Advertisement

ಲೋಕ ಸಮರ: ಗಮನ ಸೆಳೆಯಲಿವೆ 30 ಸಖಿ ಮತಗಟ್ಟೆ

09:22 PM Apr 17, 2019 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಮತದಾರರನ್ನು ಮತದಾನಕ್ಕೆ ಉತ್ತೇಜಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಬರೋಬ್ಬರಿ 30 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಮತಗಟ್ಟೆಗಳಿಗೆ ತಳಿರು, ತೋರಣ ಕಟ್ಟಿ ಮಹಿಳಾ ಮತದಾರರ ಸ್ವಾಗತಕ್ಕೆ ಭವ್ಯವಾಗಿ ಸಿದ್ಧಪಡಿಸಲಾಗಿದೆ.

Advertisement

ಈ ಹಿಂದೆ ಹಲವು ಚುನಾವಣೆಗಳಲ್ಲಿ ಮತದಾರರನ್ನು ಸೆಳೆಯಲು ಪಿಂಕ್‌ ಮತಗಟ್ಟೆಗಳಾಗಿ ಚುನಾವಣಾ ಆಯೋಗ ಸ್ಥಾಪಿಸಲಾಗುತ್ತಿತ್ತು. ಆದರೆ ತೆಲಂಗಾಣದ ಟಿಆರ್‌ಎಸ್‌ ಬಾವುಟ ಪಿಂಕ್‌ ಕಲರ್‌ ಇದ್ದ ಕಾರಣ ಕೇಂದ್ರ ಚುನಾವಣಾ ಆಯೋಗ ಪಿಂಕ್‌ ಮತಗಟ್ಟೆಗಳನ್ನು ರದ್ದುಗೊಳಿಸಿ ಸಖಿ ಮತಗಟ್ಟೆಗಳ ಸ್ಥಾಪನೆಗೆ ಮುಂದಾಗಿದ್ದು,

-ಚಿಕ್ಕಬಳ್ಳಾಪುರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ ಒಟ್ಟು 30 ಸಖಿ ಮತಗಟ್ಟೆಗಳನ್ನು ಸ್ಥಾಪಿಸಿ ಮತಗಟ್ಟೆಗಳಿಗೆ ಪಿಆರ್‌ಒ, ಎಪಿಆರ್‌ಒಯಿಂದ ಹಿಡಿದು ಭದ್ರತಾ ಸಿಬ್ಬಂದಿಯನ್ನು ಸಹ ಮಹಿಳೆಯರನ್ನು ನೇಮಿಸಲಾಗಿದೆ.

ಚಿಕ್ಕಬಳ್ಳಾಪುರ: ವಿಧಾನಸಭಾ ಕ್ಷೇತ್ರದಲ್ಲಿ ಬಚ್ಚಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ನಂದಿ ಸರ್ಕಾರಿ ಪ್ರೌಢ ಶಾಲೆ, ಮುನಿಸಿಪಾಲ್‌ ನರ್ಸರಿ ಶಾಲೆ, ಜಿಎನ್‌ಹೆಚ್‌ಪಿಎಸ್‌ ಟಿಜಿ ಟ್ಯಾಂಕ್‌ ರಸ್ತೆ, ಚಿಕ್ಕಬಳ್ಳಾಪುರ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ, ಚಿಕ್ಕಬಳ್ಳಾಫ‌ುರ ನಗರಸಭೆ ಮತಗಟ್ಟೆ.

ಚಿಂತಾಮಣಿ: ವಿಧಾನಸಭಾ ಕ್ಷೇತ್ರದಲ್ಲಿ ತಿಮ್ಮಸಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಬಿಸಿಎಂ ಹಾಸ್ಟೆಲ್‌, ಬೊಂಬು ಬಜರ್‌, ಚಿಂತಾಮಣಿ ನಗರದ ಆಗ್ರಹಾರ ಹಾಗೂ ಕುರುಟಹಳ್ಳಿ.

Advertisement

ಶಿಡ್ಲಘಟ್ಟ: ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದಾರ್ಥ ನಗರದ ಸ.ಹಿ.ಪ್ರಾ.ಶಾಲೆಯ ಎರಡು ಮತಗಟ್ಟೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ.ಹಿ.ಪ್ರಾ. ಶಾಲೆ ಉಲ್ಲೂರುಪೇಟೆ, ಹರಳಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

ಗೌರಿಬಿದನೂರು: ವಿಧಾನಸಭಾ ಕ್ಷೇತ್ರದ ವಾಟದಹೊಸಹಳ್ಳಿಯ ಸ.ಹಿ.ಪ್ರಾ.ಶಾಲೆ, ಹಿರೇಬಿದನೂರು ಸ. ಪ್ರೌಢ ಶಾಲೆ, ನಗರಸಭಾ ಸಭಾಂಗಣ, ಹೊಸೂರು ಮಾದರಿ ಸ.ಹಿ.ಪ್ರಾ. ಶಾಲೆ.

ಬಾಗೇಪಲ್ಲಿ: ವಿಧಾನಸಭಾ ಕ್ಷೇತ್ರದಲ್ಲಿ ದೇವರಗುಡಿಪಲ್ಲಿ, ಬಾಗೇಪಲ್ಲಿ ಪಟ್ಟಣದಲ್ಲಿ ಮತಗಟ್ಟೆ ಸಂಖ್ಯೆ 20, 15, 02 ಹಾಗೂ ಗುಡಿಬಂಡೆ ಪಟ್ಟಣದ 08 ಹಾಗೂ 04 ರಲ್ಲಿ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮಹಿಳಾ ಮತದಾರರೇ ಹೆಚ್ಚು: ಚಿಕ್ಕಬಳ್ಳಾಪುರ ಜಿಲ್ಲೆಯ ಮಟ್ಟಿಗೆ ಮತದಾರರ ಸಂಖ್ಯೆಯಲ್ಲಿ ಗಮನಿಸಿದರೆ ಜಿಲ್ಲೆಯ ಒಟ್ಟಾರೆ ಪುರುಷ ಮತದಾರರಿಗಿಂತ ಮಹಿಳಾ ಮತದಾರರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ.

ಜಿಲ್ಲೆಯಲ್ಲಿ ಪುರುಷ ಮತದಾರರು 5,05,104 ಇದ್ದರೆ ಮಹಿಳಾ ಮತದಾರರು 5,06,488 ಮಂದಿ ಇದ್ದಾರೆ. ಆಪೈಕಿ ಗೌರಿಬಿದನೂರು, ಬಾಗೇಪಲ್ಲಿ ಹಾಗೂ ಚಿಕ್ಕಬಳ್ಳಾಪುರ ತಾಲೂಕುಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಅಧಿಕವಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next