Advertisement
ಪಶ್ಚಿಮ ಬಂಗಾಲದಲ್ಲಿ 4ನೇ ಹಂತದ ಮತದಾನದಲ್ಲೂ ಹಿಂಸಾಚಾರ, ವಿವಿಧ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆಗಳು ನಡೆದಿವೆ. ಒಡಿಶಾ, ಉತ್ತರಪ್ರದೇಶ, ಬಿಹಾರ ಮತ್ತು ಮಹಾ ರಾಷ್ಟ್ರಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳಲ್ಲಿನ ದೋಷವು ಮತದಾನವನ್ನು ವಿಳಂಬವಾಗುವಂತೆ ಮಾಡಿದೆ. ಎಲ್ಲ ರಾಜ್ಯಗಳಲ್ಲೂ ಮಧ್ಯಾಹ್ನದ ವರೆಗೂ ಉತ್ತಮ ಸಂಖ್ಯೆಯಲ್ಲಿ ಬಂದು ಜನ ಹಕ್ಕು ಚಲಾಯಿಸಿದ್ದಾರೆ.
Related Articles
Advertisement
ಇವಿಎಂ ಲೋಪ: ನೆರೆಯ ಬಿಹಾರದಲ್ಲಿ ಮೂರು ಮತಗಟ್ಟೆಗಳಲ್ಲಿ ಮತಯಂತ್ರಗಳಲ್ಲಿ ಲೋಪ ಕಾಣಿಸಿ ಕೊಂಡ ಕಾರಣ, ಮತದಾನ ಪ್ರಕ್ರಿಯೆ ವಿಳಂಬ ವಾಯಿತು. ಒಡಿಶಾದಲ್ಲೂ 60 ಮತಗಟ್ಟೆಗಳಲ್ಲಿ ಇದೇ ರೀತಿಯ ಸಮಸ್ಯೆ ತಲೆದೋರಿತು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ಎನ್‌ಸಿಪಿ ಇವಿಎಂ ದೋಷ ಕುರಿತು ಒಟ್ಟು 30 ದೂರುಗಳನ್ನು ಆಯೋಗಕ್ಕೆ ಸಲ್ಲಿಸಿವೆ. ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಬಿಸಿಲಿನ ಝಳದ ನಡುವೆಯೂ ಜನರು ಸರತಿಯಲ್ಲಿ ನಿಂತು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದರು. ಮುಂಬಯಿನಲ್ಲಿ ಸೆಲೆಬ್ರಿಟಿಗಳ ದಂಡೇ ಮತಗಟ್ಟೆಗಳಲ್ಲಿ ಕಾಣಿಸಿಕೊಂಡು, ಜನಸಾಮಾನ್ಯರ ಕಣ್ಮನ ತಣಿಸಿತು.
ಕಾಸರಗೋಡಲ್ಲಿ ಬೋಗಸ್ ಮತದಾನ ನಡೆದಿದ್ದು ನಿಜಸಿಪಿಎಂ ಪಂಚಾಯತ್ ಸದಸ್ಯರೊಬ್ಬರು ಎ. 23ರಂದು ಕಾಸರಗೋಡು ಕ್ಷೇತ್ರದಲ್ಲಿ ಬೋಗಸ್ ವೋಟಿಂಗ್ ಮಾಡಿದ್ದು ನಿಜ ಎಂದು ಕೇರಳ ಮುಖ್ಯ ಚುನಾವಣಾ ಅಧಿಕಾರಿ ಟೀಕಾರಾಮ್ ಮೀನಾ ಸೋಮವಾರ ಘೋಷಿಸಿದ್ದಾರೆ. 3ನೇ ಹಂತದ ಮತದಾನದ ವೇಳೆ ಪಯ್ಯನ್ನೂರಿನ ಪಿಲಾಥರಾ ಬೂತ್‌ನಲ್ಲಿ ಕೆಲವರು ಹಲವು ಬಾರಿ ಹಕ್ಕು ಚಲಾಯಿಸಿದ್ದ ಸಿಸಿಟಿವಿ ವಿಡಿಯೋವನ್ನು ಇತ್ತೀಚೆಗೆ ಸ್ಥಳೀಯ ಚಾನೆಲ್‌ಗಳು ಪ್ರಸಾರ ಮಾಡಿದ್ದವು. ಮಹಿಳೆಯೊಬ್ಬರು ಮತಗಟ್ಟೆಯಿಂದ ಹೊರಕ್ಕೆ ಕಾಲಿಡುತ್ತಿದ್ದಂತೆ ತಮ್ಮ ಕೈಬೆರಳಿನ ಶಾಯಿಯನ್ನು ಒರೆಸಿಕೊಂಡಿದ್ದು ಹಾಗೂ ಅದೇ ಮಹಿಳೆ ಎರಡನೇ ಬಾರಿ ಮತ ಚಲಾಯಿಸಿದ್ದು ವಿಡಿಯೋದಲ್ಲಿ ಸೆರೆ ಯಾ ಗಿತು. ಇದೀಗ ಇಲ್ಲಿ ನಕಲಿ ಮತದಾನ ನಡೆದಿ ರುವುದು ಹೌದು ಎಂದು ಆಯೋಗವೇ ಒಪ್ಪಿಕೊಂ ಡಿದೆ. ಇದೇ ವೇಳೆ, ನಕಲಿ ಮತದಾನ ಹಿನ್ನೆಲೆಯಲ್ಲಿ ಕಾಸರಗೋಡು ಕ್ಷೇತ್ರದ 110 ಮತಗಟ್ಟೆಗಳಲ್ಲಿ ಮರು ಚುನಾವಣೆ ನಡೆಯಬೇಕು ಎಂದು ಜಿಲ್ಲಾಧಿಕಾರಿಗೆ ಯುಡಿಎಫ್ ಮನವಿ ಸಲ್ಲಿಸಿದೆ. ಸಂಹಿತೆ ಉಲ್ಲಂಘಿಸಿದ ನಾಯಿ ಅರೆಸ್ಟ್!
