Advertisement
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ| ಉಮೇಶ ಎಂ. ಅಡಿಗ ಮಾರ್ಗದರ್ಶನದಲ್ಲಿ ಲೋಕ್ ಅದಾಲತ್ ನಡೆಯಿತು. ಲೋಕ ಅದಾಲತ್ ಅನ್ನು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಆಯೋಜಿಸಲಾಗಿತ್ತು.
Related Articles
Advertisement
ಧಾರವಾಡ: ರಾಷ್ಟ್ರೀಯ ಲೋಕ ಅದಾಲತ್ ಅಂಗವಾಗಿ ಇಲ್ಲಿನ ಹೈಕೋರ್ಟ್‌ನಲ್ಲಿ ಒಟ್ಟು 221 ಪ್ರಕರಣಗಳಲ್ಲಿ 4 ಕೋಟಿ ರೂ.ಗೂ ಅಧಿಕ ಮೊತ್ತದ ಪರಿಹಾರ ಲಭಿಸುವಂತೆ ಇತ್ಯರ್ಥಪಡಿಸಲಾಯಿತು.
ಹಿರಿಯ ನ್ಯಾಯಮೂರ್ತಿಗಳಾದ ಕೆ.ಎಸ್. ಮುದಗಲ್, ಪ್ರತಿಪಸಿಂಗ್ ಏರೂರ್, ಎಂ.ಜಿ.ಎನ್.ಅದಾಲತ್‌ನ ಸದಸ್ಯರಾದ ಎಂ.ಟಿ. ಬಂಗಿ, ಡಿ.ಎಲ್. ಲಾಡ್‌ಖಾನ್ ಮತ್ತು ಎಂ.ಸಿ.ಹುಕ್ಕೇರಿ ಅವರನ್ನೊಳಗೊಂಡ ಮೂರು ಪೀಠಗಳಲ್ಲಿ ಒಟ್ಟು 1227 ಪ್ರಕರಣಗಳನ್ನು ವಿಚಾರಣೆಗೆ ಗುರುತಿಸಿಕೊಂಡು ಅವುಗಳ ಪೈಕಿ 221 ಪ್ರಕರಣಗಳನ್ನು 4,45,53,063 ರೂ. ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು.
ನ್ಯಾ| ಎಂ.ಜಿ.ಎಸ್.ಕಮಾಲ್ ಹಾಗೂ ಎಂ.ಸಿ. ಹುಕ್ಕೇರಿ ಅವರನ್ನೊಳಗೊಂಡ ಅದಾಲತ್ ಪೀಠವು ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ 30 ವರ್ಷಗಳ ಹಳೆಯದಾದ ದಿವಾಣಿ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಉಭಯ ಪಕ್ಷಗಾರರ ಸಮಕ್ಷಮ ಇತ್ಯರ್ಥಪಡಿಸಿರುವುದು ವಿಶೇಷವಾಗಿದೆ.
ಇದರಿಂದ ಉಭಯ ಪಕ್ಷಗಾರರಿಗೆ ತುಂಬಾ ಅನುಕೂಲವಾಗಿದ್ದು, ವ್ಯಾಜ್ಯ ಮುಕ್ತರಾಗಿದ್ದಾರೆ ಎಂದು ಹೈಕೋರ್ಟ್‌ನ ನ್ಯಾಯಾಂಗದ ಅಧಿಕ ಲೇಖನಾಧಿಕಾರಿ ಮತ್ತು ಉಚ್ಚ ನ್ಯಾಯಾಲಯ ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ವೆಂಕಟೇಶ ಹುಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.