Advertisement

Lok Sabha Elections; ದಾಖಲೆ ಇಲ್ಲದೇ ಸಾಗಿಸುತ್ತಿದ್ದ 7 ಲಕ್ಷ ಹಣ ವಶ

08:49 PM Mar 31, 2024 | Team Udayavani |

ಕುಳಗೇರಿ ಕ್ರಾಸ್ (ಬಾಗಲಕೋಟೆ): ಲೋಕಸಭಾ ಚುನಾವಣೆ ಹಿನ್ನೆಲೆ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಯ ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸ್ಥಾಪಿಸಲಾದ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದ ಒಟ್ಟು 2,74,000 ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಾದಾಮಿ ಪಿಎಸ್‌ಐ ವಿಠಲ್ ನಾಯಕ್ ತಿಳಿಸಿದ್ದಾರೆ.

Advertisement

ಈ ಕುರಿತು ಮಾಹಿತಿ ನೀಡಿರುವ ಅವರು ಕುಳಗೇರಿ ಕ್ರಾಸ್ ಚಕ್‌ಪೋಸ್ಟ್ ನಲ್ಲಿ ತಪಾಸಣೆ ನಡೆಸಿದ ವೇಳೆ ರಾಮದುರ್ಗ ಕಡೆಯಿಂದ ಬರುತ್ತಿದ್ದ ಮಹಿಂದ್ರಾ ಪಿಕಪ್ ವಾಹನದಲ್ಲಿ ಸರಿಯಾದ ದಾಖಲೆ ಇಲ್ಲದ 2,74,000 ರೂ. ಹಣ ಪತ್ತೆಯಾಗಿದ್ದು. ಸರಿಯಾದ ದಾಖಲೆ ನೀಡದ ಕಾರಣ ಹಣವನ್ನು ಜಪ್ತಿ ಮಾಡಲಾಗಿದ್ದು ಸಂಬಂದಿಸಿದ ಚುನಾವಣಾ ಸೀಜರ್ ಕಮಿಟಿಯವರಿಗೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.

ಎಫ್‌ಎಸ್‌ಕೆ ಸ್ಕಾಡ್ ರವಿ ರಾಠೋಡ, ಎಎಸ್‌ಐ ಎಚ್ ಎ ಹವಾಲ್ದಾರ, ಜಿ ಎಸ್ ಹೊಸಮನಿ, ಮಹಾಂತೇಶ ಹರದಳ್ಳಿ, ಆರ್ ಎಂ ಮರೆನ್ನವರ, ಬಿ ಎ ಮುಲ್ಲಾ, ರಮೇಶ ಉಳ್ಳಾಗಡ್ಡಿ ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next