Advertisement
ಒಡಿಶಾದ 6 ಲೋಕಸಭಾ ಕ್ಷೇತ್ರದ ಜತೆಗೆ 42 ವಿಧಾನಸಭಾ ಕ್ಷೇತ್ರಗಳಿಗೂ ಇದೇ ಹಂತ ದಲ್ಲಿ ಮತದಾನ ನಡೆದಿದೆ. 6ನೇ ಹಂತದಲ್ಲಿ ಒಟ್ಟು 11.13 ಕೋಟಿ ಅರ್ಹ ಮತದಾರಿದ್ದಾರೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಮನೋಜ್ ತಿವಾರಿ, ಕನ್ಹಯ್ಯ ಕುಮಾರ್, ಮೇನಕಾ ಗಾಂಧಿ, ಮೆಹಬೂಬಾ ಮುಫ್ತಿ, ಅಭಿಜಿತ್ ಗಂಗೋಪಾಧ್ಯಾಯ, ಮನೋಹರ್ ಲಾಲ್ ಕಟ್ಟರ್, ನವೀನ್ ಜಿಂದಾಲ್ ಸಹಿತ 889 ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರವಾಗಿದೆ.
Related Articles
ಝಾರ್ಖಂಡ್‌ನ ರಾಂಚಿ ಲೋಕಸಭೆ ಕ್ಷೇತ್ರದಲ್ಲಿರುವ ಮಹಿಳಾ ಹಾಕಿ ಥೀಮ್ ಮತದಾನ ಕೇಂದ್ರವು ಭಾರೀ ಗಮನ ಸೆಳೆಯಿ ತು. ರಾಂಚಿಯ ಬರಿಯತು ಸಿಎಂ ಸ್ಕೂಲ್ ಆಫ್ ಎಕ್ಸೆ ಈ ಕೇಂದ್ರದಲ್ಲಿ ಒಟ್ಟು 6 ಬೂತ್‌ಗಳಿದ್ದವು. ಇಲ್ಲಿ ಭಾರತೀಯ ಹಾಕಿ ತಂಡದ ಆಟಗಾರ್ತಿಯರಾದ ನಾಯಕಿ ಸಲಿಮಾ ತೇಟೆ, ನಿಕ್ಕಿ ಪ್ರಧಾನ್ ಮತ್ತು ಸಂಗೀತಾ ಕುಮಾರಿ ಅವರು ಪೋಸ್ಟರ್‌ಗಳನ್ನು ಅಂಟಿಸಲಾಗಿತ್ತು.
Advertisement
ಪಿಡಿಪಿ ಕಾರ್ಯಕರ್ತರು ವಶ: ಮೆಹಬೂಬಾ ಪ್ರತಿಭಟನೆತಮ್ಮ ಪಕ್ಷದ ಪೋಲಿಂಗ್ ಏಜೆಂಟ್ ಮತ್ತು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದನ್ನು ವಿರೋಧಿಸಿ ಪಿಡಿಪಿ ನಾಯಕಿ ಮೆಹ ಬೂಬಾ ಮುಫ್ತಿ ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬಿಜ್‌ಬಿಹಾರಾ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ನೆರೆದಿದ್ದರಿಂದ ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ಮತದಾನ ಕೇಂದ್ರದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದಕ್ಕೆ ವಶಕ್ಕೆ ಪಡೆದಿದೆ ಎಂದು ಪೊಲೀಸರು ಸಮಜಾಯಿಷಿ ನೀಡಿದ್ದಾರೆ. ಇದೇ ವೇಳೆ, ತಮ್ಮ ಮೊಬೈಲ್ ನಲ್ಲಿ ಔಟ್ ಗೋ ಯಿಂಗ್ ಕರೆಗಳನ್ನು ತಡೆ ಹಿಡಿಯಲಾಗಿದೆ ಎಂದೂ ದೂರಿದ್ದಾರೆ. ಪಶ್ಚಿಮ ಬಂಗಾಲದ 8 ಕ್ಷೇತ್ರಗಳಲ್ಲಿ ಹಿಂಸಾಚಾರ
ಪಶ್ಚಿಮ ಬಂಗಾಲದ 8 ಲೋಕಸಭಾ ಕ್ಷೇತ್ರಗಳ ಚುನಾವಣೆ ವೇಳೆ ಅಲ್ಲಲ್ಲಿ ಹಿಂಸಾಚಾರ ನಡೆದಿದೆ. ಸಾವಿರಕ್ಕೂ ಅಧಿಕ ದೂರುಗಳನ್ನು ಚುನಾವಣ ಆಯೋಗವು ಸ್ವೀಕರಿಸಿದೆ. ಇಷ್ಟಾಗಿಯೂ ಮತದಾನ ಶಾಂತಿಯುತವಾಗಿ ನಡೆದಿದೆ ಎಂದು ಆಯೋಗ ಹೇಳಿದೆ. ಘಟಾಲ್‌ನಲ್ಲಿ ಬಿಜೆಪಿ- ಟಿಎಂಸಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ರಸ್ತೆಯಲ್ಲೇ ಕುಳಿತು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮಿಡ್ನಾಪುರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೋ ಬ್ಯಾಕ್ ಪ್ರತಿಭಟನೆ ಎದುರಿಸಬೇಕಾಯಿತು. ತಮುಕ್ ಕ್ಷೇತ್ರದ ಅಭ್ಯರ್ಥಿ, ಹೈಕೋರ್ಟ್‌ನ ಮಾಜಿ ಜಡ್ಜ್ ಗಂಗೋಪಾಧ್ಯಾಯ ವಿರುದ್ಧವು ಕೆಲವರು ಘೋಷಣೆಗಳನ್ನು ಕೂಗಿದರು. ಬನಕುರಾ, ಪೂರ್ವ ಮಿಡ್ನಾಪುರ್ ಸೇರಿ ಅಲ್ಲಲ್ಲಿ ಅಹಿತಕರ ಘಟನೆಗಳು ನಡೆದಿವೆ. ತಮ್ಮ ಬೆಂಗಾವಲು ಪಡೆಯ ಮೇಲೆ ದಾಳಿ ನಡೆದಿದೆ ಎಂದು ಝಾಡಗ್ರಾಮ್ ಕ್ಷೇತ್ರದ ಅಭ್ಯರ್ಥಿ ಪ್ರಣತ್ ಟುಡು ಆರೋಪಿಸಿದ್ದಾರೆ. ರಸ್ತೆ ಅಡ್ಡಗಟ್ಟಿದ ಟಿಎಂಸಿ ಗೂಂಡಾಗಳು ನನ್ನ ಕಾರಿನ ಮೇಲೆ ಇಟ್ಟಿಗೆಗಳನ್ನು ಎಸೆದರು. ಸಿಐಎಸ್‌ಎಫ್ನ ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.