Advertisement
ಲೋಕ ಅದಾಲತ್ ನಲ್ಲಿ ಒಟ್ಟೂ 2887 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅದರಲ್ಲಿ ಅರ್ಧಕ್ಕಿಂತ ಹೆಚ್ಚಿನ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದ್ದು, ನ್ಯಾಯಾಲಯದ 5 ವಿಭಾಗದಿಂದ ಇಷ್ಟು ಪ್ರಕರಣಗಳಿಗೆ ಅಂತ್ಯ ಮಾಡಲಾಯಿತು.
ಇನ್ನು ಲೋಕ ಅದಾಲತ್ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಯನ್ನು ಒಂದು ಮಾಡಿದ ವಿಶೇಷ ಪ್ರಕರಣಕ್ಕೆ ಸಾಕ್ಷಿಯಾಯಿತು. ಕಳೆದ 2 ವರ್ಷಗಳಿಂದ ಭಿನ್ನಾಭಿಪ್ರಾಯ ಮೂಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿಗಳನ್ನು ನ್ಯಾಯಾಧೀಶ ರಾಜು ಶೇಡಬಾಳ್ಕರ್, ವಕೀಲರಾದ ಎಸ್.ಎನ್.ನಾಯ್ಕ, ಬಸವರಾಜ ಹಿರೇಮಠ ಸಮ್ಮುಖದಲ್ಲಿ ರಾಜೀ ಮಾಡಿ ಒಟ್ಟಿಗೆ ದಾಂಪತ್ಯ ನಡೆಸುವಂತೆ ತಿಳಿ ಹೇಳಲಾಯಿತು. ಲೋಕ ಅದಾಲತ್ ನಲ್ಲಿ ನ್ಯಾಯಾಧೀಶರಾದ ರಾಜು ಶೇಡಬಾಳ್ಕರ್, ಜಗದೀಶ್ ವಿ, ಕಮಲಾಕ್ಷ ಡಿ, ಅಭಿಷೇಕ ಜೋಶಿ ಪಾಲ್ಗೊಂಡಿದ್ದರು. ಶನಿವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಅದಾಲತ್ ನಡೆಯಿತು.
Related Articles
Advertisement