Advertisement

ಲೋಕಾಪುರ:ಹಿಂದೂ-ಮುಸ್ಲಿಂ ಭಾವೈಕ್ಯತೆ ಬೆಸೆವ ಜ್ಞಾನೇಶ್ವರ ಮಠ

06:38 PM Feb 09, 2023 | Team Udayavani |

ಲೋಕಾಪುರ: ಪಟ್ಟಣದಲ್ಲಿರುವ ಸುಕ್ಷೇತ್ರ ಶ್ರೀ ಜ್ಞಾನೇಶ್ವರ ಮಠವು ಸುಮಾರು 10ರಿಂದ 12 ಶತಮಾಗಳ ಇತಿಹಾಸ ಹೊಂದಿದೆ. ಇಲ್ಲಿನ ಮೂಲ ಪುರುಷರಾದ ಶ್ರೀ ಪರಮಹಂಸರು ತಿರುಮಲ ಎಂಬ ಹೆಸರಿನಿಂದ ಜನಿಸಿ ಗುರುವನ್ನು ಹುಡುಕುತ್ತ ಹೋಗಿ ಮುಂದೆ ದುಷ್ಟಾಂತದ ಮೂಲಕವಾಗಿ ಸ್ಮಶಾನ ಬೈರಾಗಿಯಾಗಿ ಕುಳಿತ ಅಜಮೀರ ಸಾಹೇರನ್ನೇ ತಮ್ಮ ಗುರುವನ್ನಾಗಿ ಮಾಡಿಕೊಂಡರು.

Advertisement

ಇತಿಹಾಸದಲ್ಲಿ ಕೇಳರಿಯದ ಸಂಗತಿ ಎಂದರೆ ಮುಸಲ್ಮಾನ ಗುರುವಿನಿಂದ ಓರ್ವ ಬ್ರಾಹ್ಮಣ ಅನುಗ್ರಹ ಪಡೆದುಕೊಂಡು ಗುರು-ಶಿಷ್ಯತ್ವವನ್ನು ಇಂದಿಗೂ ಕಾಪಾಡಿಕೊಂಡು ಬಂದಿರುವುದನ್ನು ಕಾಣಬಹುದು. ಹಿಂದೂ-ಮುಸ್ಲಿಂ ಭಾವೈಕ್ಯತಾ ಭಾವ ಇಲ್ಲಿದೆ. ಒಂದು ಕಡೆ ಅಜಮೀರ ಸಾಹೇಬರ ಗದ್ದುಗೆ ಇದೆ. ಇನ್ನೊಂದು ಕಡೆ ಪರಮಹಂಸ ಸಜೀವ ವೃಂದಾವನ. ಈ ಕಡೆ ಆರಾಧನೆ, ಆ ಕಡೆ ಉರುಸು. ಗುರು-ಶಿಷ್ಯ ಆತ್ಮೀಯತೆಯ ಭಾವ ಕಣ್ಮನ ತಣಿಸುವಂತಹದ್ದು. ಅಜಮೀರ ಸಾಹೇಬರ ಪರಮಹಂಸರಿಗೆ ಅನುಗ್ರಹ ಮಾಡಿ ಅವರ ಕೊರಳಿಗೆ ಶಿಲಾಮಣಿ ಸರವೊಂದನ್ನು ಹಾಕಿ ದಂಡ ನೀಡಿದರು. ಇಂದಿಗೂ ಅವು ನಿತ್ಯ ನೂತನವಾಗಿದೆ.

