Advertisement
ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಅಭಿವೃದ್ಧಿ ಹಾಗೂ ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಮಾತನಾಡಿದರು.
Related Articles
Advertisement
ಆಗಸ್ಟ್ ತಿಂಗಳಿಗೆ 100 ವರ್ಷ: ಮೈಸೂರು ಮೆಡಿಕಲ್ ಕಾಲೇಜು ಸ್ಥಾಪನೆಯಾಗಿ ಮುಂದಿನ ವರ್ಷ ಆಗಸ್ಟ್ ತಿಂಗ ಳಿಗೆ 100 ವರ್ಷಗಳಾಗುತ್ತದೆ. ಮುಂದಿನ ವರ್ಷ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಕೆ.ಆರ್.ಆಸ್ಪತ್ರೆಯಲ್ಲಿ ಮೂಲ ಸೌಲಭ್ಯಗಳೊಂದಿಗೆ ವಿಶ್ರಾಂತಿ ಗೃಹವನ್ನು ನಿರ್ಮಿಸಬೇಕು. ಕೆ.ಆರ್. ಆಸ್ಪತ್ರೆಯ ನವೀಕರಣಕ್ಕೆ 89 ಕೋಟಿ ರೂ. ಗಳ ಅನುದಾನವನ್ನು ನೀಡಲಾಗಿತ್ತು. ಈ ಕಾಮಗಾರಿಗಳ ಪರಿಶೀಲನೆ ನಡೆಸಲಾಗುವುದು. ಆಸ್ಪತ್ರೆಯಲ್ಲಿ 20 ಡಯಾಲಿಸಿಸ್ ಹಾಸಿಗೆಗಳ ಜೊತೆಗೆ ಇನ್ನೂ 20 ಹಾಸಿಗೆಗಳ ಸೌಲಭ್ಯಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕು ಹಾಗೂ ಹೃದ್ರೋಗ ತಜ್ಞ ವೈದ್ಯರ ಹುದ್ದೆಯನ್ನು ಭರ್ತಿ ಮಾಡಿಕೊಳ್ಳುವಂತೆ ಆಸ್ಪತ್ರೆಯ ಡೀನ್ ಡಾ.ದಾಕ್ಷಾಯಿಣಿ ಅವರಿಗೆ ಸೂಚಿಸಿದರು.
ಮನವಿ ಸಲ್ಲಿಸಿ ಜಾಗ ಪಡೆದುಕೊಳ್ಳಬೇಕು: ಮೈಸೂರು ಜಿಲ್ಲೆಯಲ್ಲಿರುವ ನಿವೇಶನ ರಹಿತರು ಹಾಗೂ ವಸತಿ ರಹಿತರಿಗೆ ವಸತಿ ಸೌಲಭ್ಯ ಕಲ್ಪಿಸಲು ಆಶ್ರಯ ಮನೆ ಯೋಜನೆ ಅಧಿಕಾರಿಗಳು ಹಾಗೂ ಸ್ಲಂ ಬೋರ್ಡ್ ಅಧಿಕಾರಿಗಳಿಗೆ ಸಂಸದರು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಗಳಡಿ ಹಾಸ್ಟೆಲ್‌ಗಳ ನಿರ್ಮಾ ಣಕ್ಕೆ ಜಾಗದ ಅವಶ್ಯಕತೆ ಇದ್ದರೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಜಾಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಆಯುಷ್ಮಾನ್ ಆರೋಗ್ಯ ಕರ್ನಾಟಕ ಕಾರ್ಡ್‌ವಿತರಣೆ: ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಮಾತನಾಡಿ, ಗ್ರಾಮ ಪಂಚಾಯಿತಿಗಳ ಬಾಪೂಜಿ ಸೇವಾ ಕೇಂದ್ರಗಳ ಮೂಲಕವು ಆಯುಷ್ಮಾನ್ ಆರೋಗ್ಯ ಕರ್ನಾಟಕ ಕಾರ್ಡ್‌ಗಳನ್ನು ನೀಡಲಾಗುತ್ತಿದೆ. ಆಯುಷ್ಮಾನ್ ಕಾರ್ಡ್ ಅಲ್ಲದೆ ಎಪಿಎಲ್, ಬಿಪಿಎಲ್ ಹಾಗೂ ಆಧಾರ್ ಕಾರ್ಡ್‌ಗಳನ್ನು ನೀಡಿ ಚಿಕಿತ್ಸೆ ಪಡೆಯಬಹುದು. ಕಳಪೆ ಬಿತ್ತನೆ ಬೀಜ ವಿತರಣೆ ಬಗ್ಗೆ ಎಚ್ಚರಿಕೆ ವಹಿಸಿ ಪರಿಶೀಲನೆ ನಡೆಸುವಂತೆ ಕೃಷಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಶಾಸಕರಾದ ಟಿ.ಎಸ್. ಶ್ರೀ ವತ್ಸ, ಹರೀಶ್ ಗೌಡ, ದರ್ಶನ್ ಧ್ರುವ ನಾರಾಯಣ್, ಜಿಪಂ ಸಿಇಒ ಕೆ.ಎಂ. ಗಾಯತ್ರಿ ಇದ್ದರು.
