Advertisement

ಉಡುಪಿ ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ್‌ ಅದಾಲತ್‌: ಒಂದೇ ದಿನ 42,687 ಪ್ರಕರಣಗಳು ಇತ್ಯರ್ಥ

12:11 AM Feb 12, 2023 | Team Udayavani |

ಉಡುಪಿ: ಕಾನೂನು ಸೇವೆ ಗಳ ಪ್ರಾಧಿಕಾರ ಬೆಂಗಳೂರು ಇವರ ನಿರ್ದೆಶನದ ಮೇರೆಗೆ ಶನಿವಾರ ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ವಿವಿಧ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್‌ ಅದಾಲತ್‌ ಆಯೋಜಿಸಿ ಒಂದೇ ದಿನ ಒಟ್ಟು 42,687 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಯಿತು.

Advertisement

ರಾಜಿಯಾಗಬಲ್ಲ ಅಪರಾಧಿಕ 22, ಚೆಕ್‌ ಅಮಾನ್ಯ 244, ಬ್ಯಾಂಕ್‌ / ಹಣ ವಸೂಲಾತಿ 7, ಎಂ.ವಿ.ಸಿ. 150, ಕಾರ್ಮಿಕ ನಷ್ಟ ಪರಿಹಾರ 1, ಎಂ.ಎಂಆರ್‌.ಡಿ. ಆಕ್ಟ್ 8, ವೈವಾಹಿಕ 4, ಸಿವಿಲ್‌ 187, ಇತರ ಕ್ರಿಮಿನಲ್‌ ಪ್ರಕರಣ-2,587 ಹಾಗೂ ವ್ಯಾಜ್ಯ ಪೂರ್ವ ದಾವೆ-39,477 ಗಳನ್ನು ರಾಜೀ ಮುಖಾಂತರ ಇತ್ಯರ್ಥಪಡಿಸಿ 20,47,37,959 ರೂ. ಪರಿಹಾರದ ಮೊತ್ತವನ್ನು ಘೋಷಿಸಲಾಯಿತು.

ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆ ಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಉಡುಪಿ, ಕುಂದಾಪುರ ಹಾಗೂ ಕಾರ್ಕಳ, ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆ, ಪೊಲೀಸ್‌, ಕಂದಾಯ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಿಮಾ ಕಂಪೆನಿಗಳು, ಬ್ಯಾಂಕ್‌, ಕಕ್ಷಿಗಾರರು ಹಾಗೂ ಇಲಾಖೆಗಳ ಸಹಕಾರದೊಂದಿಗೆ ನಡೆಸಲಾಯಿತು.

ಟ್ರಾಫಿಕ್‌ ನಿಯಮ ಉಲ್ಲಂಘನೆ: 22 ಲ.ರೂ. ದಂಡ ಸಂಗ್ರಹ!
ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಇ-ಚಲನ್‌ ಮೂಲಕ ವಿಧಿಸಿದ ದಂಡವನ್ನು ಫೆ. 11ರೊಳಗೆ ಪಾವತಿಸಿ ಇತ್ಯರ್ಥ ಪಡಿಸಿಕೊಳ್ಳುವವವರಿಗೆ ಸಾರಿಗೆ ಇಲಾಖೆ ಶೇ. 50ರಷ್ಟು ರಿಯಾಯಿತಿ ಪ್ರಕಟಿಸಿದ್ದು, ಅದರಂತೆ ಶನಿವಾರ ನಡೆದ ಅದಾಲತ್‌ನಲ್ಲಿ 5,135 ಪ್ರಕರಣಗಳಲ್ಲಿ ಒಟ್ಟು 22,19,700 ದಂಡ ಸಂಗ್ರಹಿಸಲಾಯಿತು. ಈ ರಿಯಾಯಿತಿ ಶನಿವಾರಕ್ಕೆ ಕೊನೆಗೊಂಡಿದೆ ಎಂದು ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಶರ್ಮಿಳಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next