Advertisement
ಕಲಾಪ ಶುರುವಾಗುವುದಕ್ಕಿಂತ ಮೊದಲು ಹಂಗಾಮಿ ಸ್ಪೀಕರ್ ಆಗಿ ನೇಮಕಗೊಂಡಿರುವ ಬಿಜೆಪಿಯ ಭತೃìಹರಿ ಮಹತಾಬ್ ಪ್ರಮಾಣ ಸ್ವೀಕರಿಸಿದ್ದಾರೆ. ಅನಂತರ ಅವರು ಲೋಕಸಭೆಯ ಸ್ಪೀಕರ್ ಆಸನಕ್ಕೆ ಬಂದು ಕೂತರು. ಮೊದಲನೆ ಯದಾಗಿ ಉತ್ತರ ಪ್ರದೇಶದ ವಾರಾಣಸಿಯಿಂದ 3ನೇ ಬಾರಿಗೆ ಆಯ್ಕೆಯಾಗಿರುವ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯ ಸದಸ್ಯರಾಗಿ ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯರು ಜೈಶ್ರೀರಾಮ್ ಎಂಬ ಘೋಷಣೆ ಹಾಕಿದರು.
ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಬೃಹತ್ ಕೈಗಾರಿಕ ಸಚಿವ ಎಚ್.ಡಿ.ಕುಮಾರಸ್ವಾಮಿ, ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ರಕ್ಷಣ ಸಚಿವ ರಾಜನಾಥ್ ಸಿಂಗ್ ಸೇರಿದಂತೆ 262 ಮಂದಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರತಿಭಟಿಸುವ ಸಲುವಾಗಿ ಹೊರನಡೆದ ವಿಪಕ್ಷ
ಹಂಗಾಮಿ ಸ್ಪೀಕರ್ ಸ್ಥಾನಕ್ಕೆ ಭತೃìಹರಿ ಮಹತಾಬ್‌ರನ್ನು ನೇಮಿಸಿದ್ದಕ್ಕೆ ಪ್ರತಿಭಟನೆಯಾಗಿ ಪ್ರಮಾಣ ವಚನ ಬೋಧಿಸುವ ಸಮಿತಿಯಲ್ಲಿ ಇದ್ದ ಕಾಂಗ್ರೆಸ್‌ನ ಕೆ.ಸುರೇಶ್, ಡಿಎಂಕೆಯ ಟಿ.ಆರ್. ಬಾಲು, ಟಿಎಂಸಿಯ ಸುದೀಪ್
ಬಂಡೋಪಾಧ್ಯಾಯ ಸದನದಿಂದ ಹೊರ ನಡೆದರು. ಬಿಜೆಪಿ ಸದಸ್ಯರು ನೆರವು ನೀಡಿದರು.
Related Articles
ಕಿರಿಯ ಸಂಸದ ಹಾಗೂ ಟಿಡಿಪಿ ಸಚಿವ ಕೆ. ರಾಮ ಮೋಹನ ನಾಯ್ಡು, ಚಿರಾಗ್ ಪಾಸ್ವಾನ್, ಉದ್ಧವ್ ಶಿವಸೇನೆಯ ಅರವಿಂದ ಸಾವಂತ್ ಸೇರಿ ಮೊದಲ ಬಾರಿಗೆ ಆಯ್ಕೆಯಾದವರು ಆವರಣದಲ್ಲಿ ಪರಸ್ಪರ ಆಲಿಂಗಿಸಿ ಶುಭ ಹಾರೈಸಿಕೊಂಡರು. ಕಂಗನಾ ರಾಣಾವತ್, ಅರುಣ್ ಗೋವಿಲ್ 8, 9ನೇ ಸಾಲಿನ ಆಸನದಲ್ಲಿ ಕುಳಿತಿದ್ದರು.
