Advertisement

ಒಂದೇ ದಿನ 5,287 ಪ್ರಕರಣ ಇತ್ಯರ್ಥ

05:34 PM Mar 29, 2021 | Team Udayavani |

ಕಾರವಾರ: ಜಿಲ್ಲೆಯ 24 ನ್ಯಾಯಾಂಗ ಪೀಠಗಳಲ್ಲಿ ನಡೆದ ಮೆಗಾ ಲೋಕ್‌ ಅದಾಲತ್‌ ಯಶಸ್ವಿಯಾಗಿದೆ.5287 ಪ್ರಕರಣಗಳು ಇತ್ಯರ್ಥವಾಗಿದ್ದು, ನ್ಯಾಯಕ್ಕಾಗಿಅಲೆಯುತ್ತಿದ್ದವರಿಗೆ ನ್ಯಾಯಸಿಕ್ಕಿದ್ದು, ಕೋರ್ಟ್‌ಮೆಟ್ಟಿಲು ಹತ್ತಿದ ಹಲವರು ಸಮಾಧಾನದ ನಿಟ್ಟುಸಿರು ಬಿಟ್ಟರು.

Advertisement

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಗಳ ಅಡಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆಲೋಕ ಅದಾಲತ್‌ನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.ಜಿಲ್ಲೆಯಾದ್ಯಾಂತ ಒಟ್ಟು 60 ವ್ಯಾಜ್ಯ ಪೂರ್ವ ಪ್ರಕರಣಗಳು ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ 9535 ಪ್ರಕರಣಗಳನ್ನು ಸಂಧಾನಕ್ಕೆಪರಿಗಣಿಸಲಾಯಿತು. ಅವುಗಳಲ್ಲಿ 16 ವ್ಯಾಜ್ಯ ಪೂರ್ವ ಪ್ರಕರಣಗಳು ಹಾಗೂ ನ್ಯಾಯಾಲಯಗಳಲ್ಲಿ ಬಾಕಿಇರುವ 5271 ಪ್ರಕರಣಗಳು ಸೇರಿದಂತೆ 5287 ಪ್ರಕರಣಗಳನ್ನು ಸ್ಥಳದಲ್ಲೇ ಇತ್ಯರ್ಥ ಪಡಿಸಲಾಯಿತು. ನೀರಿನ ಹಾಗೂ ಇತರ ಶುಲ್ಕಗಳಿಗೆ ಸಂಬಂಧಿಸಿದಂತೆ 50 ಪ್ರಕರಣಗಳಲ್ಲಿ 15ನ್ನು ಸಂಧಾನ ಮಾಡಲಾಯಿತು.

ಇತರೆ ಸಿವಿಲ್‌ ಪ್ರಕರಣಗಳಲ್ಲಿ ಹತ್ತನ್ನು ಗುರುತಿಸಲಾಗಿತ್ತು. ಅವುಗಳಲ್ಲಿ 1 ಪ್ರಕರಣ ಇತ್ಯರ್ಥವಾಯಿತು. 241 ರಾಜಿಯಾಗಬಲ್ಲ ಅಪರಾಧ ಪ್ರಕರಣಗಳಲ್ಲಿ 68 ಪ್ರಕರಣ ಇತ್ಯರ್ಥವಾಯಿತು. ಪರಿಹಾರದ ರಕಂಆಗಿ 3,17,756 ರೂ. ಪರಿಹಾರ ನೀಡಲಾಯಿತು. ಚೆಕ್‌ ಅಮಾನ್ಯದ 1970 ಪ್ರಕರಣಗಳಲ್ಲಿ 441ನ್ನು ಬಗೆ ಹರಿಸಲಾಯಿತು. ಇವುಗಳಲ್ಲಿ ಸಂಬಂಧಿತರಿಗೆ 6,39,50,002.00 ರೂ.ಪರಿಹಾರದ ರಕಂ ನೀಡಲಾಯಿತು. 84 ಬ್ಯಾಂಕ್‌ ಪ್ರಕರಣಗಳ ಪೈಕಿ , 27ನ್ನು ಇತ್ಯರ್ಥ ಮಾಡಲಾಯಿತು. 484 ಮೋಟಾರವಾಹನ ಪ್ರಕರಣಗಳಲ್ಲಿ 96 ಪ್ರಕರಣ ಇತ್ಯರ್ಥವಾದವು. ಇವುಗಳಿಗೆ ಪರಿಹಾರವಾಗಿ 2,88,89,867.00 ಪರಿಹಾರ ನೀಡಲಾಯಿತು.

48 ವೈವಾಹಿಕ ಕುಟುಂಬ ನ್ಯಾಯಾಲಯ ಪ್ರಕರಣಗಳಲ್ಲಿ 7ನ್ನು ಪರಿಹರಿಸಲಾಯಿತು. 1801 ಇತರೆ ಸಿವಿಲ್‌ ಪ್ರಕರಣಗಳಲ್ಲಿ 400 ಪ್ರಕರಣಗಳಲ್ಲಿ ನ್ಯಾಯದಾನ ನೀಡಲಾಯಿತು. ಇವುಗಳಿಗೆ 6,68,87,941.00 ರೂ.ಪರಿಹಾರ ನೀಡಲಾಯಿತು. 4871 ಕ್ರಿಮಿನಲ್‌ ವ್ಯಾಜ್ಯಗಳಲ್ಲಿ 4232 ಪ್ರಕರಣಗಳಲ್ಲಿ ನ್ಯಾಯದಾನ ಮಾಡಲಾಯಿತು. ಈ ಎಲ್ಲ ಪ್ರಕರಣಗಳಲ್ಲಿ ಒಟ್ಟು 16.81 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಪರಿಹಾರ ರಖಂ ನೀಡಿ, ರಾಜಿ ಮಾಡಲಾಗಿದೆ.

ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ. ಗೋವಿಂದಯ್ಯ ಮಾಹಿತಿ ನೀಡಿದ್ದಾರೆ. ಜಿಲ್ಲಾ ನ್ಯಾಯಾಧೀಶ ಸಿ. ರಾಜಶೇಖರ್‌, ವಿವಿಧ ಪ್ರಕರಣಗಳಿಗೆ ಸಂಬಂಧಿಸಿದ ವಕೀಲರು, ಸರ್ಕಾರಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳು ಈ ವೇಳೆ ಇದ್ದರು. ನ್ಯಾಯದಾನ ಹಾಗೂ ಲೋಕ್‌ ಅದಾಲತ್‌ಗೆ ಸಹಕರಿಸಿದ ಎಲ್ಲ ವಕೀಲರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸ್ಮರಿಸಿಕೊಂಡಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next