Advertisement

ಲೋಕ ಅದಾಲತ್‌: ಪೂರ್ವಭಾವಿ ಸಭೆ

01:36 PM Dec 11, 2021 | Team Udayavani |

ಲಿಂಗಸುಗೂರು: ಡಿ.18ರಂದು ನಡೆಯುವ ಲೋಕ ಅದಾಲತ್‌ ನಿಮಿತ್ತ ಪಟ್ಟಣದ ಜೆಎಂಎಫ್‌ಸಿಯಲ್ಲಿ ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಧೀಶ ಚಂದ್ರಶೇಖರ್‌ ದಿದ್ದಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

Advertisement

ಸಭೆಯಲ್ಲಿ ನ್ಯಾಯಾಧೀಶ ಚಂದ್ರಶೇಖರ್‌ ದಿದ್ದಿ ಮಾತನಾಡಿ, ದೀರ್ಘ‌ಕಾಲದಿಂದ ಇರುವ ಕೆಲವು ಪ್ರಕರಣಗಳನ್ನು ಎರಡು ಪಕ್ಷಗಳ ರಾಜೀ ಸಂಧಾನ ಮೂಲಕ ಪ್ರಕರಣಗಳನ್ನು ಇತ್ಯರ್ಥ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಲೋಕ ಅದಾಲತ್‌ ನಡೆಸಲಾಗುತ್ತಿದೆ.

ಮಸ್ಕಿ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಮಗು ಜನನವಾದ ಕೂಡಲೇ ಸಂಬಂಧಿಸಿದ ಪುರಸಭೆ ಅಥವಾ ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿ ಒದಗಿಸಿ ಜನನ ಪ್ರಮಾಣ ಪತ್ರ ತ್ವರಿತಗತಿಯಲ್ಲಿ ಪೂರೈಸಬೇಕಾಗಿದೆ. ಈ ಬಗ್ಗೆ ಕೂಡಲೇ ನಿಗಾವಹಿಸಿ ಕೆಲಸ ಮಾಡುವಂತೆ ಮಸ್ಕಿ ಪುರಸಭೆ ಸಿಬ್ಬಂದಿಗೆ ಸೂಚನೆ ನೀಡಿದರು.

ಪ್ರಧಾನ ಸಿವಿಲ್‌ ನ್ಯಾಯಾಧೀಶ ವಿನಾಯಕ ಮಾಯಣ್ಣನವರ, ಹೆಚ್ಚುವರಿ ನ್ಯಾಯಾಧೀಶ ದೇಶಮುಖ ಶಿವಕುಮಾರ, ಡಿವೈಎಸ್‌ಪಿ ಎಸ್‌. ಎಸ್‌. ಹುಲ್ಲೂರು, ಸಿಪಿಐಗಳಾದ ಮಹಾಂತೇಶ ಸಜ್ಜನ್‌, ಪ್ರಕಾಶ ಮಾಳಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.