Advertisement
ದೇಶಕ್ಕೆ ಜವಾಬ್ದಾರಿಯುತ ವಿಪಕ್ಷ ಬೇಕು: ಮೋದಿದೇಶದ ಜನತೆಗೆ ಬೇಕಾಗಿರುವುದು ನಾಟಕ, ಗೊಂದಲಗಳಲ್ಲ. ಬೇಕಿರುವುದು ಘೋಷಣೆ ಗಳಲ್ಲ. ಸತ್ವ. ದೇಶಕ್ಕೆ ಒಂದು ಒಳ್ಳೆಯ, ಜವಾಬ್ದಾರಿ ಯುತ ವಿಪಕ್ಷ ಬೇಕು’ ಎಂದು ಪ್ರಧಾನಿ ಮೋದಿ ಹೇಳಿ ದ್ದಾರೆ. ಅಧಿ ವೇಶನ ಆರಂಭಕ್ಕೆ ಮುನ್ನ ಮಾತ ನಾಡಿದ ಅವರು, “10 ವರ್ಷ ಗ ಳಲ್ಲಿ ನಾವೊಂದು ಪರಂಪರೆ ಯನ್ನು ಸಿದ್ಧ ಮಾಡಲು ಯತ್ನಿ ಸಿದ್ದೇವೆ. ಸರಕಾರ ನಡೆಸಲು ಬಹು ಮತ ಬೇಕು, ಆದರೆ ದೇಶ ನಡೆಸಲು ಸರ್ವಾನುಮತ ಬೇಕು ಎಂದರು. 50 ವರ್ಷದ ಹಿಂದಿನ ದುರಂತ ಮತ್ತೆ ಬಾರದು: ಪ್ರಧಾನಿ ಮೋದಿ ಭರವಸೆ
ಜೂ.25ಕ್ಕೆ ತುರ್ತು ಪರಿಸ್ಥಿತಿ ಹೇರಿಕೆ 50ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ವಿಷಯ ಪ್ರಸ್ತಾವಿಸಿದ ಮೋದಿ, “50 ವರ್ಷದ ಹಿಂದೆ ಸಂವಿಧಾನದ ಮೇಲೆ ಕಪ್ಪುಚುಕ್ಕೆ ಇಡಲಾಯಿತು. ಆ ಕಳಂಕ ದೇಶಕ್ಕೆ ಇನ್ನೊಮ್ಮೆ ಬರದಿರುವ ಬಗ್ಗೆ ಭರವಸೆ ನೀಡುತ್ತೇವೆ’ ಎಂದು, ಕಾಂಗ್ರೆಸ್ ಹೆಸರೆತ್ತದೆ ಪ್ರಧಾನಿ ಟೀಕಿಸಿದ್ದಾರೆ. ಪ್ರಧಾನಿ ಮೋದಿ ಅಹಂಕಾರ ಇನ್ನೂ ತಗ್ಗಿಲ್ಲ: ಖರ್ಗೆ
ಹತ್ತು ವರ್ಷಗಳಿಂದ ಮೋದಿ ಸರಕಾರ ಹೇರಿದ್ದ “ಅಘೋಷಿತ ತುರ್ತುಪರಿಸ್ಥಿತಿ’ಯನ್ನು ಜನರು ಚುನಾವಣ ಫಲಿತಾಂಶದ ಮೂಲಕ ಧಿಕ್ಕರಿ ಸಿದ್ದರೂ ಮೋದಿಯವರಿಗೆ ಅಹಂ ಇನ್ನೂ ಇಳಿದಿಲ್ಲ. ಹೀಗೆಂದು ಎಐಸಿಸಿ ಅಧ್ಯಕ್ಷ ಮಲ್ಲಿ ಕಾರ್ಜುನ ಖರ್ಗೆ ಟೀಕಿಸಿ ದ್ದಾರೆ. ಕಲಾಪ ಶುರು ವಾಗುವ ಮೊದಲು ಪ್ರಧಾನಿ ಭಾಷಣಕ್ಕೆ ಆಕ್ಷೇಪ ಮಾಡಿರುವ ಅವರು ನೀಟ್ ಹಗರಣ, ಪಶ್ಚಿಮ ಬಂಗಾಲದಲ್ಲಾದ ರೈಲು ದುರಂತ, ಮಣಿಪುರ ಹಿಂಸಾಚಾರದಂತಹ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಾರೆ ಎಂದು ದೇಶದ ಜನತೆ ನಂಬಿ ದ್ದರು. ಆದರೆ ಪ್ರಧಾನಿ ಮೋದಿ ಅದೇ ಹಳೆಯ ವಿಷ ಯಾಂತರ ಮಾಡುವ ಅಭ್ಯಾಸವನ್ನು ಮುಂದು ವರಿಸಿದ್ದಾರೆ ಎಂದು ಎಂದರು. ಪ್ರಧಾನಿ ಮೋದಿಯವರೇ ನೀವು ವಿಪಕ್ಷಗಳಿಗೆ ಸಲಹೆ ನೀಡುತ್ತಿದ್ದೀರಿ. 50 ವರ್ಷಗಳ ಹಿಂದಿನ ತುರ್ತು ಪರಿಸ್ಥಿತಿ ಬಗ್ಗೆ ಮಾತನಾಡುತ್ತಿದ್ದೀರಿ. ಆದರೆ ಕಳೆದ 10 ವರ್ಷಗಳಿಂದಿದ್ದ ಅಘೋಷಿತ ತುರ್ತು ಪರಿಸ್ಥಿತಿಯನ್ನು ಜನರು ಮುಕ್ತಾಯಗೊಳಿಸಿದ್ದರ ಬಗ್ಗೆ ಮರೆತು ಹೋಗಿದ್ದೀರಿ ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ. ಶಿಕ್ಷಣ ಸಚಿವ ಪ್ರಮಾಣ ವೇಳೆ “ನೀಟ್ ನೀಟ್’ ಘೋಷಣೆ ಕೂಗು!