ಮಠದಲ್ಲಿನ ಪೀಠಸ್ಥರು ಆ ಅನುಗ್ರಹಿತ ಸರವನ್ನು ಧಾರಣ ಮಾಡುತ್ತಾರೆ. ಅದರ ಸ್ಪರ್ಶದಿಂದಲೇ ಎಷ್ಟೋ ಭಯಂಕರ ರೋಗರುಜಿನುಗಳು ದೂರವಾಗಿದೆ. ಇಂದಿಗೂ ಬಾಬಾರ ಗದ್ದುಗೆಯ ಮುಂದೆ ಭೂತಬಾಧೆ ನಿವಾರಣೆ, ದಾರವನ್ನು ಕಟ್ಟುವುದು, ಭಸ್ಮ ಲೇಪಿಸುವುದು ನಡೆಯುತ್ತದೆ. ಲೋಕಾಪುರದ ಶ್ರೀ ಜ್ಞಾನೇಶ್ವರ ಮಠಕ್ಕೆ ಪೀಠಸ್ಥರಾಗಿ ಹನ್ನೊಂದು ಜನ ಗುದುಗಳಾಗಿದ್ದಾರೆ. ಅವರೆಲ್ಲರೂ ತಮ್ಮದೇ ಆದ ಅಪಾರ ಶಕ್ತಿ ಹೊಂದಿದವರೇ. ಪರಮಹಂಸರು ಸಜೀವ ಸಮಾಧಿಸ್ಥರಾಗಿ ಬಂದ ಭಕ್ತರನ್ನು ನಿರಂತರವಾಗಿ ಆಶೀರ್ವದಿಸುತ್ತಲೇ ಬಂದಿರುವರು ವಿಶೇಷವಾಗಿದೆ.

ಶ್ರೀ ಭುಜಂಗ ಸ್ವಾಮಿಗಳು ಹಾಗೂ ಶ್ರೀ ಚಿದಂಬರ ಸ್ವಾಮಿಗಳ ಸಮಕಾಲೀನರು. ಚಿದಂಬರರು ಗೊಣ್ಣಾಗರದಲ್ಲಿ ಯಜ್ಞವನ್ನು ಮಾಡುತ್ತಿದ್ದಾಗ ಶ್ರೀ ಭುಜಂಗ ಸ್ವಾಮಿಗಳಿಗೆ ಆ ಯಜ್ಞ ಕ್ಷೇತ್ರದ ಸಂಪೂರ್ಣ ರಕ್ಷಣಾ ಹೊಣೆಯನ್ನು ನೀಡಿದ್ದರೆಂದು ಇತಿಹಾಸದಿಂದ ತಿಳಿದು ಬರುತ್ತದೆ.

ಶ್ರೀ ಚತುರ್ಥ ಭುಜಂಗ ಸ್ವಾಮಿಗಳು ಲೀನರಾಗಿ ಸುಮಾರು 20 ವರ್ಷಗಳು ಕಳೆದಿವೆ. ಗುರುವಿಲ್ಲದ ಮಠವಲ್ಲ ಎಂಬಂತೆ ಶ್ರೀ ಚತುರ್ಥ ಭುಜಂಗ ಸ್ವಾಮಿಗಳ ಸುಪುತ್ರರಾದ ಶ್ರೀ ಬ್ರಹ್ಮಾನಂದ ಸ್ವಾಮಿಗಳು ಶ್ರೀ ಮಠದ ಸಂಪೂರ್ಣ ಜವಾಬ್ದಾರಿಯನ್ನು ದಕ್ಷತೆಯಿಂದ ನಿಭಾಯಿಸುತ್ತಿದ್ದಾರೆ. ಸಂಪೂರ್ಣ ಜೀರ್ಣವಾದ ಮಠವನ್ನು ನವೀಕರಣದೊಂದಿಗೆ ಸುಂದರ ಕಲ್ಲಿನ ಮಹಾದ್ವಾರ ನೋಡುಗರ ಕಣ್ಮನ ಸೆಳೆಯುತ್ತದೆ. ಶ್ರೀಮಠದಲ್ಲಿ ಪೂಜ್ಯರ ಗದ್ದುಗೆಯ ದರ್ಶನ ಭಾಗ್ಯವಿದೆ. ಭಾವೈಕ್ಯ ಸಂಗಮವಾಗಿರುವ ಪುಣ್ಯ ಕ್ಷೇತ್ರವಾಗಿದೆ.

Advertisement

ಸುಕ್ಷೇತ್ರ ಶ್ರೀ ಜ್ಞಾನೇಶ್ವರ ಮಠದ ಹನ್ನೆರಡನೇಯ ಪೀಠಾಧಿಪತಿಗಳಾಗಿ ಶ್ರೀ ಬ್ರಹ್ಮಾನಂದ ಸ್ವಾಮಿಗಳು ಶ್ರೀ ಮಠಕ್ಕೆ ಬಂದ ಭಕ್ತರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಶ್ರೀ ಜ್ಞಾನೇಶ್ವರ ಮಠದಲ್ಲಿ ಫೆ. 9ರಿಂದ ಫೆ. 13ರವರೆಗೆ ಶ್ರೀಮತ್‌ ಪರಮಹಂಸ ಪೂರ್ಣಾನಂದ ಸ್ವಾಮಿಗಳ ನೂತನ ರಥ ಉದ್ಘಾಟನೆ, ನೂತನ ಕಳಸಾರೋಹಣ ಹಾಗೂ ಆರಾಧನಾ ಮಹೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಸಂಭ್ರಮದಿಂದ ಜರುಗಲಿದೆ.

ಆರಾಧನಾ ಮಹೋತ್ಸವ
ಪಟ್ಟಣದ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಶ್ರೀ ಜ್ಞಾನೇಶ್ವರ ಮಠದಲ್ಲಿ ಫೆ. 9ರಿಂದ ಫೆ. 13ರವರೆಗೆ ಶ್ರೀಮತ್‌ ಪರಮಹಂಸ ಪೂರ್ಣಾನಂದ ಸ್ವಾಮಿಗಳ ನೂತನ ರಥ ಉದ್ಘಾಟನೆ, ನೂತನ ಕಳಸಾರೋಹಣ ಹಾಗೂ ಆರಾಧನಾ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಜ್ಞಾನೇಶ್ವರ ಮಠದ ಪೀಠಾಧಿಕಾರಿ ಶ್ರೀ ಬ್ರಹ್ಮಾನಂದ ಸ್ವಾಮೀಜಿ ನೇತೃತ್ವದಲ್ಲಿ ಶ್ರೀ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗುವವು. ಪೂರ್ವಾರಾಧನೆ: ಬೆಳಗ್ಗೆ ಕಾಕಡಾರತಿ ಪರಮಹಂಸ ಸ್ವಾಮಿಗಳಿಗೆ ಏಕಾದಶ ಆವರ್ತನ ರುದ್ರಾಭಿಷೇಕ, ಪರಮಹಂಸ ಸ್ವಾಮಿಗಳಿಗೆ ಮಹಾಮಂಗಳಾರತಿ, ನೈವೇದ್ಯ, ಸಾಂಪ್ರದಾಯಿಕ ಧೂಪ, ಮಹಾಪ್ರಸಾದ ವಿತರಣೆ, ಅಷ್ಟವಧಾನ, ಭಜನೆ, ಮಹಾಮಂಗಳಾರತಿ ನೆರವೇರುವುದು ಮಧ್ಯಾರಾಧನೆ: ಬೆಳಗ್ಗೆ ಕಾಕಡಾರತಿ, ಪರಮಹಂಸ ಸ್ವಾಮಿಗಳಿಗೆ ಏಕಾದಶ ಆವರ್ತನ, ರುದ್ರಾಭಿಷೇಕ, ರಥಾಂಗ ಹೋಮ ಪೂರ್ಣಾಹುತಿ, 12ಕ್ಕೆ ಮಹಾರಥೋತ್ಸವ ನಂತರ ಪರಮಹಂಸ ಸ್ವಾಮಿಗಳಿಗೆ ಮಹಾಮಂಗಳಾರತಿ, ನೈವೇದ್ಯ ಮಹಾಪ್ರಸಾದ ವಿತರಣೆ, ರಾತ್ರಿ ಜಾಗರಣೆ ಭಜನೆ ನಡೆಯಲಿದೆ.

ಉತ್ತರಾಧನೆ: ಬೆಳಗ್ಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ನಂತರ ಗೋಪಾಳ
ಕಾಲ ಅವಭೃತ ಸ್ನಾನ, ಬುತ್ತಿ ಪೂಜಾ, ವಿವಿಧ ವಾದ್ಯಮೇಳ ವೈಭವದೊಂದಿಗೆ ಪಲ್ಲಕ್ಕಿ
ಸೇವೆ ಹಾಗೂ ಸಾಂಪ್ರದಾಯಕ ಧೂಪ, ಮಹಾಪ್ರಸಾದ ವಿತರಣೆ ನಡೆಯವುದು.
ಸಲೀಂ ಐ. ಕೊಪ್ಪದ

Advertisement

Udayavani is now on Telegram. Click here to join our channel and stay updated with the latest news.

Next