Advertisement
ನನ್ನ ರಾಜಕೀಯದ ಅನುಭವದ ಪ್ರಕಾರ ಕಳೆದ ದಿನಗಳಿಗಿಂತ ನಮ್ಮ ಸ್ಥಾನಗಳಿಕೆಯಲ್ಲಿ ಹೆಚ್ಚಳವಾಗಲಿದೆ. ಯಾಕೆಂದರೆ ಜನರಿಗೆ ಮೋದಿ ಬಗ್ಗೆ ಕೆಲವು ಸಂದೇಹಗಳಿದ್ದವು. ಆದರೆ ಇದೀಗ ದೇಶದ ಜನರಿಗೆ ಮೋದಿ ದೇಶದ ಭದ್ರತೆ, ಬಡವರು ಹಾಗೂ ಇತರ ವಿಚಾರಗಳಲ್ಲಿ ಏನು ಮಾಡಿದ್ದಾರೆ ಎಂಬುದನ್ನು ಮನಗಂಡಿದ್ದಾರೆ ಎಂದು ರಿಪಬ್ಲಿಕ್ ಭಾರತ್ ನ್ಯೂಸ್ ಚಾನೆಲ್ ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
Related Articles
Advertisement
2014ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮಹಾಘಟಬಂಧನ್ ಹೆಚ್ಚು ಭಯಕ್ಕೊಳಗಾಗಿವೆ. ದೇಶದ ಜನರ ಮನೋಭಾವ ಕೂಡಾ ಬದಲಾಗಿದೆ. ದೇಶದಲ್ಲಿ ಪೂರ್ಣ ಪ್ರಮಾಣದ ಬಹುಮತ ಇರುವ ಸರ್ಕಾರವನ್ನೇ ಜನರು ಬಯಸುತ್ತಾರೆ. ಕಳೆದ 30 ವರ್ಷಗಳಲ್ಲಿ ಅಸ್ಥಿರತೆಯ ಸರ್ಕಾರಗಳನ್ನು ನೋಡಿದ್ದಾರೆ. ಜೊತೆಗೆ ಐದು ವರ್ಷಗಳ ಪೂರ್ಣ ಬಹುಮತ ಇರುವ ಸರ್ಕಾರವನ್ನು ನೋಡಿದ್ದಾರೆ. ಹೀಗಾಗಿ ದೇಶದ ಜನರಿಗೆ ಮತ್ತೆ ಅಸ್ಥಿರ ಸರ್ಕಾರ ರಚನೆ ಬೇಕಾಗಿಲ್ಲ ಎಂದು ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ವಿವರಿಸಿದ್ದಾರೆ.
ವಂಶಾಡಳಿತ ಪ್ರಜಾಪ್ರಭುತ್ವಕ್ಕೆ ಮಾರಕ:
ದೇಶದ ರಾಜಕಾರಣದಲ್ಲಿ ಒಂದೇ ಕುಟುಂಬದ ನಾಲ್ಕು ತಲೆಮಾರುಗಳು ಬಡತನ ನಿರ್ಮೂಲನೆ ಬಗ್ಗೆಯೇ ಮಾತನಾಡಿವೆ. ಇಂದಿರಾ ಗಾಂಧಿ ಕೂಡಾ ಗರಿಬೀ ಹಠಾವೋ ಎಂದರು, ರಾಜೀವ್ ಗಾಂಧಿ, ಈಗ ರಾಹುಲ್ ಗಾಂಧಿ ಬಡತನ ನಿರ್ಮೂಲನೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.