ನವದೆಹಲಿ: ಲೋಕಸಭೆ ಚುನಾವಣೆಯ 6ನೇ ಹಂತದ ಮತದಾನ ಶನಿವಾರ ಬೆಳಿಗ್ಗೆ ಆರಂಭಗೊಂಡಿದೆ. ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ 58 ಸ್ಥಾನಗಳಲ್ಲಿ 6ನೇ ಹಂತದ ಸಾರ್ವತ್ರಿಕ ಚುನಾವಣೆಗಳಲ್ಲಿ ಸ್ಪರ್ಧಿಸುವ 889 ಅಭ್ಯರ್ಥಿಗಳ ಭವಿಷ್ಯವನ್ನು 11 ಕೋಟಿ ಮತದಾರರು ನಿರ್ಧರಿಸಲಿದ್ದಾರೆ.
ಅದರಂತೆ ದೆಹಲಿ (ಎಲ್ಲಾ 7), ಹರಿಯಾಣ (ಎಲ್ಲಾ 10), ಬಿಹಾರ (8), ಜಮ್ಮು ಮತ್ತು ಕಾಶ್ಮೀರ (1), ಜಾರ್ಖಂಡ್ (4), ಒಡಿಶಾ (6), ಉತ್ತರ ಪ್ರದೇಶ (14) ಮತ್ತು ಪಶ್ಚಿಮ ಬಂಗಾಳದಲ್ಲಿ (8) ಮತದಾನ ನಡೆಯಲಿದೆ.
ಇಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿ ನಾಯಕರಾದ ಮೇನಕಾ ಗಾಂಧಿ, ಮನೋಜ್ ತಿವಾರಿ, ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ ಮೆಹಬೂಬಾ ಮುಫ್ತಿ, ಕಾಂಗ್ರೆಸ್‌ನ ಕನ್ಹಯ್ಯಾ ಕುಮಾರ್ ಸೇರಿದಂತೆ ಹಲವು ಸ್ಥಾನಗಳಲ್ಲಿ ಉನ್ನತ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.
ಜೂನ್ 2 ರಂದು ಕೊನೆಯ ಹಂತದ ಮತದಾನ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದ್ದು ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
2019ರಲ್ಲಿ ಕಾಂಗ್ರೆಸ್ ಈ 58 ಕ್ಷೇತ್ರಗಳ ಪೈಕಿ ಒಂದರಲ್ಲೂ ಜಯ ಸಾಧಿಸಿರಲಿಲ್ಲ. ಬಿಜೆಪಿ 40, ಟಿಎಂಸಿ, ನ್ಯಾಶನಲ್ ಕಾನ್ಫರೆನ್ಸ್, ಎಸ್‌ಪಿ, ಬಿಎಸ್‌ಪಿ, ಬಿಜೆಡಿ ಉಳಿದ ಸ್ಥಾನಗಳನ್ನು ಗೆದ್ದುಕೊಂಡಿದ್ದವು.
ಇದನ್ನೂ ಓದಿ: Horoscope: ಉದ್ಯೋಗದಲ್ಲಿ ಯಶಸ್ಸು. ವ್ಯವಹಾರದಲ್ಲಿ ಅಪರಿಮಿತ ಸಾಧನೆಯ ದಿನ