Advertisement

ಶಿಷ್ಟಾಚಾರ ನೆಪದಲ್ಲಿ ಲೋಪ:ಸಚಿವ ದೇಶಪಾಂಡೆ ಗರಂ

09:47 AM Dec 13, 2017 | Team Udayavani |

ಹುಬ್ಬಳ್ಳಿ: ಇಲ್ಲಿನ ವಿಮಾನ ನಿಲ್ದಾಣ ನೂತನ ಟರ್ಮಿನಲ್‌ ಉದ್ಘಾಟನೆ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಹೆಸರಿಲ್ಲದಿರುವುದು, ಸ್ಥಳೀಯ ವಿಧಾನಸಭೆ-ವಿಧಾನ ಪರಿಷತ್‌ ಸದಸ್ಯರನ್ನು ಕಡೆಗಣಿಸಿರುವ ಬಗ್ಗೆ ಸಚಿವ ಆರ್‌. ವಿ. ದೇಶಪಾಂಡೆ ಗರಂ ಆಗಿದ್ದರಲ್ಲದೆ, ಕೇಂದ್ರ ಸಚಿವರ ಎದುರಲ್ಲೇ ತಮ್ಮ ಅಸಮಾಧಾನ ಹೊರ ಹಾಕಿದರು.

Advertisement

ಕೇಂದ್ರ ಸಚಿವರಿಗಿಂತ ಮುಂಚೆಯೇ ನೂತನ ಟರ್ಮಿನಲ್‌ ಉದ್ಘಾಟನಾ ಸಮಾರಂಭದ ವೇದಿಕೆ ಸ್ಥಳಕ್ಕೆ ಸಚಿವರಾದ
ಆರ್‌.ವಿ.ದೇಶಪಾಂಡೆ ಹಾಗೂ ವಿನಯ ಕುಲಕರ್ಣಿ ಆಗಮಿಸಿದರು. ವೇದಿಕೆ ಬ್ಯಾನರ್‌ನಲ್ಲಿ ತಮ್ಮ ಭಾವಚಿತ್ರ ಇಲ್ಲದ್ದನ್ನು ಕಂಡು ಅಸಮಾಧಾನಗೊಂಡ ಅವರು ಮೂಲಭೂತ ಸೌಲಭ್ಯ ಸಚಿವರಾದ ತಮ್ಮ ಹೆಸರೇ ಇಲ್ಲ ಎಂದು ಅಸಮಾಧಾನಗೊಂಡರಲ್ಲದೇ  ವಿಮಾನ ನಿಲ್ದಾಣ ಪ್ರಾಧಿಕಾರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದೇನು ಸರಕಾರಿ ಕಾರ್ಯಕ್ರಮವೋ ಅಥವಾ ಪಕ್ಷದ ಕಾರ್ಯಕ್ರಮವೋ ಎಂದು ಪ್ರಶ್ನಿಸಿದರು ಎನ್ನಲಾಗಿದೆ. ಡೀಸಿ ಆಗಮಿಸಿದಾಗಲೂ ಅವರ ಬಳಿಯೂ ಶಿಷ್ಟಾಚಾರ ಪಾಲನೆ ಆಗದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವೇದಿಕೆಗೆ ಆಗಮಿಸಿ ಆಸೀನರಾದ ನಂತರ ಕೇಂದ್ರ ಸಚಿವರಾದ ಅಶೋಕ ಗಜಪತಿ ರಾಜು, ಅನಂತ ಕುಮಾರ, ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌, ಸಂಸದ ಪ್ರಹ್ಲಾದ ಜೋಶಿ ಮುಂದೆಯೂ ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದ್ದು ಗೋಚರಿಸಿತು.  

ವೇದಿಕೆಯಲ್ಲೂ ಅಸಮಾಧಾನ: ಸಮಾರಂಭದಲ್ಲಿ ಮಾತನಾಡುವ ಸಂದರ್ಭದಲ್ಲೂ ಸಚಿವ ದೇಶಪಾಂಡೆ, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸುಮಾರು 590 ಎಕರೆ ಜಮೀನು ಸ್ವಾಧೀನ, ವಿವಿಧ ಮೂಲ ಸೌಕರ್ಯಕ್ಕೆ ರಾಜ್ಯ ಸರಕಾರ ಅಂದಾಜು 346 ಕೋಟಿ ರೂ. ನೀಡಿದೆ. ಕೇಂದ್ರ ಸರಕಾರ ವಿಮಾನ ನಿಲ್ದಾನ ರನ್‌ವೇ ಇನ್ನಿತರ ಕಾರ್ಯಕ್ಕೆ 142 ಕೋಟಿ ರೂ. ನೀಡಿದೆ. ಇಷ್ಟಾದರೂ ನೂತನ ಟರ್ಮಿನಲ್‌ ಉದ್ಘಾಟನೆ ಆಹ್ವಾನ ಪತ್ರಿಕೆಯಲ್ಲಿ ಸಿಎಂ ಅವರ ಹೆಸರಿಲ್ಲ. ನನ್ನ 45 ವರ್ಷಗಳ ರಾಜಕೀಯ ಜೀವನದಲ್ಲಿ ಈ ರೀತಿಯ
ವರ್ತನೆ ನೋಡಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next