿಸಿದ ಸ್ಥಳೀಯ ರೈತ ಮಹಾಂತೇಶ ಮೆನದಾಳಮಠ ಅವರು ತನಿಖೆ ನಡೆಸುವಂತೆ ವಿಜಯಪುರ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು. ದೂರಿಗೆ ಸ್ಪಂದಿಸಿದ ಲೋಕಾಯುಕ್ತ ಅಧಿಕಾರಿಗಳು ಅಮರೇಶ್ವರ ದೇವಸ್ಥಾನ ಹಾಗೂ ಹಳ್ಳೂರ ಫಂಕ್ಷನ್‌ ಪ್ಯಾಲೇಸ್‌ ಬಳಿಯ ಕಾಲುವೆಯನ್ನು ಪರಿಶೀಲಿಸಿ ನಂತರ ಮಾತನಾಡಿದರು.

ಹಲವು ರೈತರು ಕಾಲುವೆ ಕಾಮಗಾರಿ ವೇಳೆ ತಕರಾರು ಮಾಡಿದ್ದರಿಂದ ವಿಳಂಬಗೊಂಡಿದೆ. ಈಗಾಗಲೇ ಅರಸನಾಳ ಬಳಿ ಕಾಮಗಾರಿ ನಡೆದಿದೆ ಆದಷ್ಟು ಬೇಗನೆ ಕಾಲುವೆಗೆ ನೀರು ಹರಿಸುವ ಎಲ್ಲ ವ್ಯವಸ್ಥೆಯನ್ನು ಕೆಬಿಜೆಎನ್‌ ಎಲ್‌ ಅಧಿಕಾರಿಗಳು ಕೈಗೊಂಡಿದ್ದಾರೆ ಎಂದರು. ಈ ವೇಳೆ ಕೆಬಿಜೆಎನ್‌ಎಲ್‌ ಅಧಿಕಾರಿಗಳಾದ ಎಂ.ಆರ್‌. ಹಲಗತ್ತಿ, ಎಸ್‌.ಎ. ತೊಂಡಿಹಾಳ, ಎ.ಯು. ಬಾಗವಾನ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next