Advertisement
ಗುರುವಾರ ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಎಸಿಬಿ ರದ್ದು ಬಗ್ಗೆ ಹೈಕೋರ್ಟ್ ತೀರ್ಮಾನ ವನ್ನು ಒಪ್ಪಿಕೊಳ್ಳಲಾಗಿದ್ದು, ಪಕ್ಷದ ಪ್ರಣಾ ಳಿಕೆಯಲ್ಲಿ ಘೋಷಿಸಿ ದಂತೆ ಮುಂದು ವರಿಯಲು ತೀರ್ಮಾ ನಿಸಲಾಗಿದೆ.
Related Articles
Advertisement
ಸೆ.12ರಿಂದ 10 ದಿನ ಅಧಿವೇಶನ :
ರಾಜ್ಯ ವಿಧಾನ ಮಂಡಲದ ಮಳೆಗಾಲದ ಅಧಿವೇಶನವನ್ನು ಸೆ. 12ರಿಂದ 10 ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ರಜಾ ದಿನಗಳನ್ನು ಹೊರತುಪಡಿಸಿ 10 ದಿನ ಅಧಿವೇಶನ ನಡೆಯಲಿದೆ. ನಿಯಮಗಳಂತೆ ಆರು ತಿಂಗಳೊಳಗೆ ಅಧಿವೇಶನ ನಡೆಸಬೇಕಿರುವುದರಿಂದ ಸೆಪ್ಟಂಬರ್‌ನಲ್ಲಿ ಅಧಿವೇಶನ ನಡೆಸಲಾಗುತ್ತಿದೆ.
ಕೊಡಗೂ ಸೇರಿದಂತೆ 8 ವಿವಿ ಸ್ಥಾಪನೆಗೆ ಸಮ್ಮತಿ :
ಬೆಂಗಳೂರು: ಕೊಡಗು ವಿವಿ ಸೇರಿದಂತೆ ಎಂಟು ನೂತನ ವಿಶ್ವವಿದ್ಯಾನಿಲಯಗಳ ಸ್ಥಾಪನೆಗೆ ಅವಕಾಶ ಕಲ್ಪಿಸಲು “ಕರ್ನಾಟಕ ವಿವಿಗಳ ಕಾಯ್ದೆ-2000’ಕ್ಕೆ ತಿದ್ದುಪಡಿ ತರಲು ಸಚಿವ ಸಂಪುಟ ಸಭೆ ಸಮ್ಮತಿಸಿದೆ.
ಕೊಡಗು, ಚಾಮರಾಜನಗರ, ಹಾವೇರಿ, ಹಾಸನ, ಕೊಪ್ಪಳ, ಬಾಗಲ ಕೋಟೆ, ಬೀದರ್ ಮತ್ತು ಮಂಡ್ಯ ವಿ.ವಿ. ಗಳನ್ನು ಸ್ಥಾಪಿಸಲಾಗುತ್ತಿದೆ. ಯುಜಿಸಿ ನಿರ್ದೇಶನದ ಮೇರೆಗೆ ಹೊಸ ವಿವಿಗಳನ್ನು ಸ್ಥಾಪಿಸಲಾಗುತ್ತಿದ್ದು, ಆರಂಭದಲ್ಲಿ ಕೇಂದ್ರ ಸರಕಾರ ಅನುದಾನ ನೀಡಲಿದೆ.
ಹೊಸ ವಿ.ವಿ.ಗಳ ಪೈಕಿ ಕ್ರಮವಾಗಿ ಕೊಡಗು ವಿವಿಯಲ್ಲಿ 24, ಚಾಮ ರಾಜ ನಗರ 18, ಹಾಸನ 36, ಹಾವೇರಿ 40, ಬೀದರ್ 140, ಕೊಪ್ಪಳ 40 ಮತ್ತು ಬಾಗಲಕೋಟೆ ವಿವಿ ಗಳು 71 ಕಾಲೇಜುಗಳನ್ನು ಹೊಂದಿರ ಲಿವೆ. ಇವುಗಳೊಂದಿಗೆ ಮಂಡ್ಯ ವಿ.ವಿ. ವ್ಯಾಪ್ತಿಗೆ ಆ ಜಿಲ್ಲೆಯ ಪ್ರಥಮ ದರ್ಜೆ ಕಾಲೇಜುಗಳು ಬರಲಿವೆ. ಮಂಡ್ಯ ವಿ.ವಿ. ಹೊರತು ಪಡಿಸಿ ಮಿಕ್ಕ 7 ವಿ.ವಿ.ಗಳ ಆರಂಭ ವನ್ನು ಈ ವರ್ಷದ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಇದಕ್ಕಾಗಿ ಈಗಾಗಲೇ ತಲಾ 2 ಕೋಟಿ ರೂ.ಗಳಂತೆ ಒಟ್ಟು 14 ಕೋಟಿ ರೂ. ಒದಗಿಸಲಾಗಿದೆ.