ಬಿಜೆಪಿಯ ಪರೋಕ್ಷ ಪ್ರಚಾರಕ್ಕಾಗಿ ಬಳಸಿಕೊಳ್ಳ ಲಾಗಿದ್ದ ಸಾಕು ನಾಯಿ ಹಾಗೂ ಅದರ ಮಾಲೀಕ ರನ್ನು ಉತ್ತರ ಮಹಾರಾಷ್ಟ್ರದ ನದುರ್ಬರ್ ನಗರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೋಮವಾರ, ಮಹಾರಾಷ್ಟ್ರದಲ್ಲಿ 4ನೇ ಹಂತದ ಮತದಾನ ನಡೆಯುತ್ತಿದ್ದಂತೆಯೇ ನವರತ್ನ ನಗರ ಎಂಬ ಪ್ರಾಂತ್ಯದ ನಿವಾಸಿ ಮೋತಿರಾಮ್ ಚೌಧರಿ (65) ತಮ್ಮ ನಾಯಿಯೊಂದಿಗೆ ಹೊರಗಡೆ ಕಾಣಿಸಿ ಕೊಂಡಿದ್ದು, ನಾಯಿಯ ಮೈಮೇಲೆ ಪೂರ್ತಿಯಾಗಿ ಬಿಜೆಪಿ ಪಕ್ಷವನ್ನು ಬೆಂಬಲಿಸುವ ಅರ್ಥ ಬರುವ “ಮೋದಿ ಲಾವೋ ದೇಶ್ ಬಚಾವೋ’ ಎಂಬ ವಾಕ್ಯವುಳ್ಳ ಸ್ಟಿಕರ್‌ಗಳನ್ನು ಅಂಟಿಸಲಾಗಿತ್ತು. ಹಾಗಾಗಿ, ನಾಯಿ,ಮಾಲೀಕನ ಬಂಧನವಾಗಿದೆ. ಚುನಾವಣೆಗೆ ಸ್ಪರ್ಧಿಸಲಿರುವ ಕಾಶ್ಮೀರಿ ಪಂಡಿತರು
ಜಮ್ಮು ಕಾಶ್ಮೀರದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಶ್ಮೀರಿ ಪಂಡಿತರು ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಮಾಡಿದ್ದಾರೆ. ಇದಕ್ಕಾಗಿ ಅವರು ರಾಜಕೀಯ ಪಕ್ಷವನ್ನೂ ರಚಿಸಿಕೊಂಡಿದ್ದಾರೆ. ಸುಪ್ರೀಂಕೋರ್ಟ್ ಹಿರಿಯ ವಕೀಲ ಅಶೋಕ್ ಭಾನ್ ನೇತೃತ್ವದಲ್ಲಿ ಕಾಶ್ಮೀರಿ ಪಂಡಿತ್ ಪೊಲಿಟಿಕಲ್ ಆಕ್ಷನ್ ಕಮಿಟಿ (ಕೆಪಿಪಿಎಸಿ) ಸ್ಥಾಪಿಸಲಾಗಿದೆ. ಪಂಡಿತರು ಕಾಶ್ಮೀರಕ್ಕೆ ಮರಳಲು ಹೋರಾಟ ನಡೆಸುವ ಸಲುವಾಗಿ ಈ ಸಮಿತಿ ರಚಿಸಲಾಗಿದೆ. ಈ ಸಮಿತಿ ವಿಧಾನಸಬೆ ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಈಗಾಗಲೇ ದೇಶಾದ್ಯಂತ ಪಕ್ಷಕ್ಕೆ ನೋಂದಣಿ ಮಾಡಿಸಿಕೊಳ್ಳುವಂತೆ ಆಗ್ರಹಿಸಲಾಗಿದೆ. ಕಾಶ್ಮೀರದಲ್ಲಿನ 41 ಸಾವಿರ ಹಾಗೂ ಜಮ್ಮುವಿನ 21 ಸಾವಿರ ವಲಸಿಗರು ದಿಲ್ಲಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.