Advertisement
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಕಾಂಗ್ರೆಸ್ ಪಕ್ಷಾಧ್ಯಕ್ಷ ರಾಹುಲ್ ಗಾಂಧಿ, ಸ್ಮತಿ ಇರಾನಿ, ರಾಜ್ಯವರ್ಧನ್ ರಾಥೋಡ್, ಯು.ಪಿ.ಎ. ಅಧ್ಯಕ್ಷೆ ಸೋನಿಯಾ ಗಾಂಧಿ, ಜಯಂತ್ ಸಿನ್ಹಾ ಮೊದಲಾದವರ ಭವಿಷ್ಯ ಇಂದು ನಿರ್ಧಾರವಾಗಲಿದೆ.
Related Articles
Advertisement
ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಎರಡನೇ ಬಾರಿ ಮತಗಟ್ಟೆ ಮೇಲೆ ಗ್ರೆನೇಡ್ ದಾಳಿಯಾಗಿದೆ. ದಾಳಿಯಿಂದಾಗಿ ಮತದಾನ ಕೇಂದ್ರದ ಹೊರಭಾಗಕ್ಕೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಇನ್ನು ಪಶ್ಚಿಮ ಬಂಗಾಳದ ವಿವಿಧ ಕಡೆಗಳಲ್ಲಿ ತೃಣಮೂಲ ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರ ನಡುವೆ ಘರ್ಷಣೆಗಳು ಸಂಭವಿಸಿರುವ ಕುರಿತಾಗಿ ವರದಿಗಳು ಲಭ್ಯವಾಗುತ್ತಿವೆ. ಇಲ್ಲಿನ ಬಾರಕ್ ಪುರ, ಹೌರಾ ಮತ್ತು ಹೂಗ್ಲಿ ಲೋಕಸಭಾ ಕ್ಷೇತ್ರಗಳ ಮತದಾನ ಕೆಂದ್ರಗಳಲ್ಲಿ ಹಿಂಸಾಚಾರ ನಡೆದಿರುವ ಕುರಿತಾಗಿ ಮಾಹಿತಿ ಲಭ್ಯವಾಗಿದೆ.
ಬಾರಕ್ ಪುರದಲ್ಲಿ ಬಿಜೆಪಿ ಅಭ್ಯರ್ಥಿಯ ಮೇಲೆ ಹಲ್ಲೆ ನಡೆದಿರುವ ಘಟನೆಯನ್ನು ಖಂಡಿಸಿರುವ ಪಕ್ಷವು ಇಲ್ಲಿ ಮರುಮತದಾನ ನಡೆಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ. ಇತ್ತ ಟಿಎಂಸಿಯ ಕಲ್ಯಾಣ್ ಬ್ಯಾನರ್ಜಿ ಅವರು ವಿಶೇಷ ಪರಿವೀಕ್ಷಕರು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
– ಮಧ್ಯಪ್ರದೇಶದ ಛತ್ತರ್ ಪುರ್ ಎಂಬಲ್ಲಿ ವ್ಯಕ್ತಿಯೊಬ್ಬರು ತಮ್ಮ ತಂದೆಯ ಶ್ರಾದ್ಧ ಕರ್ಮಗಳನ್ನು ಮುಗಿಸಿಕೊಂಡು ನೇರವಾಗಿ ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡುತ್ತಿರುವುದು.– ಬಿಹಾರದ ಛಾಪ್ರಾದಲ್ಲಿರುವ ಮತದಾನ ಕೇಂದ್ರವೊಂದರಲ್ಲಿ ಇವಿಎಂ ಯಂತ್ರಕ್ಕೆ ಹಾನಿ ಯಂತ್ರಕ್ಕೆ ಹಾನಿ ಮಾಡಿದ ಆರೋಪದಲ್ಲಿ ರಂಜಿತ್ ಪಾಸ್ವಾನ್ ಎಂಬಾತನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
– ಬೆಳಿಗ್ಗೆ 10 ಗಂಟೆಗಳವರೆಗಿನ ವರದಿಗಳ ಪ್ರಕಾರ ಐದನೇ ಹಂತದಲ್ಲಿ ಒಟ್ಟಾರೆಯಾಗಿ 12.64%ನಷ್ಟು ಮತದಾನವಾಗಿದೆ. – ಬಿಹಾರದಲ್ಲಿ 11.51%, ಜಮ್ಮು – ಕಾಶ್ಮೀರದಲ್ಲಿ 1.36%, ಮಧ್ಯಪ್ರದೇಶದಲ್ಲಿ 13.02%, ರಾಜಸ್ಥಾನದಲ್ಲಿ 14.01%, ಉತ್ತರಪ್ರದೇಶದಲ್ಲಿ 9.86%, ಪಶ್ಚಿಮ ಬಂಗಾಳದಲ್ಲಿ 16.56% ಮತ್ತು ಜಾರ್ಖಂಡ್ ನಲ್ಲಿ 13.46% ಮತದಾನವಾಗಿರುವ ಕುರಿತಾಗಿ ಮಾಹಿತಿ ಲಭ್ಯವಾಗಿದೆ.
– ಪಶ್ಚಿಮ ಬಂಗಾಲದ ಬರ್ರಾಕ್ ಪೋರ್ ನ ಅಮ್ರಾಲಾ ಎಂಬಲ್ಲಿ ಬಿಜೆಪಿ ಅಭ್ಯರ್ಥಿ ಅರ್ಜುನ್ ಸಿಂಗ್ ಅವರ ಮೇಲೆ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ. ಬಾಡಿಗೆ ಗೂಂಡಾಗಳನ್ನು ಬಳಸಿಕೊಂಡು ಟಿಎಂಸಿ ಈ ಕೃತ್ಯ ಎಸಗಿದೆ ಎಂದು ಅರ್ಜುನ್ ಸಿಂಗ್ ಅವರು ಆರೋಪಿಸಿದ್ದಾರೆ.