Advertisement

ಬಿಜೆಪಿ ಸಂಸದ ಓಂ ಬಿರ್ಲಾ ಲೋಕಸಭಾ ಸ್ಪೀಕರ್‌ ಹುದ್ದೆಗೆ ಎನ್‌ಡಿಎ ಅಭ್ಯರ್ಥಿ

11:47 AM Jun 19, 2019 | Team Udayavani |

ಹೊಸದಿಲ್ಲಿ : 57ರ ಹರೆಯದ ಬಿಜೆಪಿ ಸಂಸದ ಓಂ ಬಿರ್ಲಾ ಅವರು ಲೋಕಸಭಾ ಸ್ಪೀಕರ್‌ ಹುದ್ದೆಗೆ ಎನ್‌ಡಿಎ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.

Advertisement

ಬಿರ್ಲಾ ಅವರು ರಾಜಸ್ಥಾನದ ಕೋಟ-ಬುಂಡಿ ಸಂಸದೀಯ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾದವರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರು ಬಿರ್ಲಾ ಅವರ ಹೆಸರನ್ನು ಲೋಕಸಭಾ ಸ್ಪೀಕರ್‌ ಹುದ್ದೆಗೆ ಎನ್‌ಡಿಎ ಅಭ್ಯರ್ಥಿ ಎಂದು ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ.

ಲೋಕಸಭೆಯಲ್ಲಿ ಎನ್‌ಡಿಎ ಗೆ ಪೂರ್ತಿ ಬಹುಮತ ಇರುವುದರಿಂದ ಬಿರ್ಲಾ ಅವರು ಒಂದೊಮ್ಮೆ ನಾಮಕರಣಗೊಂಡರೆ ಅವರು ಸುಲಭದಲ್ಲಿ ಲೋಕಸಭೆಯ ಸ್ಪೀಕರ್‌ ಆಗುತ್ತಾರೆ.

ಲೋಕಸಭೆ ಸ್ಪೀಕರ್‌ ಹುದ್ದೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಬಿರ್ಲಾಅವರ ಹೆಸರು ಕೇಳಿ ಬಂದ ಸಂದರ್ಭದಲ್ಲಿ ಅವರು (ಬಿರ್ಲಾ) ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಅವರ ನಿವಾಸದಲ್ಲಿ ಇದ್ದರು.

Advertisement

ಮಾಧ್ಯಮದವರು ಈ ತಾಜಾ ವಿದ್ಯಮಾನದ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಬಿರ್ಲಾ, “ನನಗೇನೂ ಮಾಹಿತಿ ಇಲ್ಲ; ನಾನೋರ್ವ ಕಾರ್ಯಕರ್ತನಾಗಿ ಬಿಜೆಪಿ ಕಾರ್ಯಾಧ್ಯಕ್ಷರನ್ನು ಭೇಟಿಯಾಗಲು ಅವರ ನಿವಾಸಕ್ಕೆ ಹೋಗಿದ್ದೆ’ ಎಂದು ಹೇಳಿದರು.

ಆದರೆ ಇದೇ ವೇಳೆ ಬಿರ್ಲಾ ಅವರ ಪತ್ನಿ ಅಮಿತಾ ಬಿರ್ಲಾ ಅವರು “ಇದು ನಮಗೆ ಹೆಮ್ಮೆಯ, ಸಂತಸದ ಕ್ಷಣ. ಬಿರ್ಲಾ ಅವರನ್ನು ಆಯ್ಕೆ ಮಾಡಿರುವುದಕ್ಕಾಗಿ ಕ್ಯಾಬಿನೆಟ್‌ ಗೆ ನಮ್ಮ ಧನ್ಯವಾದಗಳು’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next