Advertisement

Lok Sabha Election: ಚುನಾವಣಾ ಪ್ರಚಾರದ ಅಬ್ಬರ; ಕೂಲಿ ಕಾರ್ಮಿಕರಿಗೆ ಬರ!

12:55 PM Apr 15, 2024 | Team Udayavani |

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣಾ ಪರಿಣಾಮ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕೃಷಿ ಕೂಲಿ ಹಾಗೂ ಕಟ್ಟಡ ಇತರೇ ನಿರ್ಮಾಣ ಕಾರ್ಮಿಕರಿಗೆ ಬರ ತಂದೊಡ್ಡಿದ್ದು ನಿರ್ಮಾಣ ಕಾರ್ಯಕ್ಕೆ ಭಾರೀ ಹಿನ್ನೆಡೆ ಆದಂತೆ ಆಗಿದೆ.

Advertisement

ಹೌದು, ಲೋಕಸಭಾ ಚುನಾವಣೆ ಇನ್ನೂ ಕೇವಲ 12 ದಿನ ಮಾತ್ರ ಬಾಕಿ ಇದ್ದು, ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿರುವ ಪರಿಣಾಮ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಕೃಷಿ ಕೂಲಿ ಕಾರ್ಮಿಕರು ಕೆಲಸ ಕಾರ್ಯಗಳಿಗೆ ಗುಡ್‌ ಬೈ ಹೇಳಿ ಚುನಾವಣಾ ಪ್ರಚಾರಕ್ಕೆ ಮುಂದಾಗಿರುವ ಪರಿಣಾಮ ಕೃಷಿ ಹಾಗೂ ಇತರೇ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಕಾರ್ಮಿಕರ ಬರ ಎದುರಾಗಿದೆ.

ಲೋಕಸಭಾ ಚುನಾವಣೆಯು ಜಿಲ್ಲಾದ್ಯಂತ ಕಾಂಗ್ರೆಸ್‌ ಹಾಗೂ ಬಿಜೆಪಿ ಜೆಡಿಎಸ್‌ ಪಕ್ಷಗಳಿಗೆ ತೀವ್ರ ಪ್ರತಿಷ್ಠೆಯ ಕಣವಾಗಿದ್ದು, ಜಿದ್ದಾಜಿದ್ದಿಗೆ ನಿಂತ ಚುನಾವಣಾ ಪ್ರಚಾರಕ್ಕೆ ಅಭ್ಯರ್ಥಿಗಳು ಹಾಗೂ ಅವರ ಹಿಂಬಾಲಕರು ತೊಡಗಿರುವ ಪರಿಣಾಮ ನಗರ ಭಾಗಕ್ಕೆ ಗ್ರಾಮೀಣ ಭಾಗದಿಂದ ಬರುತ್ತಿದ್ದ ಕಟ್ಟಡ ಹಾಗೂ ಇತರೇ ನಿರ್ಮಾಣ ಕಾರ್ಮಿಕರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇದರಿಂದ ನಗರ ಭಾಗದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಕಾಮಗಾರಿಗಳು ಕಾರ್ಮಿಕರ ಕೊರತೆಯಿಂದ ಸ್ಥಗಿತಗೊಂಡಿವೆ. ಮೇಸ್ತಿಗಳಿದ್ದರೂ ಕಟ್ಟಡಕ್ಕೆ ಬೇಕಾದ ಕಚ್ಚಾ ಸಾಮಗ್ರಿ ತಂದುಕೊಡುವ ಕಾರ್ಮಿಕರು ಚುನಾವಣೆ ಪರಿಣಾಮ ಹಳ್ಳಿಗಳಲ್ಲಿಯೆ ಠಿಕಾಣಿ ಹೂಡಿದ್ದು, ಇದರಿಂದ ಕಟ್ಟಡ ಕಾಮಗಾರಿಗಳು ಸ್ಥಗಿತಗೊಳ್ಳುವಂತಾಗಿದೆ. ಬಣ್ಣದ ಕೆಲಸಗಾರರು ಕೂಡ ನಗರಗಳಿಗೆ ಬರುತ್ತಿಲ್ಲ. ಚುನಾವಣೆ ಮುಗಿಯುವವರೆಗೂ ಪೈಟಿಂಗ್‌ ಕೆಲಸ ಸ್ಥಗಿತ ಮಾಡಿದ್ದೇವೆಂದು ಚಿಕ್ಕಬಳ್ಳಾಪುರದ ಜೈ ಭೀಮ್‌ ನಗರದ ಪೈಟಿಂಗ್‌ ಗುತ್ತಿಗೆದಾರ ಮುರಳಿ ಭಾನುವಾರ ಉದಯವಾಣಿಗೆ ತಿಳಿಸಿದರು.

ಸಾಕಷ್ಟು ಕೆಲಸ ಇದೆ. ಆದರೆ ಪೈಟಿಂಗ್‌ ಕಾರ್ಮಿಕರು ಬರುತ್ತಿಲ್ಲ. ಚುನಾವಣೆ ಮುಗಿಯುವರೆಗೂ ಯಾವುದೇ ಕೆಲಸ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಕಾರ್ಮಿಕರ ಬರದ ಬಗ್ಗೆ ಮುರಳಿ ವಿವರಿಸಿದರು.

ಸಭೆ, ಸಮಾವೇಶಗಳಿಗೂ ಕಾರ್ಮಿಕರ ಹಾಜರ್‌ :

Advertisement

ರಾಜಕೀಯ ಪಕ್ಷಗಳು ನಡೆಸುವ ಚುನಾವಣಾ ಪ್ರಚಾರ ಸಭೆಗಳಿಗೆ ಅದರಲ್ಲೂ ರೋಡ್‌ ಶೋ ಅಥವ ತಮ್ಮ ನಾಯಕರ ಆಗಮನ ವೇಳೆ ಆಯೋಜಿಸುವ ಸಮಾವೇಶಗಳಿಗೆ ಕೃಷಿ ಕೂಲಿ ಕಾರ್ಮಿಕರನ್ನು ಹಾಗೂ ಕಟ್ಟಡ ಹಾಗೂ ಇತರೇ ನಿರ್ಮಾಣ ಕಾರ್ಮಿಕರನ್ನು ರಾಜಕೀಯ ಪಕ್ಷಗಳು ಬಳಸಿಕೊಳ್ಳುತ್ತಿರುವುದರಿಂದ ಸಹಜವಾಗಿಯೆ ಜಿಲ್ಲೆಯಲ್ಲಿನ ನಗರ ಭಾಗದಲ್ಲಿ ಕಾರ್ಮಿಕರ ಕೊರತೆ ಎದುರಾಗಿದೆ. ಹಲವು ನಿರ್ಮಾಣ ಹಂತದಲ್ಲಿರುವ ಕಟ್ಟಡ ಕಾಮಗಾರಿಗಳು ಸ್ಥಿಗತಗೊಂಡಿವೆ. ಗ್ರಾಮೀಣ ಭಾಗದ ಕೃಷಿ ಚಟುವಟಿಕೆಗಳಿಗೂ ಕಾರ್ಮಿಕರ ಬರ ಎದುರಾಗಿದೆ. ಪಕ್ಷಗಳಿಂದ ಕಾರ್ಮಿಕರಿಗೆ ಬೇಡಿಕೆ ಹೆಚ್ಚಿರುವುದರಿಂದ ಪಕ್ಷಗಳು ಕೂಡ ಕಾರ್ಮಿಕರು ಕೇಳಿದಷ್ಟು ಭತ್ಯೆ ಕೊಡಬೇಕಿದೆ.

– ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next