Advertisement

Lokapur: ಸಂವಿಧಾನ ಸ್ವಸ್ಥ ಸಮಾಜ ನಿರ್ಮಾಣಕ್ಕಿರುವ ನಿಘಂಟು

05:26 PM Nov 28, 2023 | Team Udayavani |

ಲೋಕಾಪುರ: ಸಂವಿಧಾನ ಎಂಬುದು ಸ್ವಸ್ಥ ಮತ್ತು ಸಮೃದ್ಧ ಸಮಾಜ ನಿರ್ಮಾಣ ಮಾಡಲು ಕಟ್ಟಿಕೊಟ್ಟಿರುವ ನಿಯಮಾವಳಿಗಳ ನಿಘಂಟು ಇದ್ದಂತೆ ಎಂದು ಬಸವೇಶ್ವರ ಅಂತಾರಾಷ್ಟ್ರೀಯ ಪಬ್ಲಿಕ್‌ ಶಾಲೆಯ ಪ್ರಾಂಶುಪಾಲ ಪರಶುರಾಮ
ವನಸಿ ಹೇಳಿದರು.

Advertisement

ಪಟ್ಟಣದ ಬಸವೇಶ್ವರ ಅಂತಾರಾಷ್ಟ್ರೀಯ ಪಬ್ಲಿಕ್‌ ಶಾಲೆಯ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆ ಒಳಪಟ್ಟ ನಾಗರಿಕರು
ಅನುಸರಿಸಬೇಕಾದ ಸೂಚನಾ ಪಟ್ಟಿಯಾಗಿದೆ.

ದೇಶದಲ್ಲಿ ಸಮಾನತೆ, ಸಹಕಾರ, ಭಾತೃತ್ವ, ಸ್ವಾತಂತ್ರ್ಯ ಮತ್ತು ಸೌಹಾರ್ದತೆ ಭಾವನೆ ಸರ್ವರಿಗೂ ಸಮನಾಗಿ ದೊರೆಯಬೇಕು ಎಂಬ ಆಶಯದಿಂದ ಡಾ| ಬಿ.ಆರ್‌. ಅಂಬೇಡ್ಕರ ಅವರ ಸತತ ಪರಿಶ್ರಮದಿಂದ ಸಂವಿಧಾನ ರಚನೆಯಾಯಿತು. ಈ ಸಂವಿಧಾನದ
ನಿಯಮಗಳಿಗೆ ಅನುಗುಣವಾಗಿ ಎಲ್ಲರೂ ಈ ಮೇಲಿನ ಎಲ್ಲ ಅಂಶ ಪಾಲಿಸಿಕೊಂಡು ಸಂವಿಧಾನದ ಮಹತ್ವ ಅರಿಯಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಸಮಾಜ ವಿಜ್ಞಾನ ಶಿಕ್ಷಕರಕಾದ ಪವನ ಪಾಟೀಲ ಮಾತನಾಡಿ ಸಂವಿಧಾನವು ಏಕೆ ರಚನೆಯಾಯಿತು, ಹೇಗೆ ರಚನೆಯಾಯಿತು,
ಮತ್ತು ಸಂವಿಧಾನವು ಎಲ್ಲೆಲ್ಲಿ ತನ್ನ ಛಾಪು ಮೂಡಿಸಿದೆ ಎಂಬ ಬಗ್ಗೆ ಮಕ್ಕಳಿಗೆ ಅವರ ದೈನಂದಿನ ಚಟುವಟಿಕೆಗಳನ್ನು ಸಂವಿಧಾನದೊಂದಿಗೆ ಹೋಲಿಕೆ ಮಾಡುತ್ತಾ ಅರ್ಥೈಸಿದರು. ಇದೇ ಸಂದರ್ಭದಲ್ಲಿ ನಮ್ಮ ದೇಶದಲ್ಲಿ ಕಂಡಬರುವ ವಿಜ್ಞಾನ, ತಂತ್ರಜ್ಞಾನ, ಕ್ರೀಡೆ ಮತ್ತು ಸಾಂಸ್ಕೃತಿಕತೆ ಎಲ್ಲರೂ ಸಂವಿಧಾನದ ಒಂದು ಭಾಗವೆಂದು ತಿಳಿಸಿಕೊಟ್ಟರು. ಅಂಬೇಡ್ಕರ ಎಂಬುವವರು ಕೇವಲ ಒಬ್ಬ ವ್ಯಕ್ತಿಯಲ್ಲ ಒಂದು ಶಕ್ತಿ ಎಂದು ಮಕ್ಕಳಿಗೆ ಮನವರಿಕೆ ಮಾಡಿದರು.

ಶಿಕ್ಷಕ ಪೀರಮಹಾಸಿದ್ಧ ಚೌಗಲೆ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಿಕ್‌ ಗುರು ಗುರುನಾನಕ್‌ ಅವರ ಜಯಂತಿ ಕೂಡಾ
ಆಚರಿಸಲಾಯಿತು. ಗುರುನಾನಕರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ಗುರುನಾನಕರ್‌ ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಲು ಶಿಕ್ಷಕಿ ನಹಿದಾ ಜಾಗೀರದಾರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಶಿಕ್ಷಕಿ ವಿಜಯಲಕ್ಷ್ಮೀ ವನಸಿ ಸಂವಿಧಾನದ ಪೂರ್ವ ಪೀಠಿಕೆ ಬೋಧಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next