Advertisement
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಬೆಂಬಲಿತ ಎನ್‌ಡಿಎ ಅಭ್ಯರ್ಥಿಯಾಗಿ ಮಾಜಿ ಸಚಿವ ವಿ.ಸೋಮಣ್ಣ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡರು ಕಣದಲ್ಲಿದ್ದಾರೆ.
Related Articles
Advertisement
ತುಮಕೂರು ಲೋಕಸಭಾ ಕ್ಷೇತ್ರ ಈ ಹಿಂದೆ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಅದನ್ನು ಉಳಿಸಿಕೊಳ್ಳಲು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಜಿ.ಪರಮೇಶ್ವರ್ ಮತ್ತು ಸಹಕಾರ ಸಚಿವ ಕೆ.ಎನ್.ರಾಜಣ್ಣ ತೀವ್ರ ಪ್ರಯತ್ನ ಪಡುತ್ತಿದ್ದು, ನಮ್ಮ ಸರಕಾರ ಗ್ಯಾರಂಟಿ ಯೋಜನೆ ನಮಗೆ ಹೆಚ್ಚು ನೆರವಾಗುತ್ತವೆ ಎನ್ನುವ ವಿಶ್ವಾಸದಿಂದ ಪ್ರಚಾರ ಮಾಡುತ್ತಿದ್ದಾರೆ. ಜತೆಗೆ ಈ ಹಿಂದೆ ಸಂಸತ್ ಸದಸ್ಯರಾಗಿ ಕ್ಷೇತ್ರದಲ್ಲಿ ಮಾಡಿರುವ ಕೆಲಸ ನನ್ನ ಕೈಹಿಡಿ ಯಲಿವೆ ಎನ್ನುವ ವಿಶ್ವಾಸವನ್ನು ಮುದ್ದಹನುಮೇಗೌಡ ಹೊಂದಿ ದ್ದಾರೆ. ಒಟ್ಟಾರೆಯಾಗಿ ಎರಡು ಪ್ರಬಲ ಜಾತಿಗಳ ಮುಖಂಡರು ಚುನಾವಣ ರಣರಂಗದಲ್ಲಿ ಸೆಣಸುತ್ತಿದ್ದಾರೆ. ಇಬ್ಬರಿಗೂ ತಮ್ಮದೇ ಆದ ವೋಟ್‌ಬ್ಯಾಂಕ್ ಇದ್ದು ಸಮಬಲದ ಹೋರಾಟ ನಡೆಯುತ್ತಿದೆ. ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿ ಆಗಿರುವ ಮಾಧು ಸ್ವಾಮಿ ತಟಸ್ಥರಾಗಿದ್ದಾರೆ ಎನ್ನಲಾಗಿದ್ದು, ಇದು ಚುನಾವಣೆ ಮೇಲೆ ಯಾವ ಪರಿಣಾಮ ಬೀರುತ್ತದೆ ಎನ್ನುದನ್ನು ಕಾದು ನೋಡಬೇಕು.
ಈ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಮತಗಳೇ ನಿರ್ಣಯವಾಗಲಿದ್ದು ಯಾರಿಗೆ ಹೆಚ್ಚು ಹಿಂದುಳಿದ ವರ್ಗಗಳ ಮತ ಪಡೆಯುತ್ತಾರೋ ಅವರಿಗೆ ಗೆಲುವು ಸುಲಭವಾಗಲಿದೆ.
ತುಮಕೂರನ್ನು 2ನೇ ವಾರಾಣಸಿ ರೀತಿಯಲ್ಲಿ ಅಭಿವೃದ್ಧಿ ಮಾಡಲು ಜನ ನನ್ನನ್ನು ಆಶೀರ್ವದಿಸುವ ನಂಬಿಕೆ ಇದೆ, ನನೆಗುದಿಗೆ ಬಿದ್ದಿ ರುವ ರೈಲ್ವೇ ನೀರಾವರಿ, ಕೈಗಾ ರಿಕೆಗೆ ಒತ್ತು ನೀಡಿ, ಕೊಬ್ಬರಿಗೆ ಬೆಂಬಲ ಬೆಲೆ ಕೊಡಿಸುವೆ. ●ವಿ.ಸೋಮಣ್ಣ ಬಿಜೆಪಿ
ಅಭ್ಯರ್ಥಿ ನಾನು ಹೊರಗಿನಿಂದ ಬಂದಿಲ್ಲ. ಇಲ್ಲೇ ವಾಸವಾ ಗಿದ್ದೇನೆ. ನಾನು ಹಿಂದೆ ಸಂಸದನಾಗಿದ್ದಾಗ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸಂಸತ್‌ನಲ್ಲಿ ಚರ್ಚೆ ಮಾಡಿದ್ದೇನೆ. ಈಗಲೂ ಜಿಲ್ಲೆಯ ಕೊಬ್ಬರಿ ಬೆಳೆಗಾರರ ಧ್ವನಿಯಾಗಿ ಕೆಲಸ ಮಾಡುತ್ತೇನೆ. ●ಮುದ್ದಹನುಮೇಗೌಡ ಕಾಂಗ್ರೆಸ್ ಅಭ್ಯರ್ಥಿ
-ಚಿ.ನಿ.ಪುರುಷೋತ್ತಮ್