Advertisement

Lokasabha: ಸ್ಪೀಕರ್‌ ಅನುಮತಿ ಬಳಿಕ ಸಂಸದರ ಪ್ರಶ್ನೆಗೆ ಉತ್ತರಿಸಿ: ಕೇಂದ್ರ ಸಚಿವರಿಗೆ ಸೂಚನೆ

03:53 AM Dec 05, 2024 | Team Udayavani |

ಹೊಸದಿಲ್ಲಿ: ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆ ಸಂಸದರು ಕೇಳುವ ಪ್ರಶ್ನೆಗಳಿಗೆ ಸ್ಪೀಕರ್‌ ಅನುಮತಿ ನೀಡಿದ ಬಳಿಕವೇ ಸಚಿವರು ಉತ್ತರಿಸಬೇಕು. ಇಲ್ಲ­ದಿದ್ದರೆ ಅವರು ಉತ್ತರ ನೀಡು­ವಂತಿಲ್ಲ ಎಂದು ಸ್ಪೀಕರ್‌ ಓಂ ಬಿರ್ಲಾ ಬುಧವಾರ ಹೇಳಿ­ದ್ದಾರೆ.

Advertisement

ಪ್ರಶ್ನೆಗಳು ಮತ್ತು ಉತ್ತ­ರ­ಗಳು ಚುಟುಕಾಗಿ, ನಿಖ­ರ­ವಾಗಿ ಇರಬೇಕು ಎಂದೂ ಸೂಚಿಸಿದ್ದಾರೆ. ಸೂರ್ಯಘರ್‌ ಯೋಜನೆ ಸಂಬಂ­ಧಿಸಿದ ಪ್ರಶ್ನೆಯೊಂದಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಉತ್ತರಿಸುತ್ತಿರುವಾಗ ಎಸ್ಪಿ ಅಧ್ಯಕ್ಷ ಅಖೀಲೇಶ್‌ ಯಾದವ್‌ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಅದಕ್ಕೆ ಸಚಿವ ಪಿಯೂಷ್‌ ಗೋಯಲ್‌ ಉತ್ತರಿಸಿದರು. ಈ ಸಂದರ್ಭದಲ್ಲಿ ಸ್ಪೀಕರ್‌ ಈ ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next