Advertisement

ಲೋಕಸಭೆ: ರಾಜ್ಯದ ಹಿನ್ನೋಟ

12:50 AM Mar 12, 2019 | |

ಬೆಂಗಳೂರು: 2019ರ ಲೋಕಸಭೆ ಚುನಾವಣೆಗೆ ಕಹಳೆ ಮೊಳಗಿದೆ. ರಾಜಕೀಯ ಪಕ್ಷಗಳು ತಮ್ಮ ಕಸರತ್ತುಗಳನ್ನು ಆರಂಭಿಸಿವೆ. ಸದ್ಯದ ರಾಷ್ಟ್ರದ ರಾಜಕೀಯ ಪರಿಸ್ಥಿತಿಯಲ್ಲಿ. ರಾಜ್ಯ ರಾಜಕಾರಣ ತನ್ನದೇ ಆದ ಮಹತ್ವ ಪಡೆದುಕೊಂಡಿದೆ. ದಕ್ಷಿಣ ಭಾರತದಲ್ಲಿ ಕರ್ನಾಟಕದಿಂದ ಅತಿ ಹೆಚ್ಚು ಸೀಟುಗಳನ್ನು ಗೆಲ್ಲುವ ಉಮೇದಿನಲ್ಲಿ ಬಿಜೆಪಿ ಇದ್ದರೆ, ಅದಕ್ಕೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಪ್ರಬಲ ಪೈಪೋಟಿ ನೀಡುತ್ತಿದೆ.

Advertisement

ಹೊಸ ಲೋಕಸಭೆಗೆ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳಿಸುವ ಉತ್ಸಾಹದಲ್ಲಿರುವ ಮತದಾರರಿಗೆ ಹಿಂದಿನ ಅಂದರೆ 2014ರ ಲೋಕಸಭೆ ಚುನಾವಣೆಯ ರಾಜ್ಯದ ಹಿನ್ನೋಟವನ್ನು ನೀಡುವ ದೃಷ್ಟಿಯಿಂದ ಒಂದಿಷ್ಟು ಚುಟುಕು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

2014 ಲೋಕಸಭಾ ಚುನಾವಣೆ ಹಿನ್ನೋಟ 
ಒಟ್ಟು ಕ್ಷೇತ್ರಗಳು: 28
ಎಸ್ಸಿ ಮೀಸಲು 5
ಎಸ್ಟಿ ಮೀಸಲು 2
ಒಟ್ಟು ಮತದಾರರು 4.62 ಕೋಟಿ
ಮತದಾನ ಆಗಿದ್ದು 3.10 ಕೋಟಿ
ಮತದಾನ ನಡೆದ ದಿನಾಂಕ: ಏಪ್ರಿಲ್‌ 17
ಮತದಾನ ಶೇ. 67.2
ಒಟ್ಟು ಪಕ್ಷಗಳು: 39
ಒಟ್ಟು ಅಭ್ಯರ್ಥಿಗಳು: 435
ಗೆದ್ದವರು: 28
ಬಿಜೆಪಿ: 17
ಕಾಂಗ್ರೆಸ್‌: 9
ಜೆಡಿಎಸ್‌ 2
(ಉಪ ಚುನಾವಣೆ ಫ‌ಲಿತಾಂಶ ಹೊರತಾಗಿ)
ಠೇವಣಿ ಕಳೆದುಕೊಂಡವರು: 372
ಕಣದಲ್ಲಿದ್ದ ಒಟ್ಟು ಮಹಿಳೆಯರು: 23
ಗೆದ್ದವರು:1
ಅತಿ ಹೆಚ್ಚು ಅಂತರದಿಂದ ಗೆಲವು: ಬಿ.ಎಸ್‌. ಯಡಿಯೂರಪ್ಪ (3.63 ಲಕ್ಷ)
ಅತಿ ಕಡಿಮೆ ಅಂತರದಿಂದ ಗೆಲುವು: ಬಿ.ವಿ. ನಾಯಕ್‌ (1,499)
ಅತಿ ಹಿರಿಯ ಸಂಸದ: ಎಚ್‌.ಡಿ. ದೇವೇಗೌಡರು (81 ವರ್ಷ)
ಅತಿ ಕಿರಿಯ ಸಂಸದ: ಪ್ರತಾಪ್‌ ಸಿಂಹ (37)
ಅತಿ ಹೆಚ್ಚು ಅಭ್ಯರ್ಥಿಗಳು: 26 (ಬೆಂಗಳೂರು ಕೇಂದ್ರ)
ಅತಿ ಕಡಿಮೆ ಅಭ್ಯರ್ಥಿಗಳು: 8 (ಕಲಬುರಗಿ)

Advertisement

Udayavani is now on Telegram. Click here to join our channel and stay updated with the latest news.

Next