ನವದೆಹಲಿ: ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ 543 ಲೋಕಸಭಾ ಕ್ಷೇತ್ರಗಳ ಮತಎಣಿಕೆ ಮಂಗಳವಾರ(ಜೂನ್ 04) ಬೆಳಗ್ಗೆ 8ಗಂಟೆಯಿಂದ ಆರಂಭಗೊಂಡಿದ್ದು, ಈವರೆಗಿನ ಮತ ಎಣಿಕೆ ಪ್ರಕಾರ ಎನ್ ಡಿಎ ಮೈತ್ರಿಕೂಟ 290 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, INDIA ಮೈತ್ರಿಕೂಟ 207 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಇದನ್ನೂ ಓದಿ:Lok Sabha Result 2024: ಬೆಂ. ಗ್ರಾಮಾಂತರ, ಮಂಡ್ಯದಲ್ಲಿ BJPಗೆ ಮುನ್ನಡೆ, ಕೈ ಗೆ ಹಿನ್ನಡೆ
ಭಾರತೀಯ ಜನತಾ ಪಕ್ಷ 243 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ 88 ಸ್ಥಾನಗಳಲ್ಲಿ ಮುನ್ನಡೆ ಕಂಡಿದ್ದು, ಮತಎಣಿಕೆ ಮುಂದುವರಿದಿದ್ದು, ಸಂಜೆ ವೇಳೆಗೆ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.
ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ್ದ ಸುಮಾರು 60 ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಉತ್ತರಪ್ರದೇಶದಲ್ಲಿ ಎನ್ ಡಿಎ ಮತ್ತು ಇಂಡಿಯಾ ಮೈತ್ರಿಕೂಟದ ನಡುವೆ ತೀವ್ರ ಪೈಪೋಟಿ ನಡೆದಿದ್ದು, ಬಿಜೆಪಿ ಹಿನ್ನಡೆ ಸಾಧಿಸಿರುವುದಾಗಿ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.
ಕರ್ನಾಟಕದಲ್ಲಿ ಟ್ರೆಂಡ್ ಹೇಗಿದೆ?
ಕರ್ನಾಟಕದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ ಭಾರತೀಯ ಜನತಾ ಪಕ್ಷ 17 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ 8 ಕ್ಷೇತ್ರಗಳಲ್ಲಿ ಹಾಗೂ ಜೆಡಿಎಸ್ 3 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.