Advertisement

ಲೋಕಸಭಾ ಅಖಾಡ; ಅಮೇಠಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ

09:12 AM Apr 11, 2019 | Team Udayavani |

ಅಮೇಠಿ:ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬುಧವಾರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಅಮೇಠಿ ಕ್ಷೇತ್ರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ತಾಯಿ ಸೋನಿಯಾ ಗಾಂಧಿ, ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಬಾವ ರಾಬರ್ಟ್ ವಾದ್ರಾ ಜತೆಗಿದ್ದರು.

Advertisement

ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ರಾಹುಲ್ ಗಾಂಧಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯ ಅಭ್ಯರ್ಥಿಯಾಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಖಾಡಕ್ಕಿಳಿದಿದ್ದಾರೆ. ಮತ್ತೊಂದೆಡೆ ಸಮಾಜವಾದಿ ಪಕ್ಷ, ಬಿಎಸ್ಪಿ ಹಾಗೂ ಆರ್ ಎಲ್ ಡಿ ಮೈತ್ರಿಕೂಟ ಅಮೇಠಿಯಲ್ಲಿ ಯಾವುದೇ ಅಧಿಕೃತ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿವೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ನಾಮಪತ್ರ ಸಲ್ಲಿಕೆಗೂ ಮುನ್ನ ರಾಹುಲ್ ಗಾಂಧಿ ಅಮೇಠಿ ನಗರದಲ್ಲಿ ರೋಡ್ ಶೋ ನಡೆಸುವ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದರು. ರೋಡ್ ಶೋ ವೇಳೆ ರಾಹುಲ್ ಗೆ ಗಾಂಧಿ ಕುಟುಂಬ ಸಾಥ್ ನೀಡುವ ಮೂಲಕ ಬಲಪ್ರದರ್ಶಿಸಿವೆ. ತೆರೆದ ವಾಹನದಲ್ಲಿ ಸೋನಿಯಾ, ಪ್ರಿಯಾಂಕಾ, ರಾಬರ್ಟ್ ವಾದ್ರಾ ಹಾಗೂ ಇಬ್ಬರು ಮಕ್ಕಳು(ಪ್ರಿಯಾಂಕಾ, ವಾದ್ರಾ ದಂಪತಿ) ಜತೆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next