Advertisement

LokSabha Election; ಚುನಾವಣೆ ಪ್ರಚಾರ ವೀಕ್ಷಿಸಲು 25 ರಾಷ್ಟ್ರಗಳನ್ನು ಆಹ್ವಾನಿಸಿದ ಬಿಜೆಪಿ

09:52 AM Apr 11, 2024 | Team Udayavani |

ಹೊಸದಿಲ್ಲಿ: ದಿಟ್ಟ ನಡೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಭಾರತದಲ್ಲಿ ಮುಂಬರುವ ಲೋಕಸಭೆ ಚುನಾವಣೆಯನ್ನು ವೀಕ್ಷಿಸಲು 25 ವಿದೇಶಿ ರಾಷ್ಟ್ರಗಳಿಗೆ ಆಹ್ವಾನವನ್ನು ನೀಡಿದೆ. ಈ ಅಭೂತಪೂರ್ವ ಹೆಜ್ಜೆಯು ಅಂತಾರಾಷ್ಟ್ರೀಯ ನಾಯಕರಿಗೆ ಭಾರತದ ಪ್ರಜಾಸತ್ತಾತ್ಮಕ ಪ್ರಕ್ರಿಯೆ ಮತ್ತು ಬಿಜೆಪಿಯ ಪ್ರಚಾರ ಕಾರ್ಯತಂತ್ರಗಳ ಬಗ್ಗೆ ನೇರ ಒಳನೋಟವನ್ನು ಒದಗಿಸುವ ಗುರಿಯನ್ನು ಹೊಂದಿದೆ.

Advertisement

ಪಾರದರ್ಶಕ ಚುನಾವಣೆಯ ಬಗ್ಗೆ ವಿರೋಧ ಪಕ್ಷಗಳಿಂದ ಆರೋಪಗಳು ಹೆಚ್ಚುತ್ತಿದ್ದಂತೆ, ಬಿಜೆಪಿಯ ಕ್ರಮವು ಪಾರದರ್ಶಕತೆ ಮತ್ತು ಬದ್ಧತೆಯನ್ನು ಒತ್ತಿ ಹೇಳುತ್ತದೆ.

ಹಲವು ದೇಶಗಳ ರಾಜಕೀಯ ನಾಯಕರು ಲೋಕಸಭಾ ಚುನಾವಣೆಯ ಸಮಯದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಚುನಾವಣೆಯ ಪ್ರಮಾಣವನ್ನು ಗಮನಿಸಲು ಮತ್ತು ಪಕ್ಷದ ಪ್ರಚಾರ ತಂತ್ರಗಳನ್ನು ಅರ್ಥಮಾಡಿಕೊಳ್ಳಲು ಬಿಜೆಪಿಯಿಂದ ಆಹ್ವಾನಿಸಲಾಗಿದೆ.

ಒಟ್ಟು 25 ರಾಜಕೀಯ ಪಕ್ಷಗಳಿಗೆ ಬಿಜೆಪಿ ಆಹ್ವಾನ ನೀಡಿದೆ. ಅದರಲ್ಲಿ ಸುಮಾರು 13 ಪಕ್ಷಗಳ ನಾಯಕರು ಚುನಾವಣೆ ವೀಕ್ಷಿಸಲು ಭಾರತಕ್ಕೆ ಬರಲು ಒಪ್ಪಿಗೆ ನೀಡಿದ್ದಾರೆ.

ಗಮನಾರ್ಹವಾಗಿ, ಅಮೆರಿಕದ ಎರಡು ಪ್ರಮುಖ ಪಕ್ಷಗಳಾದ ಡೆಮೋಕ್ರಾಟ್‌ ಮತ್ತು ರಿಪಬ್ಲಿಕನ್‌ ನ ನಾಯಕರಿಗೆ ಆಹ್ವಾನಿಸಲಾಗಿಲ್ಲ. ಯುಎಸ್ ಪಕ್ಷಗಳ ಸ್ವಂತ ಅಧ್ಯಕ್ಷೀಯ ಚುನಾವಣೆಗಳು ನಡೆಯುತ್ತಿದೆ, ಅವುಗಳ ಸಾಂಸ್ಥಿಕ ರಚನೆಯು ಭಾರತೀಯ ಅಥವಾ ಯುರೋಪಿಯನ್ ಪಕ್ಷಗಳಿಗಿಂತ ಗಮನಾರ್ಹವಾಗಿ ಭಿನ್ನವಾಗಿದೆ ಎಂದು ಬಿಜೆಪಿ ನಾಯಕರೊಬ್ಬರು ವಿವರಿಸಿದರು.

Advertisement

ಯುಕೆಯ ಕನ್ಸರ್ವೇಟಿವ್ ಮತ್ತು ಲೇಬರ್ ಪಕ್ಷಗಳು ಹಾಗೂ ಜರ್ಮನಿಯ ಕ್ರಿಶ್ಚಿಯನ್ ಡೆಮಾಕ್ರಟ್‌ಗಳು ಮತ್ತು ಸೋಶಿಯಲ್ ಡೆಮಾಕ್ರಟ್‌ ಪಕ್ಷಗಳನ್ನು ಬಿಜೆಪಿ ಆಹ್ವಾನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next