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಸದಸ್ಯರಾಗಿ ಪ್ರಮಾಣ ಪ್ರಮಾಣವಚನ ಸ್ವೀಕರಿಸುವಾಗ ವಿಪಕ್ಷ ಸದ ಸ್ಯರು “ನೀಟ್ ನೀಟ್’ ಎಂದು ಘೋಷಣೆ ಕೂಗಿದ್ದಾರೆ. ಪರೀಕ್ಷೆಯಲ್ಲಿ ನಡೆದ ಅಕ್ರಮ ಗಳ ಹಿನ್ನೆಲೆ ವಿಪಕ್ಷಗಳು ಕೇಂದ್ರ ಸರಕಾರವನ್ನು ಅಣುಕಿ ಸಿದೆ. ಡಿಎಂಕೆ ಸಂಸದೆ ಕನ್ನಿಮೊಳಿ ಕರುಣಾನಿಧಿ ಈ ಕುರಿತು ಹೇಳಿಕೆ ನೀಡಿದ್ದು, ನೀಟ್ ಪರೀಕ್ಷೆ ಬೇಡ ವೆಂದು ತಮಿಳುನಾಡು ಮೊದಲಿ ನಿಂದಲೂ ಹೇಳು ತ್ತಿದೆ. ನೀಟ್ ಅಕ್ರಮ ಬೆಳಕಿಗೆ ಬಂದ ಹಿನ್ನೆಲೆ, ಇಡೀ ದೇಶ ನಮ್ಮ ಹೇಳಿಕಗೆ ಧ್ವನಿಗೂಡಿಸಿದೆ ಎಂದಿದ್ದಾರೆ. ಸಂಸತ್‌ನಲ್ಲಿ ಸಂವಿಧಾನ ಪ್ರದರ್ಶಿಸಿದ “ಇಂಡಿಯಾ’
18ನೇ ಲೋಕಸಭೆಯ ಮೊದಲ ಅಧಿವೇಶ ನದ ಪ್ರಥಮ ದಿನವೇ ಸಂಸತ್‌ನಲ್ಲಿ ಇಂಡಿಯಾ ಕೂಟದ ಪಕ್ಷಗಳು ತಮ್ಮ ಒಗ್ಗಟ್ಟು ಪ್ರದ ರ್ಶಿಸಿವೆ. 99 ಸ್ಥಾನ ಗಳೊಂದಿಗೆ ಕಾಂಗ್ರೆಸ್‌ಗೆ ಅಧಿಕೃತ ವಿಪಕ್ಷದ ಸ್ಥಾನ ದೊರೆ ತಿರುವುದು ಆ ಪಕ್ಷಕ್ಕೆ ಹೆಚ್ಚಿನ ಹುಮ್ಮಸ್ಸು ತಂದು ಕೊಟ್ಟಿದೆ. ಕಲಾಪ ಆರಂಭಕ್ಕೂ ಮುನ್ನ ವಿಪಕ್ಷಗಳ ಒಕ್ಕೂಟದ ನಾಯಕರು ಸಂಸತ್ ಭವನದತ್ತ ಪಾದ ಯಾತ್ರೆ ನಡೆಸಿದ್ದಾರೆ. ಸೋಮವಾರ ಕಲಾಪ ಆರಂಭಕ್ಕೂ ಮುನ್ನ ಸಂಸತ್ ಆವರಣದಲ್ಲಿ ಗಾಂಧಿ ಗಾಂಧಿ ಪ್ರತಿಮೆ ಇದ್ದ ಜಾಗದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿಎಂಕೆಯ ಟಿ.ಆರ್ ಬಾಲು ಸೇರಿ ಇಂಡಿಯಾ ಒಕ್ಕೂಟದ ನಾಯಕರು ಸೇರಿ ಸಂವಿಧಾನ ಪ್ರತಿಗಳನ್ನು ಪ್ರದರ್ಶಿಸಿದ್ದಾರೆ. ನಾವು ಸಂವಿಧಾನಕ್ಕೆ ಕಾವಲಾಗುತ್ತೇವೆ: ರಾಹುಲ್ ಗಾಂಧಿ
ಸಂವಿಧಾನದ ಮೇಲೆ ಮೋದಿ ದಾಳಿ ನಡೆಸದಂತೆ ನಾವು ಕಾವಲಾಗುತ್ತೇವೆ, ಯಾವ ಶಕ್ತಿಯೂ ಸಂವಿಧಾ ನವನ್ನು ಏನೂ ಮಾಡಲಾಗದು ಎಂದು ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ. ಅನಂತರ ಟ್ವೀಟ್ ಮಾಡಿದ ಅವರು ಮೋದಿ ಈಗ ತಮ್ಮ ಸರಕಾರ ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.