Advertisement
ಮಧ್ಯಾಹ್ನ 02 ಗಂಟೆಯವರೆಗೆ ಒಟ್ಟಾರೆಯಾಗಿ 39.74% ಮತದಾನವಾಗಿದೆ.
– ಸಮಾಜ ಸೇವಕ ಸುನಿಲ್ ವರ್ಮಾ ಎಂಬವರ ಮುಂದಾಳತ್ವದಲ್ಲಿ ನವದೆಹಲಿಯ ದ್ವಾರಕಾ ಸೆಕ್ಟರ್ 7ರ ಜಾಗೃತ ಮತದಾರರು ರಾಂ ಪಾಲ್ ಚೌಕದಲ್ಲಿ ಜೊತೆಗೂಡಿ ಎಲ್ಲರಿಗೂ ಮತದಾನ ಮಾಡುವಂತೆ ಪ್ರೇರೇಪಿಸುವ ಅಭಿಯಾನವನ್ನು ಕೈಗೊಂಡಿದ್ದರು.
Related Articles
Advertisement
– ನವದೆಹಲಿಯ ಲೋಧಿ ಎಸ್ಟೇಟ್ ಬಳಿ ಇರುವ ಸರ್ದಾರ್ ಪಟೇಲ್ ವಿದ್ಯಾಲಯದ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಗಾಂಧಿ ಅವರು ಪತಿ ರಾಬರ್ಟ್ ವಾದ್ರಾ ಅವರೊಂದಿಗೆ ಆಗಮಿಸಿ ಮತದಾನ ಮಾಡಿದರು.
– ಘಟಾಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾರತಿ ಘೋಷ್ ಅವರ ಮೇಲೆ ಸ್ಥಳೀಯರು ಹಲ್ಲೆಗೆ ಮುಂದಾದಾಗ ಅವರ ಖಾಸಗಿ ಅಂಗರಕ್ಷಕರು ನಾಲ್ಕು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ವರದಿಯಾಗಿದೆ. ಈ ಘಟನೆಯಲ್ಲಿ ತಮ್ಮ ಕಾರ್ಯಕರ್ತರೊಬ್ಬರಿಗೆ ಗಾಯಗಳಾಗಿದೆ ಎಂದು ಟಿಎಂಸಿ ಆರೋಪಿಸಿದೆ. ಗಾಯಾಳು ಕಾರ್ಯಕರ್ತನನ್ನು ಮೇದಿನೀಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
– ಪಶ್ಚಿಮ ಬಂಗಾಲದ ಕಾಂತಿ ಲೋಕ ಸಭಾ ಕ್ಷೇತ್ರದಲ್ಲಿನ ಮತದಾನ ಕೇಂದ್ರವೊಂದರಲ್ಲಿ ಬಿಜೆಪಿ ಏಜೆಂಟ್ ಗೆ ಥಳಿಸಲಾಗಿದೆ ಮತ್ತು ಆತನನ್ನು ಮತದಾನ ಕೇಂದ್ರದಿಂದ ಬಲವಂತವಾಗಿ ಹೊರ ಹಾಕಲಾಗಿದೆ ಎಂದು ವರದಿಯಾಗಿದೆ. ಬಿಜೆಪಿ ಬೆಂಬಲಿಗರ ಮತದಾನ ಗುರುತಿನ ಚೀಟಿಯನ್ನು ಕಸಿದುಕೊಳ್ಳಲಾಗಿದೆ ಎಂಬ ಆರೋಪವೂ ಕೇಳಿಬರುತ್ತಿದೆ.
– ವಿದೇಶಾಂಗ ಸಚಿವೆ ಹಾಗೂ ಭಾರತೀಯ ಜನತಾ ಪಕ್ಷದ ನಾಯಕಿ ಶ್ರೀಮತಿ ಸುಷ್ಮಾ ಸ್ವರಾಜ್ ಅವರು ನವದೆಹಲಿಯ ಔರಂಗಜೇಬ್ ರಸ್ತೆಯಲ್ಲಿರುವ ಎನ್.ಪಿ. ಸೀನಿಯರ್ ಸೆಕೆಂಡರಿ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು.