Advertisement

April 19ಕ್ಕೆ ಚುನಾವಣೆ, 22ಕ್ಕೆ ಫ‌ಲಿತಾಂಶ ಸುದ್ದಿ ಸುಳ್ಳು : ಆಯೋಗ

01:48 PM Feb 26, 2024 | Team Udayavani |

ಹೊಸದಿಲ್ಲಿ: ಈ ಬಾರಿಯ ಲೋಕಸಭೆ ಚುನಾವಣೆಯು ಎ. 19ರಂದು ನಡೆಯಲಿದೆ ಎನ್ನುವ ಸುದ್ದಿಯು ವಾಟ್ಸ್‌ ಆ್ಯಪ್‌ ಮತ್ತಿತರ ಸಾಮಾ ಜಿಕ ಜಾಲತಾಣಗಳಲ್ಲಿ ಹರಿದಾಡು ತ್ತಿದ್ದು, ಇದು ಸಂಪೂರ್ಣ ಸುಳ್ಳು ಸುದ್ದಿ ಎಂದು ಚುನಾವಣ ಆಯೋಗ ಸ್ಪಷ್ಟಪಡಿಸಿದೆ.

Advertisement

ಅಲ್ಲದೆ ಚುನಾವಣೆ ದಿನಾಂಕ ನಿಗದಿಯಾದರೆ ಅದನ್ನು ಪತ್ರಿಕಾಗೋಷ್ಠಿ ಮೂಲಕವೇ ತಿಳಿಸಲಾಗುವುದು. ಸಂದೇಶ ಅಥವಾ ವಾಟ್ಸ್‌ಆಪ್‌ ಮೂಲಕ ಅಲ್ಲ ಎಂದೂ ಹೇಳಿದೆ.

ಆಯೋಗದ ಲೆಟರ್‌ಹೆಡ್‌ನ‌ಲ್ಲಿ ಮುದ್ರಿತವಾಗಿರುವಂಥ ಸಂದೇಶವೊಂದು ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಆ ಸಂದೇಶದಲ್ಲಿ ಮಾ. 12ರಂದು ನೀತಿ ಸಂಹಿತೆ ಜಾರಿಯಾಗಲಿದೆ. ಮಾ. 28 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ, ಎ. 19ರಂದು ಚುನಾವಣೆ ಮತ್ತು ಮಾ. 22ರಂದು ಫ‌ಲಿತಾಂಶ ಎಂದು ಹೇಳಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next