ನಾಲ್ಕು ಫುಡ್‌ಪಾರ್ಕ್ ಗೆ ಅನುಮೋದನೆ: ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮೀ ಕಾಂತ ರೆಡ್ಡಿ ಮಾತ ನಾಡಿ, ಮೈಸೂರು ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕೊರತೆ ಇಲ್ಲ. ಹೊಸದಾಗಿ 50 ಎಂ.ಎಲ್ ಡಿ ನೀರಿನ ಯೋಜನೆ ರೂಪಿಸಿದ್ದು, ಇದರಲ್ಲಿ ನಗರ ವ್ಯಾಪ್ತಿಗೆ 20 ಎಂ.ಎಲ್.ಡಿ ಅವಶ್ಯಕತೆ ಆಗಬಹುದು. ಉಳಿದ 30 ಎಂ.ಎಲ್.ಡಿ ನೀರನ್ನು ನಗರದ ಹೊರವಲಯದ ಪ್ರದೇಶಗಳಿಗೆ ನೀಡಲಾಗುವುದು. ನಗರ ವ್ಯಾಪ್ತಿಯಲ್ಲಿ 9 ಫುಡ್‌ಪಾರ್ಕ್ ಗ ಳನ್ನು ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದರಲ್ಲಿ ನಾಲ್ಕಕ್ಕೆ ಅನುಮೋದನೆ ದೊರೆತಿದ್ದು, ಇವುಗಳ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
ಮಹಾನಗರ ಪಾಲಿಕೆಯಲ್ಲಿ ನೀರಿನ ಕರ ಸಂಗ್ರಹದಲ್ಲಿ ಏರಿಕೆಯಾಗಿದೆ . ಹಿಂದಿನ ವರ್ಷಗಳಲ್ಲಿ 50 ಕೋಟಿ ರೂ.ವ ರೆಗೆ ಸಂಗ್ರಹವಾಗುತ್ತಿತ್ತು. 2023ರ ಆರ್ಥಿಕ ವರ್ಷದಲ್ಲಿ 93 ಕೋಟಿ ರೂ. ಸಂಗ್ರಹವಾಗಿದೆ ಎಂದು ವಿವರಿಸಿದರು.
ಮುಂದಿನ ವರ್ಷ ಮೆಡಿಕಲ್ ಕಾಲೇಜಿನ ಶತಮಾನೋತ್ಸವ : ಕೆ.ಆರ್.ಆ ಸ್ಪ ತ್ರೆಯ ಡೀನ್ ಡಾ.ದಾಕ್ಷಾಯಣಿ ಮಾತ ನಾಡಿ, ಮುಂದಿನ ವರ್ಷ ಮೆಡಿಕಲ್ ಕಾಲೇಜಿನ ಶತಮಾನೋತ್ಸವ ಆಚರಣೆ ಮಾಡುತ್ತಿದ್ದು, 2023 ರ ಸೆಪ್ಟೆಂಬರ್‌ನಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಕೆ.ಆರ್. ಆಸ್ಪತ್ರೆಯಲ್ಲಿ 20 ಡಯಾಲಿಸಿಸ್ ಹಾಸಿಗೆಗಳು ಇವೆ. ಸೂಪರ್ ಸ್ಪೆಷಾ ಲಿಟಿ ಆಸ್ಪ ತ್ರೆ ಯಲ್ಲಿ 20 ಡಯಾಲಿಸಿಸ್ ಹಾಸಿಗೆಗಳ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.